• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಿನಲ್ಲಿ ಆರಂಭವಾಗಲಿದೆ ನೀರಿನ ಮಹತ್ವ ಸಾರುವ ವಾಶ್ ಪಾರ್ಕ್

|

ಮೈಸೂರು, ಜೂನ್ 1: ಜಲ ಸಂರಕ್ಷಣೆ ಕುರಿತು ಎಷ್ಟೇ ಅರಿವು ಮೂಡಿಸಲು ಮುಂದಾದರೂ ಜನರು ತಲೆಕೆಡಿಸಿಕೊಳ್ಳುವುದಿಲ್ಲ. ಹಾಗಾಗಿ ನೀರಿನ ರಕ್ಷಣೆ, ಅಗತ್ಯತೆ ಮತ್ತು ಸ್ವಚ್ಛತೆ ಕುರಿತಾಗಿ ಅತ್ಯಾಧುನಿಕ ತಂತ್ರಜ್ಞಾನದೊಂದಿಗೆ ಜನರಲ್ಲಿ ಅರಿವು ಮೂಡಿಸುವ ಸಲುವಾಗಿ ಅತ್ಯಾಧುನಿಕ ವಾಶ್ ಪಾರ್ಕ್‌ ಮೈಸೂರಿನಲ್ಲಿ ಆರಂಭಗೊಳ್ಳಲಿದೆ.

ಮೈಸೂರಿನಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ ಮೊಬೈಲ್ ಟವರ್ ದಂಧೆ

ಕೇಂದ್ರ ನಗರಾಭಿವೃದ್ಧಿ ಸಚಿವಾಲಯದ ಅಂಗಸಂಸ್ಥೆಯಾಗಿರುವ ನಗರ ವ್ಯವಹಾರಗಳ ರಾಷ್ಟ್ರೀಯ ಸಂಸ್ಥೆ ಮತ್ತು ಮೈಸೂರು ಮಹಾನಗರ ಪಾಲಿಕೆ ಈ ಯೋಜನೆ ಕೈಗೆತ್ತಿಕೊಳ್ಳಲಿದೆ. ಈ ಪಾರ್ಕ್ ವಿಜಯನಗರ ಮೂರನೇ ಹಂತದಲ್ಲಿ ಶುರುವಾಗಲಿದೆ. ನವದೆಹಲಿಯ ಸಿಜಿಒ ಕಾಂಪ್ಲೆಕ್ಸ್‌ನಲ್ಲಿ ಸ್ವಚ್ಛ ಭಾರತ್‌ ಸ್ಯಾನಿಟೇಶನ್ ಪಾರ್ಕ್‌ ಮಾದರಿಯಲ್ಲೇ ಪಾರ್ಕ್ ವಿನ್ಯಾಸವಾಗಲಿದೆ.

ಮಂಗಳೂರು: ಮಾಯದಂಥಾ ಮಳೆ ಮಾಯವಾಯಿತೆಲ್ಲಿ?

ಈ ಕುರಿತಾಗಿ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತೆ ಶಿಲ್ಪಾ ನಾಗ್, ನೀರು, ನೈರ್ಮಲ್ಯದ ಬಗ್ಗೆ ಸಮಗ್ರ ಮಾಹಿತಿ ನೀಡಲಿರುವ ಪಾರ್ಕ್‌ ಅನ್ನು ಪೀಪಲ್ಸ್‌ ಪಾರ್ಕ್‌ನಲ್ಲಿ ನಿರ್ಮಿಸಲು ಉದ್ದೇಶಿಸಲಾಗಿತ್ತು. ಆದರೆ, ಸ್ಥಳದ ಅಭಾವದಿಂದ ಬೇರೆ ಕಡೆ ನಿರ್ಮಿಸಲಾಗುತ್ತಿದೆ. ಈಗಾಗಲೇ ಮೂಡಾದ ವತಿಯಿಂದ ಜಾಗ ಗುರುತಿಸಲಾಗಿದೆ. ಯೋಜನೆಯ ಡಿಪಿಆರ್ ಸಿದ್ಧವಾಗಿದೆ. 5 ಕೋಟಿ ವೆಚ್ಚದ ಪಾರ್ಕ್‌ ಅನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ (ಪಿಪಿಪಿ) ನಿರ್ಮಿಸಲು ಉದ್ದೇಶಿಸಲಾಗಿದೆ. ಮೈಸೂರಿನಲ್ಲಿ ಶತಮಾನದ ಹಿಂದೆಯೇ ಒಳಚರಂಡಿ ವ್ಯವಸ್ಥೆ ನಿರ್ಮಿಸಲಾಗಿತ್ತು. ಅಂದಿನಿಂದ ಇಂದಿನವರೆಗೆ ನಗರದಲ್ಲಿ ನೈರ್ಮಲ್ಯ ಯೋಜನೆಗೆ ಅನುಸರಿಸುತ್ತಿದ್ದ ವಿಧಾನಗಳನ್ನು ಸ್ಥಳೀಯರಿಗೆ, ಇಲ್ಲಿಗೆ ಭೇಟಿ ನೀಡುವ ಹೊರರಾಜ್ಯಗಳ ಹಾಗೂ ವಿದೇಶಿ ಪ್ರವಾಸಿಗರಿಗೆ ವ್ಯವಸ್ಥಿತ ರೀತಿಯಲ್ಲಿ ತಿಳಿಸಿಕೊಡುವುದು ಪಾರ್ಕ್‌ನ ಉದ್ದೇಶ ಎಂದರು.

ವಾಶ್ ತಂತ್ರಜ್ಞಾನಗಳ ಪ್ರಾತ್ಯಕ್ಷಿಕೆ ಕೇಂದ್ರ, ಕೌಶಲ ಅಭಿವೃದ್ಧಿ ಕೇಂದ್ರ, ವಸ್ತು ಪ್ರದರ್ಶನಾಲಯ, ಬಯಲು ರಂಗಮಂದಿರವನ್ನು ಪಾರ್ಕ್‌ ಒಳಗೊಳ್ಳಲಿದೆ. ಈ ಮೂಲಕ ಆರೋಗ್ಯ ಮತ್ತು ನೈರ್ಮಲ್ಯದ ಬಗ್ಗೆ ಜಾಗೃತಿ ಮೂಡಿಸುವ ಕೆಲಸ ನಡೆಯಲಿದೆ. ಮೈಸೂರಿನಲ್ಲಿ 'ವಾಶ್' ತಂತ್ರಜ್ಞಾನದ ಇತಿಹಾಸ ಮತ್ತು ಅದು ಬೆಳೆದು ಬಂದ ಹಾದಿಯ ಬಗ್ಗೆ ಸಮಗ್ರ ಮಾಹಿತಿ ದೊರೆಯಲಿದೆ. ನೀರು ಸಂರಕ್ಷಣೆ ಬಗ್ಗೆ ಲಭ್ಯವಿರುವ ಹೊಸ ತಂತ್ರಜ್ಞಾನಗಳ ಬಗ್ಗೆ ಅರಿವು ಮೂಡಿಸಲಾಗುತ್ತದೆ.

ಪ್ರಾಣಿ ತ್ಯಾಜ್ಯ ಸಂಸ್ಕರಣೆಗೆ ಮೈಸೂರು ಪಾಲಿಕೆ ಚಿಂತನೆ?

ಪ್ರವಾಸಿ ತಾಣವೆಂದು ಹೆಸರುಪಡೆದುಕೊಂಡಿದ್ದ ಮೈಸೂರು, ಕಳೆದ ಕೆಲ ವರ್ಷಗಳಿಂದ ಸ್ವಚ್ಛನಗರಿ ಎಂಬ ಹೆಸರಿನಿಂದಲೂ ಗುರುತಿಸಿಕೊಂಡಿತ್ತು. ಇದರೊಟ್ಟಿಗೆ ನೈರ್ಮಲ್ಯದ ಬಗ್ಗೆ ನಗರ ಹೊಂದಿರುವ ಕಾಳಜಿಯನ್ನು ಈ ಪಾರ್ಕ್‌ ಬಿಂಬಿಸಲಿದೆ. ಅತ್ಯಾಧುನಿಕ ನಿರ್ಮಾಣಕ್ಕೆ ಮುಡಾಕ್ಕೆ ಸೇರಿರುವ 4.7 ಎಕರೆ ಜಾಗ ಗುರುತಿಸಿದ್ದು, ಅಲ್ಲಿ ಒಂದು ಎಕರೆ ಪ್ರದೇಶದಲ್ಲಿ ಕಟ್ಟಡವನ್ನು ನಿರ್ಮಿಸಲಾಗುತ್ತದೆ. ಇನ್ನುಳಿದ ಜಾಗದಲ್ಲಿ ಪಾರ್ಕಿಂಗ್, ಉದ್ಯಾನವನ ನಿರ್ಮಾಣ ಆಗಲಿದೆ. ನೈರ್ಮಲ್ಯ ಯೋಜನೆಗೆ ಸಂಬಂಧಿಸಿದಂತೆ ಹೊಸ ತಂತ್ರಜ್ಞಾನಗಳು ಬರುತ್ತಲೇ ಇರುತ್ತವೆ. ಅವುಗಳ ಬಗ್ಗೆ ತರಬೇತಿ, ಕಾರ್ಯಾಗಾರ ನಡೆಸುವ ಸೌಲಭ್ಯವನ್ನೂ ಇಲ್ಲಿ ಕಲ್ಪಿಸಲಾಗುತ್ತದೆ. ಮೈಸೂರಿಗೆ ಬರುವ ಪ್ರವಾಸಿಗರಿಗೆ ಭೇಟಿ ನೀಡಲು ಹೊಸ ಜಾಗ ಇದಾಗಲಿದೆ.

English summary
New technology Wash Park will start soon at Mysuru city. In park Water, sanitation and hygiene awareness education will be given to people.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X