ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಿನಲ್ಲಿ 18 ಕೋಟಿ ರೂಪಾಯಿ ಬೆಲೆಯ ಶ್ವಾನ ಪ್ರದರ್ಶನ

|
Google Oneindia Kannada News

ಮೈಸೂರು, ಜನವರಿ 7: ನಗರದ ಕೆನೈನ್ ಕ್ಲಬ್ ಆಫ್ ಮೈಸೂರು ಸಂಘದ ವತಿಯಿಂದ ಜ.13ರಂದು ರಾಷ್ಟ್ರೀಯ ಮಟ್ಟದ ಶ್ವಾನ ಪ್ರದರ್ಶನ ಹಮ್ಮಿಕೊಳ್ಳಲಾಗಿದೆ ಎಂದು ಕ್ಲಬ್ ಅಧ್ಯಕ್ಷ ಬಿ.ಪಿ.ಮಂಜುನಾಥ್ ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಗ್ಗೆ 9.30ಕ್ಕೆ ಕಾರ್ಯಕ್ರಮ ಉದ್ಘಾಟನೆಯಾಗಲಿದೆ. ನಂತರ ಶ್ವಾನ ಪ್ರದರ್ಶನ ನಡೆಯಲಿದೆ. 3 ಕೆಜಿ ತೂಕವಿರುವ ಮಿನಿ ಎಚ್ಚರ್ ಪಿಂಚರ್ ನಿಂದ ನೂರು ಕೆಜಿಗೂ ಅಧಿಕ ತೂಕದ ಶ್ವಾನಗಳ ಪ್ರದರ್ಶನವಿರಲಿದೆ ಎಂದರು.

ಬೆಂಗಳೂರಲ್ಲೊಂದು ಡಾಗ್ ಪಾರ್ಕ್: ಇಲ್ಲಿ ಮನುಷ್ಯರೊಬ್ಬರೇ ಹೋಗುವಂತಿಲ್ಲಬೆಂಗಳೂರಲ್ಲೊಂದು ಡಾಗ್ ಪಾರ್ಕ್: ಇಲ್ಲಿ ಮನುಷ್ಯರೊಬ್ಬರೇ ಹೋಗುವಂತಿಲ್ಲ

ಸೇಂಟ್ ಬರ್ನಾಡ್, ಗ್ರೇಡ್‍ಡೇನ್, ಜರ್ಮನಿಯ ತಕಿಟಾ, ನ್ಯೂ ಫೌಂಡ್ ಲ್ಯಾಂಡ್ (ಫ್ರಾನ್ಸ್), ರಾಟ್ ಮಿಲ್ಲರ್, ಲ್ಯಾಬರ್ ಡಾಗ್, ಗೋಲ್ಡನ್ ರಿಟ್ ರಿವರ್, ಡಾಬರ್ ಮೆನ್, ಪಗ್ ಹೀಗೆ ವಿವಿಧ ತಳಿಯ ಶ್ವಾನಗಳು ಮತ್ತು ಭಾರತದ ಮುಧೋಳ್, ರಾಜಪಾಲಕ್ಯಂ, ಚಿಪ್ಪಿಪರಿ, ಪಶ್ಮಿ, ಕನ್ನಿ, ಕ್ಯಾರವಾನ್ ಹೌಲ್ಡ ಮುಂತಾದ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಲಿವೆ.

National dog show will held in Mysore

 ಅಂಬಿ ನೀನು ಸಾಕಿದ ಶ್ವಾನಗಳು ನಿನ್ನ ಮರೆಯಲ್ವೋ! ಅಂಬಿ ನೀನು ಸಾಕಿದ ಶ್ವಾನಗಳು ನಿನ್ನ ಮರೆಯಲ್ವೋ!

ಅಲ್ಲದೆ ಇದೇ ಮೊದಲ ಬಾರಿಗೆ ವಿಶ್ವದಲ್ಲೇ ಅತಿ ಹೆಚ್ಚು ಪ್ರಸಿದ್ಧಿ ಪಡೆದಿ ರುವ ಭಾರತದ ದೊಡ್ಡ ಮೊತ್ತದ ಕೋರಿಯನ್ ದೋಸಾ ಮ್ಯಾಸ್ಥಿಫ್ ಮತ್ತು ಅಲಸ್ಕನ್ ಮ್ಯಾಲನ್ ನ್ಯೂಟ್, ಲಯನ್ ಹೆಡ್ ಟಿಬೇಟಿಯನ್ ಮ್ಯಾಸ್ಥಿಫ್ (ಇವು ಪ್ರಪಂಚದಲ್ಲಿ ಅತಿ ಹೆಚ್ಚು ಬೆಲೆಬಾಳುವ ಅಂದರೆ 18 ಕೋಟಿ) ಈ ತಳಿಗಳನ್ನು ಬೆಂಗಳೂರಿನ ಸೆಲೆಬ್ರಿಟಿ ಡಾಗ್ ಬ್ರೀಡರ್ ಸತೀಶ್ ಕೆಡಬಂಬ್ ಅವರು ಅಂದು ಬೆಳಿಗ್ಗೆ 11ರಿಂದ ಮಧ್ಯಾಹ್ನ 12ರವರೆಗೆ 1 ಗಂಟೆ ಕಾಲ ಪ್ರದರ್ಶನ ಮಾಡಲಿದ್ದಾರೆ. ಆದರೆ ಇವು ಸ್ಪರ್ಧೆಯಲ್ಲಿ ಭಾಗವಹಿಸುವುದಿಲ್ಲ.

English summary
Canine Club of Mysore, affiliated to the Kennel Club of India (KCI), is organising a National-level Dog Show Competition on Jan.13 from 9.30 am onwards at the Scouts and Guides Ground behind DC office in Mysuru city.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X