• search
 • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು: 7 ತಿಂಗಳ ನಂತರ ನಾಗರಹೊಳೆ ಸಫಾರಿ ಪುನರಾರಂಭ

By ಮೈಸೂರು ಪ್ರತಿನಿಧಿ
|

ಮೈಸೂರು, ಅಕ್ಟೋಬರ್ 12: ಕೊರೊನಾ ಸಾಂಕ್ರಾಮಿಕ ರೋಗದ ಕಾರಣದಿಂದಾಗಿ ಕಳೆದ 7 ತಿಂಗಳಿನಿಂದ ಸ್ಥಗಿತಗೊಂಡಿದ್ದ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದಲ್ಲಿ ಅಕ್ಟೋಬರ್ 11 ದಿಂದ ಮತ್ತೆ ಸಫಾರಿ ಆರಂಭಗೊಂಡಿದೆ.

ಸಫಾರಿ ಮೊದಲ ಟ್ರಿಪ್ ಬೆಳಿಗ್ಗೆ 6 ರಿಂದ 7.30, ಎರಡನೇ ಟ್ರಿಪ್ 7.30 ರಿಂದ 9 ಗಂಟೆ ಹಾಗೂ ಮಧ್ಯಾಹ್ನ 2 ರಿಂದ 4 ರವರೆಗೆ, ಸಂಜೆ 4 ರಿಂದ 5.30 ರವರೆಗೆ ಸಫಾರಿ ನಡೆಸಲು ನಿರ್ಧರಿಸಲಾಗಿದೆ. ಮೊದಲ ಟ್ರಿಪ್ ಗೆ 10 ಮಂದಿ ಆಗಮಿಸಿದ್ದರು ಎಂದು ವಲಯ ಅರಣ್ಯಾಧಿಕಾರಿ ರವೀಂದ್ರ ಮಾಹಿತಿ ನೀಡಿದರು.

ಕಳೆದ ಮಾರ್ಚ್ 23 ರಿಂದ ಕೊರೊನಾ ವೈರಸ್ ಹಿನ್ನೆಲೆಯಲ್ಲಿ ನಾಗರಹೊಳೆ ಸೇರಿದಂತೆ ಎಲ್ಲ ಕಡೆಗಳಿಂದ ತೆರಳುತ್ತಿದ್ದ ಸಫಾರಿಯನ್ನು ಸ್ಥಗಿತಗೊಳಿಸಲಾಗಿತ್ತು. ಕೊರೊನಾದಿಂದ ವಿಧಿಸಲಾಗಿದ್ದ ನಿರ್ಬಂಧಗಳನ್ನು ಸಡಿಲಗೊಳಿಸಿದ್ದರಿಂದ ಸಫಾರಿಗೆ ನಾಗರಹೊಳೆ ಕೇಂದ್ರ ಸ್ಥಾನದಿಂದ ಚಾಲನೆ ದೊರೆತಿರುವುದು ವನ್ಯ-ಪರಿಸರ ಪ್ರೇಮಿಗಳಿಗೆ ಸಂತಸ ಉಂಟುಮಾಡಿದೆ.

   ಮನೆ ಮುಂದೆ ಗಾಂಜಾ ಗಿಡ, ಖತರ್ನಾಕ್ ಕಳ್ಳರು | Oneindia Kannada

   ಕೊರೊನಾ ಹಿನ್ನೆಲೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದ್ದು, 4-5 ದಿನಗಳಿಂದ ಪ್ರಾಯೋಗಿಕವಾಗಿ ನಾಗರಹೊಳೆಯಿಂದಲೇ ಸಫಾರಿ ಆರಂಭಿಸಲಾಗಿದೆ. ಮಳೆ ಹೆಚ್ಚಾದರೆ ಸಫಾರಿ ನಡೆಸಲು ಸಾಧ್ಯವಾಗುವುದಿಲ್ಲ. ಈ ಸಂದರ್ಭ ಸಾರ್ವಜನಿಕರು ಸಹಕರಿಸುವಂತೆ ನಾಗರಹೊಳೆ ಅರಣ್ಯಾಧಿಕಾರಿಕಾರಿಗಳು ತಿಳಿಸಿದ್ದಾರೆ.

   English summary
   The safari has started on October 11 at Nagarahole National Park, which had been stalled for the past 7 months due to coronavirus epidemics.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X