ಮೈಸೂರು ಮೃಗಾಲಯಕ್ಕೆ ಬಂದ ಹೊಸ ಅತಿಥಿಗಳು
ಮೈಸೂರು, ಮಾರ್ಚ್ 4 : ಮೈಸೂರು ಶ್ರೀ ಚಾಮರಾಜೇಂದ್ರ ಮೃಗಾಲಯಕ್ಕೆ ಶುಕ್ರವಾರ ಹೊಸ ಅತಿಥಿಗಳ ಆಗಮನವಾಗಿದೆ.
ಪ್ರಾಣಿ ವಿನಿಮಯ ಯೋಜನೆಯಡಿ ಮೃಗಾಲಯಕ್ಕೆ, ಚೆನ್ನೈನ ಅರಿಗ್ನಾರ್ ಅಣ್ಣ ಮೃಗಾಲಯದಿಂದ 2 ಹೆಣ್ಣು ಕಡವೆ, 4 ರೀಸಸ್ ಕೋತಿ. 1 ರೇಟಿಕ್ಯೂಲೇಟೆಡ್ ಪೈತಾನ್ ಹಾವಿನ ಆಗಮನವಾಗಿದೆ.[ಮೈಸೂರು ಮೃಗಾಲಯ ಪ್ರವೇಶ ಮುಕ್ತ: ಹರಿದ ಜನಸಾಗರ]

ಇವುಗಳ ಬದಲಿಗೆ 3 ನಿಲ್ ಗಾಯ್, ಹೆಣ್ಣು ಸಿಲ್ವರ್ ಪೆಸೆಂಟ್ 2 , 1 ಕಾಮನ್ ರಿಂಗ್ ನೆಕ್ಡ್ ಪೆಸೆಂಟ್ ಪ್ರಾಣಿಗಳನ್ನ ಮೈಸೂರಿನಿಂದ ಚೆನ್ನೈಗೆ ರವಾನೆ ಮಾಡಲಾಗಿದೆ.[ಫೆ.3 ರಿಂದ ಮೈಸೂರು ಮೃಗಾಲಯ ಪ್ರವೇಶ ಮುಕ್ತ]

ಮೈಸೂರಿಗೆ ಆಗಮಿಸಿದ ಈ ಹೊಸ ಪ್ರಾಣಿಗಳ ವೈದ್ಯಕೀಯ ಪರೀಕ್ಷೆಗಳ ನಂತರ ಪ್ರವಾಸಿಗರ ದರ್ಶನಕ್ಕೆ ಅವಕಾಶ ಕಲ್ಪಿಸುವುದಾಗಿ ಮೃಗಾಲಯದ ಅಧಿಕಾರಿಗಳು ತಿಳಿಸಿದ್ದಾರೆ.












Click it and Unblock the Notifications