ಮಹಿಳೆಯರೇ,ನೀವು ವರದಕ್ಷಿಣೆ ಹಿಂಸೆ ಅನುಭವಿಸ್ತಿದ್ರೆ ಹೀಗೆ ಮಾಡಿ
ಮೈಸೂರು, ಡಿಸೆಂಬರ್, 22: ವರದಕ್ಷಿಣೆ ಕಿರುಕುಳಕ್ಕೆ ಬೇಸತ್ತು ತಾಯಿ ಮನೆ ಸೇರಿರುವ, ಗಂಡನ ಮನೆಯೇ ದೇವಾಲಯ ಎಂದು ಗಂಡನ ಕಿರುಕುಳ ಸಹಿಸಿಕೊಂಡು ಜೀವನ ಸಾಗಿಸುತ್ತಿರುವ ಹಲವು ಮಹಿಳೆಯರು ನಮ್ಮ ನಡುವೆ ಇದ್ದಾರೆ. ಈ ಎಲ್ಲಾ ಮಹಿಳೆಯರಿಗಿಂತ ವಿಭಿನ್ನ ನಿರ್ಧಾರ ಮಾಡಿರುವ ಮೈಸೂರು ಮಹಿಳೆಯೊಬ್ಬಳು ಗಂಡನ ಮನೆಯವರ ವಿರುದ್ಧ ತಿರುಗಿ ಬಿದ್ದಿದ್ದಾಳೆ. ನ್ಯಾಯ ಕೊಡಿ ಎಂದು ಪಟ್ಟು ಹಿಡಿದಿದ್ದಾಳೆ.
ವರದಕ್ಷಿಣೆ ಕಿರುಕುಳ ಸಹಿಸಲಾರದ ಮಂಜುಶ್ರೀ ಗಂಡನ ಮನೆ ಮುಂದೆ ಅಹೋರಾತ್ರಿ ಧರಣಿ ನಡೆಸುತ್ತಿರುವ ದಿಟ್ಟ ಮಹಿಳೆ. ಈ ವಿಚಾರ ತಿಳಿದ ಗಂಡ ಪುರುಷೋತ್ತಮ್, ಮೈದುನ ಮಧುಕರ್, ಅತ್ತೆ ಪುಷ್ಪವಲ್ಲಿ ಮನೆಗೆ ಬೀಗ ಹಾಕಿಕೊಂಡು ಪರಾರಿಯಾಗಿದ್ದಾರೆ.[ಅಂದು ಚಾಂಪಿಯನ್, ಇಂದು ಚಹಾ ಅಂಗಡಿ ಚಾಕರಿ]

ಮಂಜುಶ್ರೀ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಚೆಲುವರಾಜು ಎಂಬುವರ ಪುತ್ರಿ. ಈಕೆ ಮೈಸೂರಿನ ಮೇದರಕೇರಿಯ ಪುಷ್ಪವಲ್ಲಿ ಎಂಬುವರ ಮಗ ಪುರುಷೋತ್ತಮ್ ಎಂಬಾತನನ್ನು ವಿವಾಹವಾಗಿದ್ದಳು. ಮದುವೆ ಸಂದರ್ಭ ವರನ ಕಡೆಯವರು 5 ಲಕ್ಷ ರೂ ನಗದು, 250 ಗ್ರಾಂ ಚಿನ್ನವನ್ನು ವರದಕ್ಷಿಣೆಯಾಗಿ ಪಡೆದಿದ್ದರು.[ಸಣ್ಣಕಥೆ : ಪಾತಕಿ, ಕೊಲೆಗಡುಕಿ... ಪಿಶಾಚಿ ಕಣೆ ನಾನು!]
ಮದುವೆ ಬಳಿಕ ಗಂಡನಿಗಿಂತ ಹೆಚ್ಚಾಗಿ ಅತ್ತೆ ಹಾಗೂ ಮೈದುನ ಮಧುಕರ್ ಎಂಬಾತ ವರದಕ್ಷಿಣೆ ಕಿರುಕುಳ ನೀಡುತ್ತಿದ್ದರು. ಇದರಿಂದ ಬೇಸತ್ತ ಮಂಜುಶ್ರೀ, ಗಂಡನ ಮನೆಯವರ ವಿರುದ್ಧ ಮೂರು ವರ್ಷದ ಹಿಂದೆಯೇ ವರದಕ್ಷಿಣೆ ಕಿರುಕುಳದ ಅಡಿ ಪೊಲೀಸರಿಗೆ ದೂರು ನೀಡಿದ್ದರು. ಬಳಿಕ ಕೌಟುಂಬಿಕ ದೌರ್ಜನ್ಯದಡಿ ನ್ಯಾಯಾಲಯಕ್ಕೆ ದೂರು ಸಲ್ಲಿಸಿದ ಮೇರೆಗೆ ನ್ಯಾಯಾಲಯ ಗಂಡನ ಮನೆಯಲ್ಲಿ ವಾಸ ಮಾಡಲು ಅವಕಾಶ ನೀಡುವಂತೆ ಆದೇಶಿಸಿತ್ತು.[ಕಷ್ಟದ ಸೂಜಿಯಿಂದ ಸುಂದರ ಬದುಕು ಹೊಲಿಯುತ್ತಿರುವ ಯಲ್ಲಮ್ಮ]
ನ್ಯಾಯಾಲಯ ನವೆಂಬರ್ ತಿಂಗಳು 17ರಂದೇ ಆದೇಶ ನೀಡಿದ್ದರೂ ಪೊಲೀಸರು ಮಂಜುಶ್ರೀ ರಕ್ಷಣೆಗೆ ಮುಂದಾಗಿರಲಿಲ್ಲ. ಆದ್ದರಿಂದ ಆಕೆ ಅತ್ತೆ ಮನೆ ಮುಂದೆಯೇ ಧರಣಿ ಆರಂಭಿಸಿದ್ದಳು. ಸಂತ್ರಸ್ತ ಮಹಿಳೆಯ ಸಹಾಯಕ್ಕೆ ಮುಂದಾಗಿರುವ ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ಮಂಜುಳಾ ಮಾನಸ ನ್ಯಾಯಕೊಡಿಸುವ ಭರವಸೆ ನೀಡಿದ್ದಾರೆ.












Click it and Unblock the Notifications