ಮೈಸೂರು: ಮಾರ್ಗಮಧ್ಯೆಯೇ ಆಂಬುಲೆನ್ಸ್ ನಲ್ಲಿ ಹೆಣ್ಣು ಮಗು ಜನನ

ಮೈಸೂರು, ಅಕ್ಟೋಬರ್, 31 : ಆಕೆಗೆ ಹೆರಿಗೆ ನೋವು ಕಾಣಿಸಿಕೊಂಡಿತ್ತು. ತಕ್ಷಣ ಆಂಬುಲೆನ್ಸ್ ಗೂ ಕರೆ ಮಾಡಲಾಗಿತ್ತು. ಆಂಬುಲೆನ್ಸ್ ಆಗಮಿಸಿದ ನಂತರ ಗರ್ಭಿಣಿಯನ್ನು ಆಸ್ಪತ್ರೆಗೆ ದಾಖಲಿಸಲು ಕರೆದುಕೊಂಡು ಹೋಗಲಾಗುತ್ತಿತ್ತು. ಆದರೆ ಗರ್ಭಿಣಿ ಹೊಸ ಜೀವಕ್ಕೆ ಆಂಬುಲೆನ್ಸ್ ನಲ್ಲೇ ಜನ್ಮ ನೀಡಿದ್ದಳು.

ಹೌದು..ಇಂತಹದ್ದೊಂದು ಪ್ರಕರಣಕ್ಕೆ ಪಿರಿಯಾಪಟ್ಟಣ ತಾಲೂಕಿನ ಹುಣಸವಾಡಿ ಗ್ರಾಮದ ಕುಮಾರಿ ಎಂಬ ತಾಯಿ ಸಾಕ್ಷಿಯಾದಳು. ಮಜ್ಜನಹಳ್ಳಿ ಗ್ರಾಮ ಸಮೀಪದ ಕೊಣನೂರು ಆಸ್ಪತ್ರೆಗೆ ಕರೆತರುವ ವೇಳೆಯಲ್ಲೇ ಈಕೆಗೆ ಮುದ್ದಾದ ಹೆಣ್ಣು ಮಗು ಹುಟ್ಟಿದೆ.[ಗರ್ಭಿಣಿ ಪಾಲಿಗೆ ಆಪದ್ಬಾಂಧವನಾದ ಬಂಟ್ವಾಳ ಆಸ್ಪತ್ರೆ ಸಿಬ್ಬಂದಿ]

Mysuru women has gave birth to child in Ambulance on Saturday

ಗರ್ಭಿಣಿಯಾಗಿದ್ದ ಕುಮಾರಿ ತನ್ನ ಆರೈಕೆಗಾಗಿ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಜ್ಜನಹಳ್ಳಿಯಲ್ಲಿನ ಅಜ್ಜಿಯ ಮನೆಗೆ ಬಂದಿದ್ದಳು. ತಾಯಿ ಮತ್ತು ಅಜ್ಜಿಯ ಮೇಲ್ವಿಚಾರಣೆಯಲ್ಲಿ ಇದ್ದ ಕುಮಾರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ.

ಆಗ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗಲು ತಕ್ಷಣವೇ ಸಮೀಪದ ತಾಲೂಕು ಕಣಗಾಲು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಕರೆ ಮಾಡಿ 108 ವಾಹನ ಕಳುಹಿಸಿಕೊಡುವಂತೆ ತಿಳಿಸಲಾಯಿತು. ಅದರಂತೆ 108 ಆಂಬ್ಯುಲೆನ್ಸ್ ಸಿಬ್ಬಂದಿ ಮಜ್ಜನಹಳ್ಳಿ ಗ್ರಾಮಕ್ಕೆ ತೆರಳಿ ಆಕೆಯನ್ನು ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಿದ್ದರು.[ತಪ್ಪಿತಸ್ಥರಿಗೆ ಶಿಕ್ಷೆಯಾಗದೆ ಅಪರ್ಣಾ ಆತ್ಮಕ್ಕೆ ಶಾಂತಿ ಸಿಗದು]

ಆದರೆ ಕುಮಾರಿ ಹೆರಿಗೆ ನೋವು ತೀರ್ವವಾದ ಪರಿಣಾಮ ಸಮಯಪ್ರಜ್ಞೆ ಮೆರೆದ ಆಂಬ್ಯುಲೆನ್ಸ್ ಸಿಬ್ಬಂದಿ ತುರ್ತು ನಿರ್ವಾಹಕ (ಇಎಂಟಿ) ಬಿ.ಎಸ್. ರಾಜೇಶ್ ಹಾಗೂ ಚಾಲಕ ಯೋಗೇಶ್ ಸಹಕಾರದೊಂದಿಗೆ ವಾಹನದಲ್ಲಿಯೇ ಹೆರಿಗೆ ಮಾಡಿಸಿದರು. ಬಳಿಕ ಆಕೆಗೆ ತುರ್ತು ಚಿಕಿತ್ಸೆ ನೀಡಿ ಕೊಣನೂರಿನ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+