ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ವಿ.ವಿಯಿಂದ ಅಜೀಂ ಪ್ರೇಂಜಿಗೆ ಗೌರವ ಡಾಕ್ಟರೇಟ್

By Mahesh
|
Google Oneindia Kannada News

ಮೈಸೂರು, ಮಾರ್ಚ್ 21: ಮೈಸೂರು ವಿಶ್ವ ವಿದ್ಯಾಲಯದಿಂದ ವಿಪ್ರೋ ಟೆಕ್ನಾಲಿಜಿಸ್ ಅಧ್ಯಕ್ಷ ಅಜೀಂ ಪ್ರೇಮ್‌ಜಿ ಅವರಿಗೆ ಮಾರ್ಚ್ 22ರಂದು ಗೌರವ ಡಾಕ್ಟರೇಟ್ ಪ್ರದಾನ ಮಾಡಲಾಗುತ್ತದೆ. ಇದೇ ಸಂದರ್ಭದಲ್ಲಿ ಪ್ರೇಂಜಿ ಅವರು 'ಶಿಕ್ಷಣದ ವ್ಯವಸ್ಥೆ' ಬಗ್ಗೆ ಭಾಷಣ ಮಾಡಲಿದ್ದಾರೆ.[ದೇಶದ ದಾನಿಗಳ ಪೈಕಿ ಪ್ರೇಮ್ ಜೀ ನಂ.1]

ಮೈಸೂರು ವಿವಿ ಕುಲಪತಿ ಪ್ರೊ.ಕೆ.ಎಸ್.ರಂಗಪ್ಪ ಅವರು ಕಾರ್ಯಕ್ರಮದ ಬಗ್ಗೆ ವಿವರಿಸಿ, ಪ್ರೇಮ್ ಜೀ ಅವರು ಶತಮಾನೋತ್ಸವ ಉಪನ್ಯಾಸ ಸರಣಿಯಲ್ಲಿ ಭಾರತದಲ್ಲಿ ಶಾಲಾ ಶಿಕ್ಷಣವನ್ನು ಉತ್ತಮಗೊಳಿಸುವ ಬಗ್ಗೆ ಉಪನ್ಯಾಸ ನೀಡಲಿದ್ದಾರೆ. ಇದೇ ಸಂದರ್ಭದಲ್ಲಿ ರಾಜ್ಯ ಅಂಚೆ ಇಲಾಖೆ ಹೊರತಂದಿರುವ 5 ಮುಖಬೆಲೆಯ ಅಂಚೆ ಲಕೋಟೆಯನ್ನು ಮಾ.22ರಂದು ಬೆಳಗ್ಗೆ 11 ಗಂಟೆಗೆ ಕ್ರಾಫರ್ಡ್ ಭವನದಲ್ಲಿ ನಡೆಯುವ ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಗುವುದು ಎಂದರು. ['ಲರ್ನ್ ಟು ಸರ್ವ್,ಸರ್ವ್ ಟು ಲರ್ನ್' ಆರಂಭಿಸಿದ ಮೈಸೂರು ವಿವಿ]

Mysuru varsity honorary doctorate for Azim Premji

ಮೈಸೂರು ವಿವಿಯ ಶತಮಾನೋತ್ಸವ ಸಮಾರಂಭ ಈ ವರ್ಷದ ಇದೇ 27ರಂದು ಮುಕ್ತಾಯ ಸಮಾರಂಭ ನಡೆಯಲಿದ್ದು, ಉಪರಾಷ್ಟ್ರಪತಿ ಅಮೀದ್ ಅನ್ಸಾರಿ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಹೈಕೋರ್ಟಿನ ಮಾಜಿ ಮುಖ್ಯ ನ್ಯಾ ಯಾಧೀಶರಾದ ಬಿ.ಎ ಖಾನ್ ಅವರು ಪ್ರೇಂಜಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ ಮಾಡಲಿದ್ದಾರೆ.[ಮೈಸೂರು ಪ್ರತಿದಿನ ನೆನೆಯಬೇಕಾದ ವೆಂಕಟಸುಬ್ಬ ಸೆಟ್ಟಿ]

ಸಾಫ್ಟ್ ವೇರ್ ಹಾಗೂ ಹಾರ್ಡ್ ವೇರ್ ಉದ್ಯಮವಲ್ಲದೆ, ಶಿಕ್ಷಣ ಹಾಗೂ ಸಾಮಾಜಿಕ ಕ್ಷೇತ್ರಗಳಲ್ಲಿ ಅಜೀಂ ಪ್ರೇಂಜಿ ಅವರು ಅಪಾರ ಕೊಡುಗೆ ನೀಡಿದ್ದಾರೆ. ವಿಶ್ವದ ಮಹಾನ್ ದಾನಿಗಳ ಪಟ್ಟಿಯಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರೇಂಜಿ ಅವರ ಜೊತೆಗೆ ಜನಪ್ರಿಯ ಕಾದಂಬರಿಕಾರ ಎಸ್ ಎಲ್ ಭೈರಪ್ಪ, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್ ಅವರಿಗೆ ಕಳೆದ ವರ್ಷವೇ ಗೌರವ ಡಾಕ್ಟರೇಟ್ ಘೋಷಣೆ ಮಾಡಲಾಗಿತ್ತು.

English summary
University of Mysore will confer honorary doctorate on Wipro chairman Azim Premji on March 22. The doctorate was announced during the university’s 95th annual convocation last year. However, Mr. Premji could not make it to receive the honour.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X