ಮೈಸೂರು-ತಮಿಳುನಾಡು ಹಬ್ಬದ ವಿಶೇಷ ರೈಲು; ವೇಳಾಪಟ್ಟಿ

ಮೈಸೂರು, ಅಕ್ಟೋಬರ್ 22 : ದಸರಾ ಮತ್ತು ದೀಪಾವಳಿ ಹಬ್ಬದ ಅಂಗವಾಗಿ ನೈಋತ್ಯ ರೈಲ್ವೆ ಮೈಸೂರು-ತಮಿಳುನಾಡು ನಡುವೆ ವಿಶೇಷ ರೈಲುಗಳನ್ನು ಓಡಿಸಲಿದೆ. ನವೆಂಬರ್ 30ರ ತನಕ ರೈಲುಗಳು ಸಂಚಾರ ನಡೆಸಲಿವೆ ಎಂದು ಪ್ರಕಟಣೆ ತಿಳಿಸಿದೆ.

ಮೈಸೂರಿನಿಂದ ತಮಿಳುನಾಡಿನ ವಿವಿಧ ಪ್ರದೇಶಗಳಿಗೆ ಪ್ರತಿದಿನ ಈ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ರೈಲುಗಳಲ್ಲಿ ಸಂಚಾರ ನಡೆಸಲು ಮುಂಗಡ ಟಿಕೆಟ್ ಬುಕ್ ಮಾಡಿಕೊಳ್ಳುವುದು ಕಡ್ಡಾಯವಾಗಿದೆ.

ವಾರದ ಎಲ್ಲಾ ದಿನಗಳು ಎಂದಿನಂತೆ ಈ ವಿಶೇಷ ರೈಲುಗಳು ಸಂಚಾರ ನಡೆಸಲಿವೆ. ಐಆರ್‌ಸಿಟಿಸಿ ಅಪ್ಲಿಕೇಶನ್, ವೆಬ್‌ಸೈಟ್, ರೈಲು ನಿಲ್ದಾಣದ ಬುಕ್ಕಿಂಗ್ ಸೆಂಟರ್‌ಗಳ ಮೂಲಕ ಪ್ರಯಾಣಿಕರು ಮುಂಗಡ ಟಿಕೆಟ್ ಕಾಯ್ದಿರಿಸಬಹುದಾಗಿದೆ.

Mysuru Tamil Nadu Festival Special Trains Schedule

ವಿಶೇಷ ರೈಲುಗಳ ವೇಳಾಪಟ್ಟಿ

* ಮೈಲಾಡುತುರೈ-ಮೈಸೂರು : ಅಕ್ಟೋಬರ್ 26 ರಿಂದ ಡಿಸೆಂಬರ್ 1ರ ತನಕ ಸಂಚಾರ. ಪುಗಳೂರು, ಪಾಪನಾಶಂನಲ್ಲಿ ರೈಲು ನಿಲ್ಲುವುದಿಲ್ಲ.

* ಮೈಸೂರು-ಮೈಲಾಡುತುರೈ : ಅಕ್ಟೋಬರ್ 25 ರಿಂದ ನವೆಂಬರ್ ತನಕ ಸಂಚಾರ. ಪುಗಳೂರು, ಪಾಪನಾಶಂ, ತಿರುಚಿನಾಪಳ್ಳಿ ಪೋರ್ಟ್, ಕುಳಿತ್ತಲೈ ನಿಲುಗಡೆ ಇಲ್ಲ.

* ತೂತುಕುಡಿ-ಮೈಸೂರು : ಅಕ್ಟೋಬರ್ 24 ರಿಂದ ಡಿಸೆಂಬರ್ 1 : ಕಡಂಬೂರ್, ಕೈಲಾಸಪುಂ ನಿಲುಗಡೆ ಇಲ್ಲ.

* ಮೈಸೂರು-ತೂತುಕುಡಿ : ಅಕ್ಟೋಬರ್ 23 ರಿಂದ ನವೆಂಬರ್ 30. ಮಿಲಾವಿಟ್ಟಾನ್, ಕೊಡುಮಡಿ, ತುತಿಮೆಲೂರ್ ನಿಲುಗಡೆ ಇಲ್ಲ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+