ಮೈಸೂರು: ಕೆ.ಆರ್. ಮತಗಟ್ಟೆಯಲ್ಲಿ ಮತದಾರರ ಹೆಸರು ನಾಪತ್ತೆ, ಗೊಂದಲ

ಮೈಸೂರು, ಏಪ್ರಿಲ್ 18 : ಮೈಸೂರಿನ ಕೃಷ್ಣರಾಜ ಕ್ಷೇತ್ರದಲ್ಲಿ ಕೆಲ ಮತದಾರ ಹೆಸರು ಮತದಾರರ ಪಟ್ಟಿಯಲ್ಲಿ ನಾಪತ್ತೆಯಾಗಿರುವುದು ವರದಿ ಆಗಿದೆ.

ಮತದಾನ ಮಾಡಲು ಬಂದಿದ್ದ 79ರ ವೃದ್ಧೆ ಶೀಲಾ ಶಾಂಭವ ಮೂರ್ತಿ ಎಂಬುವವರ ಹೆಸರೇ ವೋಟರ್ ಲಿಸ್ಟ್ ನಲ್ಲಿ ಕಣ್ಮರೆಯಾಗಿತ್ತು.

ಎಲ್ಲಾ ದಾಖಲೆ ಇದ್ದರೂ ಲಿಸ್ಟ್ ನಲ್ಲಿ ಹೆಸರಿಲ್ಲದಿದ್ದಕ್ಕೆ ಮತದಾನಕ್ಕೆ ಅವಕಾಶ ನೀಡದೆ ಮತಗಟ್ಟೆ ಅಧಿಕಾರಿಗಳು ತಮ್ಮನ್ನು ಕಳುಹಿಸಿದ್ದಾರೆ ಎಂದು ಚುನಾವಣಾ ಅಧಿಕಾರಿಗಳ ವಿರುದ್ಧ ಚಾಮುಂಡಿಪುರಂನ ನಿವಾಸಿರವರು ಅಸಮದಾನ ವ್ಯಕ್ತಪಡಿಸಿದರು. ಇದೇ ವೇಳೆ ವೃದ್ಧೆಯವರೊಂದಿಗೆ ಮತ್ತಷ್ಟು ಜನರು ಸಹ ತಮ್ಮ ಹೆಸರು ಸಹ ಪಟ್ಟಿಯಲ್ಲಿಲ್ಲವೆಂದು ಆಕ್ರೋಶ ವ್ಯಕ್ತಪಡಿಸಿದರು.

Mysuru: some voters name missing in KR nagar constituency

ಹೀಗಾಗಿ ಪೋಲಿಸರು ಮತ್ತು ಮತದಾರರ ನಡುವೆ ವಾಗ್ವಾದ ಸಹ ನಡೆಯಿತು. ಇದರೊಟ್ಟಿಗೆ ಕೆ.ಆರ್.ಪೇಟೆ ತಾಲೂಕಿನ ಮಲ್ಲೇನಹಳ್ಳಿ ಗ್ರಾಮದಲ್ಲಿ ಕೆಲಕಾಲ ಮತದಾನ ಸ್ಥಗಿತಗೊಳಿಸಲಾಗಿತ್ತು. ಇವಿಎಂ ಮತ ಯಂತ್ರವನ್ನು ಬದಲಾಗಿ ಇಟ್ಟು ಮತದಾರರಿಗೆ ಅಧಿಕಾರಿಗಳು ಗೊಂದಲ ಉಂಟು ಮಾಡುತ್ತಿದ್ದಾರೆ ಎಂದು ಸಹ ಮತದಾರರು ದೂರಿದರು.

ಇನ್ನು ತೇಗನಹಳ್ಳಿ ಗ್ರಾಮದಲ್ಲಿ ಮತಗಟ್ಟರ ಸಿಬ್ಬಂದಿ ವೃದ್ದರ ಮತ ಚಲಾವಣೆ ಮಾಡಿದ್ದಾರೆ ಎಂದು ಗ್ರಾಮಸ್ಥರು ಅಧಿಕಾರಿಗಳ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ ಘಟನೆ ಸಹ ನಡೆಯಿತು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+