Mysuru Software Park: ಮೈಸೂರಲ್ಲಿ ಉದ್ಘಾಟನೆಗೆ ಸಿದ್ಧವಾದ ಸಾಫ್ಟ್ ವೇರ್ ಟೆಕ್ನಾಲಜಿ‌ ಪಾರ್ಕ್

ನವೋದ್ಯಮಿಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ ಮೈಸೂರಿನಲ್ಲಿ ನಿರ್ಮಾಣಗೊಳ್ಳುತ್ತಿರುವ 'ಸಾಫ್ಟ್‌ವೇರ್ ಟೆಕ್ನಾಲಜಿ' ಪಾರ್ಕ್‌ ಉದ್ಘಾಟನೆಗೆ ಸಿದ್ದಗೊಂಡಿದೆ. ಹೆಬ್ಬಾಳ ಪ್ರದೇಶದಲ್ಲಿ ಕೈಗಾರಿಕಾ 27.64 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಬಹು ನಿರೀಕ್ಷಿತ ಸಾಫ್ಟ್‌ವೇರ್ ಟೆಕ್ನಾಲಜಿ ಶೀಘ್ರವೇ ಕಾರ್ಯಾರಂಭಿಸಲಿದೆ.

ಉದ್ಘಾಟನೆಗೂ ಮುನ್ನವೇ ಈ ಟೆಕ್ನಾಲಜಿ‌ ಪಾರ್ಕ್ ಗೆ ಡಿಮ್ಯಾಂಡ್ ಸೃಷ್ಟಿಯಾಗಿದ್ದು, ಈಗಾಗಲೇ ಇಂಡಸ್ಟ್ರಿ ತೆರೆಯಲು 25 ಕಂಪನಿಗಳು ಮುಂದೆ ಬಂದಿವೆ. ಉದ್ಯಮ ಆರಂಭಿಸುವ ಕನಸು ಹೊತ್ತವರು ಸಾಫ್ಟ್‌ ವೇರ್ ಪಾರ್ಕ್‌ನಲ್ಲಿ ತಮ್ಮ ಕಚೇರಿ ಆರಂಭಿಸಬಹುದು.

 Mysuru Software Technology Park Ready for Inauguration

ಉದ್ಯಮದ ಬೆಳವಣಿಗೆಗೆ ಸರ್ಕಾರದಿಂದ ಸಹಾಯ ಸಿಗಲಿದೆ. ದತ್ತಾಂಶ ಕೇಂದ್ರ, ನೂತನ ಟೆಕ್ನಾಲಜಿ ಹಾಗೂ ಅಂತರ್ಜಾಲ ಸೇವೆ ಕಡಿಮೆ ದರದಲ್ಲಿ ಲಭಿಸಲಿದೆ. ಇದರಿಂದ ಸಾಫ್ಟ್ ವೇರ್ ರಫ್ತನ್ನು ಹೆಚ್ಚಿಸಬಹುದು.

ನಾನಾ ಕಾರಣಗಳಿಂದ ಮಂದಗತಿಯಲ್ಲಿ ನಡೆಯುತ್ತಿದ್ದ ಕಟ್ಟಡ ಕಾಮಗಾರಿ ಇದೀಗ ಚುರುಕುಗೊಂಡಿದ್ದು, ಜನವರಿ ಅಂತ್ಯದಲ್ಲಿ ಲೋಕಾರ್ಪಣೆಗೊಳ್ಳಲಿದೆ ಎಂದು ಎಸ್‌ಟಿಪಿಐ ಪ್ರಾದೇಶಿಕ ಅಧಿಕಾರಿ, ಸಿಪಿಡಬ್ಲ್ಯೂಡಿ ಎಂಜಿನಿಯರ್‌ಗಳು ತಿಳಿಸಿದ್ದಾರೆ.

ಉದ್ಯೋಗಿಗಳಿಗೆ ತಾವಿರುವ ಜಾಗದಲ್ಲಿಯೇ ಉದ್ಯೋಗ ದೊರಕಿಸಿಕೊಡಬೇಕು ಹಾಗೂ ಹೊಸ ಐಟಿ ಸ್ಟಾರ್ಟ್ ಅಪ್‌ಗೆ ಅನುಕೂಲವಾಗಲೆಂದು ಸಾಫ್ಟ್‌ವೇರ್ ಟೆಕ್ನಾಲಜಿ ಪಾರ್ಕ್ ನಿರ್ಮಿಸಲಾಗಿದೆ. ಶೀಘ್ರವೇ ಬಳಕೆಗೆ ಮುಕ್ತವಾಗಲಿದೆ ಎಂದು ಸಂಸದ ಪ್ರತಾಪಸಿಂಹ ತಿಳಿಸಿದ್ದಾರೆ.

ಏನಿದು ಎಸ್‌ಟಿಪಿಐ?

ಬೆಂಗಳೂರು, ಭುವನೇಶ್ವರ, ಪುಣೆಯಲ್ಲಿ ಈಗಾಗಲೇ ಎಸ್‌ಟಿಪಿಐ ಕೇಂದ್ರ ಕಾರ್ಯ ನಿರ್ವಹಿಸುತ್ತಿದೆ. 1991ರಲ್ಲಿ ಸಾಫ್ಟ್‌ವೇರ್ ರಫ್ತನ್ನು ಉತ್ತೇಜಿಸಲು ಕೇಂದ್ರ ಸರಕಾರ ಸಾಫ್ಟ್‌ವೇರ್ ಪಾರ್ಕ್ ಆಫ್ ಇಂಡಿಯಾ ಸ್ಥಾಪನೆ ಮಾಡಿದೆ. ಇದುವರೆಗೆ ದೇಶದಲ್ಲಿ 62 ಕೇಂದ್ರಗಳಿದ್ದು, 1998ರಲ್ಲಿ ಅಂದಿನ ಪ್ರಧಾನಿ ಆಟಲ್ ಬಿಹಾರಿ ವಾಜಪೇಯಿ ಮೈಸೂರಿನಲ್ಲಿ ಕೇಂದ್ರ‌ ಸ್ಥಾಪಿಸಲು ಚಾಲನೆ‌ ನೀಡಿದ್ದರು.

ಮೈಸೂರಿಗೆ ಭರಪೂರ ಅವಕಾಶ

ರಾಜಾಧಾನಿ ಬೆಂಗಳೂರಿನ ನಂತರ ಮೈಸೂರು ವೇಗವಾಗಿ ಬೆಳೆಯುತ್ತಿದೆ. ದಶಪಥ ರಸ್ತೆ ಕಾಮಗಾರಿ ಮುಗಿದು ಬೆಂಗಳೂರು-ಮೈಸೂರು ನಡುವಿನ ಪ್ರಯಾಣ ಸರಾಗವಾಗಿದೆ. 3 ಗಂಟೆ ಪ್ರಯಾಣ ಕೇವಲ ಒಂದೂವರೆ ಗಂಟೆಗೆ ಇಳಿದಿದೆ. ಅಲ್ಲದೆ, ಸಾಫ್ಟ್‌ವೇರ್ ರಫ್ತಿನಲ್ಲೂ ಮೈಸೂರು ಮಂಜೂಣಿಯಲ್ಲಿದೆ. ವಿಮಾನ ರನ್ ವೇ ವಿಸ್ತರಣೆಯಾಗುತ್ತಿದೆ. ಈ ಎಲ್ಲದರ ಜತೆಗೆ ಎಸ್‌ಟಿಪಿಐ ಕೇಂದ್ರ ಸ್ಥಾಪನೆಯಾದರೆ ಮೈಸೂರಿಗೆ ಬಂಡವಾಳ ಹೂಡಿಕೆ ಹೆಚ್ಚಾಗುತ್ತದೆ. ಹೊಸ ಸ್ಟಾರ್ಟ್ ಅಪ್ ಆರಂಭವಾಗುತ್ತವೆ. ಇದು ನವೋದ್ಯಮಿಗಳಿಗೆ ಉತ್ತೇಜನ ನೀಡಿದಂತಾಗುತ್ತದೆ.

ಸಾಫ್ಟ್‌ವೇರ್ ಪಾರ್ಕ್‌ನಲ್ಲಿ ಏನೇನಿದೆ?

  • 4, 10 ಮತ್ತು 12 ಸೀಟ್‌ಗಳ 12 ಕಚೇರಿಗಳು
  • 5-15 ಜನರ ಸಣ್ಣ ಕಂಪನಿ ಆರಂಭಿಸಲು ಸೌಲಭ್ಯ
  • 40 ಸೀಟರ್‌ನ ದೊಡ್ಡಕೇಂದ್ರಕ್ಕಾಗಿ ಎರಡನೇ ಮಹಡಿ ಸಿದ್ಧ
  • 6 ಸಾವಿರ ಚದರ ಅಡಿ ಖಾಲಿ ಜಾಗ

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+