ಪರೋಕ್ಷವಾಗಿ ಸುಮಲತಾ ಬೆಂಬಲಿಸಿದ ಯದುವೀರ್ ಒಡೆಯರ್
Recommended Video

ಮೈಸೂರು, ಏಪ್ರಿಲ್ 3: ಚುನಾವಣೆಯಲ್ಲಿ ಯಾವ ಪಕ್ಷದವರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ. ಜೊತೆಗೆ ರಾಜಕೀಯ ಮಾಡುವುದಿಲ್ಲ. ಅಂಬರೀಶ್ ಅವರು ಅರಮನೆಯ ಕಷ್ಟದ ಸಂದರ್ಭದಲ್ಲಿ ಬೆನ್ನೆಲುಬಾಗಿ ನಿಂತಿದ್ದರು. ಅವರ ಸಹಾಯವನ್ನು ಮರೆಯುವಂತಿಲ್ಲವೆಂದು ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಸ್ಪಷ್ಟಪಡಿಸಿದ್ದಾರೆ.
ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಯಾವುದೇ ಪಕ್ಷದ ಪರ, ಯಾರ ಜೊತೆಯೂ ಪ್ರಚಾರಕ್ಕೆ ಹೋಗುವುದಿಲ್ಲ. ಅರಮನೆಗೆ ಬರುವವರಿಗೆ ಸ್ವಾಗತವಿದೆ. ಯಾರೂ ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಾರೋ ಅವರಿಗೆ ಅರಮನೆಯಿಂದ ಬೆಂಬಲ ಇರಲಿದೆ ಎಂದರು.
ರಿಯಲ್ ಸ್ಟಾರ್ ಉಪೇಂದ್ರ ಭೇಟಿಯ ಕುರಿತು ಮಾತನಾಡಿದ ಅವರು, ಅದೊಂದು ಸೌಜನ್ಯದ ಭೇಟಿ ಭೇಟಿ ಅಷ್ಟೆ. ಅವರು ಪ್ರಜಾಕೀಯವೆಂದು ಹೊಸ ಪಕ್ಷ ಮಾಡಿದ್ದಾರೆ. ಅದರ ಕುರಿತು ಮಾಹಿತಿ ನೀಡಲು ಬಂದಿದ್ದರು ಎಂದರು.

ನಟ ಅಂಬರೀಶ್ ನಿಮ್ಮ ಕುಟುಂಬಕ್ಕೆ ಹಳೆಯ ಪರಿಚಯ. ಅವರ ಪತ್ನಿ ಸುಮಲತಾ ಮಂಡ್ಯದಲ್ಲಿ ಚುನಾವಣೆಗೆ ನಿಂತಿದ್ದಾರೆ. ನಿಮ್ಮ ಬೆಂಬಲವಿದೆಯೇ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಅಂಬರೀಶ್ ತುಂಬಾ ವರ್ಷದಿಂದಲೂ ಪರಿಚಯ. ಆದರೆ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಯಾರಿಗೆ ಮತ ಹಾಕಬೇಕೆಂಬುದನ್ನು ಮಂಡ್ಯದ ಜನತೆ ತೀರ್ಮಾನ ಮಾಡುತ್ತಾರೆ. ಅವರಿಗೆ ಮೈಸೂರು ರಾಜಮನೆತನ ಎಂದಿಗೂ ಕೃತಜ್ಞವಾಗಿರುತ್ತದೆ ಎಂದು ತಿಳಿಸಿದರು.
ಇದಕ್ಕೂ ಮುನ್ನ ರಿಯಲ್ ಸ್ಟಾರ್ ಉಪೇಂದ್ರ ಅವರು ಮೈಸೂರು ಅರಮನೆಗೆ ಭೇಟಿ ನೀಡಿ ರಾಜವಂಶಸ್ಥ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಜೊತೆ ಮಾತುಕತೆ ನಡೆಸಿದರು. ಚುನಾವಣಾ ಪೂರ್ವದಲ್ಲಿ ಉಪೇಂದ್ರ ಅವರು ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿರುವುದು ಭಾರೀ ಕುತೂಹಲಕ್ಕೆ ಕಾರಣವಾಗಿದೆ.












Click it and Unblock the Notifications