ಮೈಸೂರಿನ ನಳಪಾಕ್ ನ ಬಿಸಿಬೇಳೆ ಬಾತ್ ನಲ್ಲಿ ಹುಳ!

ಮೈಸೂರು, ಡಿಸೆಂಬರ್, 09: ಗ್ರಾಹಕರಿಂದ ದುಬಾರಿ ಹಣ ವಸೂಲಿ ಮಾಡುವ ಪ್ರತಿಷ್ಠಿತ ಹೋಟೆಲ್‍ಗಳು ಗ್ರಾಹಕರಿಗೆ ರುಚಿ, ಶುಚಿಯಾದ ಆಹಾರ ನೀಡಬೇಕಲ್ಲವೆ? ಆದರೆ ಮೇಲೆ ತಳಕು ಒಳಗೆ ಹುಳುಕು ಎಂಬ ಮಾತಿಗೆ ತಕ್ಕಂತೆ ಮೈಸೂರು ನಗರದ ಹೋಟೆಲ್‍ವೊಂದರ ಮುಖವಾಡ ಕಳಚಿ ಬಿದ್ದಿದೆ.

ಮೈಸೂರಿನ ಹೋಟೆಲ್‍ ಗಳಲ್ಲಿ ಒಂದಾದ ನಳಪಾಕ್ ರೆಸ್ಟೊರೆಂಟ್ ತಯಾರಿಸಿದ ಅಡುಗೆಯಲ್ಲಿ ಅಂದರೆ ಬಿಸಿ ಬೇಳೆ ಬಾತ್ ನಲ್ಲಿ ಹುಳ ಸಿಕ್ಕಿದೆ. ಈ ಪ್ರಕರಣ ಹೋಟೆಲ್‍ನ ಹೆಸರಿಗೆ ಕಪ್ಪು ಮಸಿ ಬಳಿದಂತಾಗಿದ್ದು, ಇದರಿಂದ ಆ ಹೋಟೆಲ್ ಹೆಸರು ಕೇಳಿದ ಜನ ಮುಖ ಕಿವುಚುವಂತಾಗಿದೆ.[ಅವಧಿ ಮುಗಿಯುವ ಮೊದಲೇ ಪ್ಯಾಕೇಟಲ್ಲಿ ಬೂಸ್ಟ್ ಹಿಡಿದ ಬಿಸ್ಕೆಟ್]

Mysuru Nalapak restaurant food is not safe for eat

ಬಿಸಿಬೇಳೆ ಬಾತ್ ತಿನ್ನೋಣ ಎಂದು ಮಾಧವಿ ಎಂಬುವರು ಎಂದು ಮೈಸೂರಿನ ಕುವೆಂಪು ನಗರದ ಪ್ರತಿಷ್ಠಿತ ಹೋಟೆಲ್ ನಳಪಾಕ್ ನಿಂದ ಬಿಸಿಬೇಳೆ ಬಾತ್ ತರಿಸಿಕೊಂಡಿದ್ದಾರೆ. ಆದರೆ ಹಬೆಯಾಡುತ್ತಿದ್ದ ಬಿಸಿಬೇಳೆಬಾತ್ ನಲ್ಲಿ ಹುಳ ಕಾಣಿಸಿಕೊಂಡು ತಿನ್ನದೆ ಹಾಗೇ ಬಿಟ್ಟಿದ್ದಾರೆ.

ಮಾಧವಿ ಅವರು ಕೂಡಲೇ ನಗರ ಪಾಲಿಕೆ ಅಧಿಕಾರಿಗಳಿಗೆ ಈ ವಿಚಾರದ ಬಗ್ಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಬಂದ ಅಧಿಕಾರಿಗಳು ಹೋಟೆಲ್ ನ ಎಲ್ಲಾ ತಿಂಡಿಗಳನ್ನು ಪರಿಶೀಲನೆ ನಡೆಸಿದ್ದಾರೆ. ಅಲ್ಲದೆ ಮಾಹಿತಿ ಕಲೆಹಾಕಿದ್ದಾರೆ. ಇದರಿಂದ ಮೈಸೂರಿನಲ್ಲಿ ಸುಮಾರು ಐದು ಕಡೆ ಶಾಖೆ ಹೊಂದಿರುವ ನಳಪಾಕ್ ಗೆ ಇದೊಂದು ನುಂಗಲಾರದ ತುಪ್ಪವಾಗಿ ಪರಿಣಮಿಸಿದೆ.[ಮ್ಯಾಗಿ ಮ್ಯಾಜಿಕ್: 21 ದಿನದಲ್ಲಿ 50 ಮಿಲಿಯನ್ ಮಾರಾಟ]

ಮೈಸೂರಿನಲ್ಲಿ ಹಲವು ಹೋಟೆಲ್‍ ಗಳು ಶುಚಿತ್ವಕ್ಕೆ ಒತ್ತು ಕೊಡುತ್ತಿಲ್ಲ ಎಂಬ ದೂರುಗಳು ಕೇಳಿ ಬರುತ್ತಿವೆ. ಯಾವತ್ತಾದರೊಂದು ದಿನ ದಾಳಿ ಮಾಡುವ ನಗರಪಾಲಿಕೆ ಅಧಿಕಾರಿಗಳು ಮತ್ತೆ ಮೌನಕ್ಕೆ ಶರಣಾಗಿ ಬಿಡುತ್ತಾರೆ. ಹೀಗಾಗಿ ಕೆಲವು ಹೋಟೆಲ್‍ಗಳಲ್ಲಿ ರುಚಿಯಾದ ಪದಾರ್ಥ ಸಿಕ್ಕರೂ ವಾತಾವರಣ ಮಾತ್ರ ಅಶುಚಿತ್ವದಿಂದ ಕೂಡಿರುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+