ಪ್ರಿಯಕರ ಬೈದನೆಂದು ನೇಣಿಗೆ ಶರಣಾದ ಮೈಸೂರಿನ ಮಾಡೆಲ್

ಮೈಸೂರು, ಮೇ 24 : ತಾನು ಪ್ರೀತಿಸಿದ ಹುಡುಗ ಢಗಾರ್ ಎಂಬ ಪದ ಪ್ರಯೋಗ ಮಾಡಿದ್ದು ಅಲ್ಲದೇ, ಅವಾಚ್ಯ ಶಬ್ದಗಳಿಂದ ಬೈದದ್ದಕ್ಕೆ ಮನನೊಂದ ಮಾಡೆಲ್ ನೇಣಿಗೆ ಶರಣಾಗಿರುವ ಘಟನೆ ಇಂದು ಗುರುವಾರ ಮೈಸೂರಿನಲ್ಲಿ ನಡೆದಿದೆ.

ನಗರದ ಹೊರವಲಯದ ಬೆಳವಾಡಿಯ ಧನ್ಯಾ (19) ಆತ್ಮಹತ್ಯೆಗೆ ಶರಣಾದ ಮಾಡೆಲ್. ಧನ್ಯಾ ಮೇಟಗಳ್ಳಿ ನಿವಾಸಿ ಬೀನ್ ಎಂಬಾತನನ್ನು ಪ್ರೀತಿಸುತ್ತಿದ್ದರು.

ಈ ನಡುವೆ ಪ್ರಿಯಕರನನ್ನು ಮನೆಗೆ ಕರೆತರುವಂತೆ ಧನ್ಯಾ ಪೋಷಕರ ಒತ್ತಾಯಿಸಿದ್ದರು. ಹೀಗಾಗಿ ಧನ್ಯಾ ಬೀನ್ ಗೆ ಮದುವೆ ಮಾತುಕತೆಗೆ ಬರುವಂತೆ ಮನೆಗೆ ಆಹ್ವಾನ ನೀಡಿದ್ದರು. ಆದರೆ ಬೀನ್ ಆಕೆಯ ಮನೆಗೆ ಬರಲು ಒಪ್ಪಲಿಲ್ಲ.

Mysuru Model Who Committed Suicide.

ಇದರಿಂದ ಕೋಪಗೊಂಡ ಧನ್ಯಾ ಬೀನ್ ಜೊತೆಗೆ ಜಗಳವಾಡಿದ್ದಾರೆ. ಇದಾದ ಬಳಿಕ ಬೀನ್ ಧನ್ಯಾ ತಂದೆ ಅವರು ನಡೆಸುತ್ತಿದ್ದ ಅಂಗಡಿ ಮುಂದೆಯೇ ಧನ್ಯಾಗೆ ಆವಾಜ್ ಹಾಕಿದ್ದಾನೆ. ಇದರಿಂದ ಬೇಸತ್ತ ಧನ್ಯಾ ಡೆತ್ ನೋಟ್ ಬರೆದಿಟ್ಟು ನೇಣಿಗೆ ಶರಣಾಗಿದ್ದಾರೆ ಎನ್ನಲಾಗಿದೆ.

Mysuru Model Who Committed Suicide.

ಧನ್ಯಾ ಬಿಡುಗಡೆ ಆಗಬೇಕಿರುವ 'ಭರವಸೆ' ಎಂಬ ಕಿರುಚಿತ್ರದಲ್ಲಿ ಅಭಿನಯಿಸಿದ್ದರು. ಈ ಹಿಂದೆ 2 ಕಿರು ಚಿತ್ರದಲ್ಲಿಯೂ ನಟಿಸಿದ್ದರು. ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+