• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರಲ್ಲಿ ಬೆಳ್ಳಂಬೆಳಿಗ್ಗೆ ಅಬಕಾರಿ ಅಧಿಕಾರಿಗಳಿಂದ ಬಾರ್‌ ರೇಡ್

By ಮೈಸೂರು ಪ್ರತಿನಿಧಿ
|

ಮೈಸೂರು, ಮೇ 07; ಮೈಸೂರಿನ ಬಾರ್ ಒಂದರ ಮೇಲೆ ಇಂದು ಬೆಳ್ಳಂಬೆಳಿಗ್ಗೆ ಅಬಕಾರಿ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಅಬಕಾರಿ ಡೆಪ್ಯುಟಿ ಸೂಪರಿಂಟೆಂಡೆಂಟ್ ಮಹದೇವು ಹಾಗೂ ತಂಡದಿಂದ ನಗರದ ಹಿನಕಲ್ ಬಳಿಯ ರಿಂಗ್‌ ರಸ್ತೆಯಲ್ಲಿರುವ ಭೂಮಿ ಪುತ್ರ ಬಾರ್‌ ಮೇಲೆ ಬೆಳಗಿನ ಜಾವ ರೇಡ್ ಮಾಡಿ ಸ್ಟಾಕ್‌ ಚೆಕ್‌ ಮಾಡಲಾಯಿತು.

ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

ಈ ಕುರಿತು ಪ್ರತಿಕ್ರಿಯಿಸಿದ ಅಬಕಾರಿ ಜಿಲ್ಲಾಧಿಕಾರಿ ಮುರಳಿ ಅವರು, "ಇದು ರೊಟೀನ್ ಚೆಕ್‌ ಅಪ್‌ ಆಗಿದ್ದು, ರಾಜ್ಯ ಸರ್ಕಾರ ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರೂ ಸಿಎಲ್ 9 ಲೈಸನ್ಸ್‌ ಹೊಂದಿರುವ ಬಾರ್‌ ಅಂಡ್‌ ರೆಸ್ಟೋರಂಟ್ ಗಳನ್ನು ತೆರೆಯಲು ಅನುಮತಿ ನೀಡಿಲ್ಲ. ಆದರೆ ಕೆಲವು ಬಾರ್‌ ಗಳಲ್ಲಿ ಮದ್ಯ ಮಾರಾಟ ಮಾಡುತ್ತಿರುವುದು ತಿಳಿದು ಬಂದಿದೆ. ಮಾಹಿತಿಯ ಮೇರೆಗೆ ದಾಸ್ತಾನನ್ನು ಪರಿಶೀಲಿಸಲಾಗುತ್ತಿದೆ" ಎಂದರು.

ಈ ಬಾರ್‌ ನಲ್ಲಿ ಅಕ್ರಮ ಮದ್ಯ ಮಾರಾಟ ಮಾಡಿರುವ ಬಗ್ಗೆ ಅಧಿಕಾರಿಗಳು ಪರಿಶೀಲನೆ ನಡೆಸುತ್ತಿದ್ದು, ನಂತರವಷ್ಟೆ ನಿಖರ ಮಾಹಿತಿ ದೊರೆಯಲಿದೆ ಎಂದು ತಿಳಿಸಿದರು.

English summary
Mysuru excise officials raided bar at hinakal in mysuru district today
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X