ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

1989ರ ಮತದಾನದ ದಾಖಲೆ ಮುರಿಯಲು ಮೈಸೂರು ಸ್ವೀಪ್ ಸಮಿತಿ ಕಸರತ್ತು

|
Google Oneindia Kannada News

ಮೈಸೂರು, ಮಾರ್ಚ್ 31: ಹಿಂದಿನ ದಾಖಲೆಯನ್ನು ಮುರಿದು ಈ ಬಾರಿ ಅತಿ ಹೆಚ್ಚು ಮತದಾನ ಮಾಡುವತ್ತ ಹಲವು ಯೋಜನೆಗಳನ್ನು ಜಾರಿಗೆ ತರಲು ಮೈಸೂರು ಜಿಲ್ಲಾ ಸ್ವೀಪ್ ಸಮಿತಿ ನಿರ್ಧರಿಸಿದೆ. ಈ ಹಿಂದೆ 1989ರ ಲೋಕಸಭಾ ಚುನಾವಣೆಯಲ್ಲಿ ದಾಖಲಾಗಿದ್ದ ಮತದಾನ ಪ್ರಮಾಣದ ದಾಖಲೆ ಮುರಿದು ಶೇ 70ರ ಗಡಿದಾಟಲು ಜಿಲ್ಲಾ ಸ್ವೀಪ್ ಸಮಿತಿ ಕಸರತ್ತು ನಡೆಸುತ್ತಿದೆ.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಕ್ಷೇತ್ರ ವ್ಯಾಪ್ತಿಯಲ್ಲಿ ನಡೆದಿರುವ ಈ ಹಿಂದಿನ 16 ಸಾರ್ವತ್ರಿಕ ಚುನಾವಣೆಗಳಲ್ಲಿ ಶೇ 69.74 ಮತದಾನವಾಗಿರುವುದೇ ಇದುವರೆಗಿನ ದಾಖಲೆ. ಇದನ್ನು ಚುನಾವಣಾ ಆಯೋಗದ ಅಂಕಿ-ಅಂಶಗಳು ದೃಢಪಡಿಸುತ್ತವೆ. 1989ರ ಚುನಾವಣೆಯಲ್ಲಿ ಏಳು ಅಭ್ಯರ್ಥಿಗಳು ಕಣದಲ್ಲಿದ್ದರು. 10.52 ಲಕ್ಷ ಮತದಾರರಲ್ಲಿ 7.33 ಲಕ್ಷ ಮಂದಿ ತಮ್ಮ ಹಕ್ಕು ಚಲಾಯಿಸಿದ್ದರು.

ಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾಚುನಾವಣೆ ಸಮಯ ಸಾಲುಸಾಲು ರಜಾ : ಮತ ಹಾಕದೆ ಮಾಡಬೇಡಿ ಮಜಾ

ಕಾಂಗ್ರೆಸ್‌ನಿಂದ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್, ಜನತಾ ಪಕ್ಷದಿಂದ ಡಿ.ಮಾದೇಗೌಡ, ಜನತಾದಳದಿಂದ ಪ.ಮಲ್ಲೇಶ್, ಬಿಜೆಪಿ ಅಭ್ಯರ್ಥಿಯಾಗಿ ತೋಂಟದಾರ್ಯ, ಪಕ್ಷೇತರರಾಗಿ ಭಾಮಿ ವಿ.ಶೆಣೈ ಕಣಕ್ಕಿಳಿದಿದ್ದರು. ಆಗ ಜನ ತಂಡೋಪ ತಂಡವಾಗಿ ಮತಗಟ್ಟೆಗೆ ಬಂದು ಮತ ಚಲಾಯಿಸಿದ್ದರು.

ಆ ಚುನಾವಣೆ ಹೊರತುಪಡಿಸಿ ಉಳಿದೆಲ್ಲಾ ಲೋಕಸಭಾ ಚುನಾವಣೆಗಳಲ್ಲಿ ಮತದಾನದ ಪ್ರಮಾಣ ಕಡಿಮೆಯಿದೆ. "ಆಗ ಜನ ಬದಲಾವಣೆ ಬಯಸಿದ್ದರು. ಸಮಾಜವಾದಿಗಳು, ಹೋರಾಟಗಾರರು ಆ ಚುನಾವಣೆಯಲ್ಲಿ ಕಣಕ್ಕಿಳಿದಿದ್ದರು. ರಾಜವಂಶದ ಅಭ್ಯರ್ಥಿ ಮೇಲೆ ಜನರಿಗೆ ಅತೀವ ಒಲವು ಇತ್ತು. ರಾಜಕೀಯ ಧ್ರುವೀಕರಣದ ಮಾತು ಕೇಳಿಬರುತ್ತಿತ್ತು. ಆದರೆ, ಜನತಾದಳ ಹಾಗೂ ಜನತಾಪಕ್ಷದ ನಡುವೆ ಮತಗಳು ಹಂಚಿಕೆಯಾಗಿ ಕಾಂಗ್ರೆಸ್ ಅಭ್ಯರ್ಥಿಗೆ ಗೆಲುವು ಒಲಿಯಿತು" ಎಂದು ಅಭ್ಯರ್ಥಿಯಾಗಿದ್ದ ಪ.ಮಲ್ಲೇಶ್ ನೆನಪಿಸಿಕೊಳ್ಳುತ್ತಾರೆ.

ಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರುಎನ್ನಾರೈಗಳಿಗೆ ಆನ್ಲೈನ್ ಮತದಾನ ಸುಳ್ಸುದ್ದಿ ವಿರುದ್ಧ ಆಯೋಗದಿಂದ ದೂರು

ವಿಧಾನಸಭಾ ಚುನಾವಣೆ, ಸ್ಥಳೀಯ ಸಂಸ್ಥೆಗಳಿಗೆ ನಡೆಯುವ ಚುನಾವಣೆ ಗಳಿಗೆ ಹೋಲಿಸಿದರೆ; ಲೋಕಸಭಾ ಚುನಾವಣೆಯಲ್ಲಿ ಮತದಾನ ಪ್ರಮಾಣ ಅಷ್ಟಕಷ್ಟೆ. ಅದಕ್ಕೆ ಇಲ್ಲಿರುವ ಅಂಕಿಅಂಶಗಳೇ ಸಾಕ್ಷಿ...

ಅತಿ ಕಡಿಮೆ ಪ್ರಮಾಣದ ಮತದಾನ

ಅತಿ ಕಡಿಮೆ ಪ್ರಮಾಣದ ಮತದಾನ

1952ರಲ್ಲಿ ನಡೆದ ಚುನಾವಣೆಯಲ್ಲಿ ಅತಿ ಕಡಿಮೆ ಪ್ರಮಾಣದ (ಶೇ 48.91) ಮತದಾನವಾಗಿತ್ತು. ಕ್ಷೇತ್ರ ಪುನರ್‌ವಿಂಗಡಣೆಯಾದ ಬಳಿಕ 2009ರಲ್ಲಿ ನಡೆದ ಚುನಾವಣೆಯಲ್ಲಿ ಕೇವಲ ಶೇ 58.88 ಮತದಾನ ನಡೆದಿತ್ತು. ಆಗ ಎಚ್.ಡಿ.ಕೋಟೆ, ಕೆ.ಆರ್.ನಗರದ ಬದಲು ಕೊಡಗು ಜಿಲ್ಲೆಯ ವಿರಾಜಪೇಟೆ, ಮಡಿಕೇರಿ ವಿಧಾನಸಭಾ ಕ್ಷೇತ್ರಗಳು ಮೈಸೂರು ಲೋಕಸಭಾ ಕ್ಷೇತ್ರ ವ್ಯಾಪ್ತಿಗೆ ಸೇರಿದವು. ಆದರೆ, 2014ರ ಚುನಾವಣೆಯಲ್ಲಿ (ಶೇ 67.30) ಸ್ವೀಪ್ ಸಮಿತಿ ಪ್ರಯತ್ನದಿಂದ ಮತದಾನ ಪ್ರಮಾಣ ಏರಿಕೆ ಕಂಡಿತ್ತು.

ನಗರ ಪ್ರದೇಶವೇ ನಮಗೆ ಸವಾಲಾಗಿದೆ

ನಗರ ಪ್ರದೇಶವೇ ನಮಗೆ ಸವಾಲಾಗಿದೆ

ಕಳೆದ ಬಾರಿಗಿಂತ ಶೇ.10ರಷ್ಟಾದರೂ ಹೆಚ್ಚಿಸಬೇಕೆಂಬುದು ಸ್ವೀಪ್ ಸಮಿತಿಯ ಪ್ರಯತ್ನ. ಗ್ರಾಮಾಂತರ ಭಾಗದಲ್ಲಿ ಜನರು ಬಹುಬೇಗನೇ ಸ್ಪಂದಿಸುತ್ತಾರೆ. ಹೀಗಾಗಿ, ಈ ಭಾಗದಲ್ಲಿ ಮತದಾನ ಪ್ರಮಾಣ ಹೆಚ್ಚಿಸಬಹುದು. ಆದರೆ, ನಗರ ಪ್ರದೇಶವೇ ನಮಗೆ ಸವಾಲಾಗಿದೆ. ಮನೆಮನೆಗೆ ಹೋಗಿ ಅರಿವು ಮೂಡಿಸಲು ಪ್ರಯತ್ನಿಸಲಾಗುತ್ತಿದೆ ಎನ್ನುತ್ತಾರೆ ಸ್ವೀಪ್ ಸಮಿತಿ ಅಧ್ಯಕ್ಷೆ ಕೆ.ಜ್ಯೋತಿ.

ಕೆಎಸ್ಓಯು ವಿದ್ಯಾರ್ಥಿಗಳಿಂದ ಮತದಾನ ಬಹಿಷ್ಕಾರ ಚಿಂತನೆಕೆಎಸ್ಓಯು ವಿದ್ಯಾರ್ಥಿಗಳಿಂದ ಮತದಾನ ಬಹಿಷ್ಕಾರ ಚಿಂತನೆ

ಚಾಮುಂಡಿ ಬೆಟ್ಟದಲ್ಲಿ ವಿದ್ಯುತ್ ದೀಪಾಲಂಕಾರ

ಚಾಮುಂಡಿ ಬೆಟ್ಟದಲ್ಲಿ ವಿದ್ಯುತ್ ದೀಪಾಲಂಕಾರ

ಚಾಮುಂಡಿಬೆಟ್ಟದಲ್ಲಿ ದಸರಾ ಮಾದರಿಯಲ್ಲಿ ವಿದ್ಯುತ್ ಬಲ್ಬು ಬಳಸಿ 'ನಿಮ್ಮ ಮತ ನಿಮ್ಮ ಹಕ್ಕು' ಎಂಬ ಅಕ್ಷರಗಳನ್ನು ಜೋಡಿಸಿ ಮತದಾನ ಜಾಗೃತಿ ಮೂಡಿಸಲು ಸ್ವೀಪ್ ಸಮಿತಿ ಮುಂದಾಗಿದೆ. ಎಲ್ಲಾ ತಾಲೂಕುಗಳ ಪ್ರಮುಖ ವೃತ್ತಗಳಲ್ಲಿಯೂ ವಿದ್ಯುತ್ ದೀಪಾಲಂಕಾರ ಮಾಡಿ, ಬಸ್-ರೈಲ್ವೆ ನಿಲ್ದಾಣಗಳಲ್ಲಿ ಅರಿವು ಮೂಡಿಸಲಾಗುತ್ತಿದೆ.

ನೋಂದಣಿಗೆ ಹೆಚ್ಚು ಆಸಕ್ತಿ ತೋರಿಸಿದಂತಿಲ್ಲ

ನೋಂದಣಿಗೆ ಹೆಚ್ಚು ಆಸಕ್ತಿ ತೋರಿಸಿದಂತಿಲ್ಲ

ಇಷ್ಟಾಗಿಯೂ ಯುವ ಮತದಾರರ ಸೇರ್ಪಡೆ ಕಾರ್ಯ ತೃಪ್ತಿದಾಯಕವಾಗಿಲ್ಲ. ನೋಂದಣಿ ಕಾರ್ಯದಲ್ಲಿ ನಿರೀಕ್ಷಿಸಿದಷ್ಟು ಪ್ರಗತಿಯಾಗಿಲ್ಲ. ಮತದಾರರ ಪಟ್ಟಿ ಪರಿಷ್ಕರಣಾ ವೇಳೆಯೂ ಯುವಕರು ನೋಂದಣಿಗೆ ಹೆಚ್ಚು ಆಸಕ್ತಿ ತೋರಿಸಿದಂತಿಲ್ಲ. ಮೈಸೂರು ಜಿಲ್ಲೆಯಲ್ಲಿ ಈ ಬಾರಿ ಒಟ್ಟು 36,163 ಯುವ ಮತದಾರರು ಸೇರ್ಪಡೆಯಾಗಿದ್ದಾರೆ. ಮೈಸೂರು-ಕೊಡಗು ಸೇರಿ ಒಟ್ಟು 18.59 ಲಕ್ಷ ಮತದಾರರು ಇದ್ದಾರೆ. ಅವರಲ್ಲಿ 9.29 ಲಕ್ಷ ಪುರುಷರು ಹಾಗೂ 9.30 ಲಕ್ಷ ಮಹಿಳೆಯರು ಸೇರಿದ್ದಾರೆ. ಏ.18ರಂದು ಮತದಾನ ನಡೆಯಲಿದೆ. ಈ ಬಾರಿಯಾದರು ಶೇ 70ರಷ್ಟು ಮತದಾನ ಮಾಡುತ್ತಾರಾ ? ಕಾದು ನೋಡಬೇಕಿದೆ.

English summary
Lok Sabha Elections 2019: District Election Sweeping Committee planning to increase voting percentage at Mysuru district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X