Get Updates
Get notified of breaking news, exclusive insights, and must-see stories!

ಸಂಗೀತ ಗಾಡಿ ಎಳೆಯುತ್ತಿದ್ದ ಅಭಿಮನ್ಯು ಗಜಪಡೆಯ ಕ್ಯಾಪ್ಟನ್ ಆಗಿದ್ದೇಗೆ?

ಮೈಸೂರು, ಆಗಸ್ಟ್‌ 22: ಅರ್ಜುನನ ಬಳಿಕ ಅಂಬಾರಿ ಹೊರುವ ಜವಬ್ದಾರಿ ಹೊತ್ತಿರುವ ಅಭಿಮನ್ಯು ಕಳೆದ ನಾಲ್ಕು ವರ್ಷಗಳಿಂದ ಯಶಸ್ವಿಯಾಗಿ ಚಿನ್ನದ ಅಂಬಾರಿ ಹೊತ್ತು ಐತಿಹಾಸಿಕ ಮೈಸೂರು ದಸರಾವನ್ನು ಯಶಸ್ವಿಗೊಳಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಾ ಬಂದಿದ್ದಾನೆ. ಈ ಬಾರಿ ಅರ್ಜುನನಿಲ್ಲದ ದಸರಾ ನಡೆಯುತ್ತಿದ್ದು, ನಿಶಾನೆ ಆನೆಯಾಗಿ ಯಾರು ಜಂಬೂಸವಾರಿಯನ್ನು ಮುನ್ನಡೆಸುತ್ತಾರೆ ಎಂಬ ಕುತೂಹಲವೂ ಕಾಡುತ್ತಿದೆಯಾದರೂ ಸದ್ಯಕ್ಕೆ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ಒಂಬತ್ತು ಆನೆಗಳು ಮೈಸೂರನ್ನು ತಲುಪಿದ್ದು ಶುಕ್ರವಾರ ಅರಮನೆ ಪ್ರವೇಶಿಸಲಿವೆ.

ಮೈಸೂರು ದಸರಾ ಎಂದರೆ ಅದು ಜಂಬೂಸವಾರಿ ಎಂಬುದು ಎಲ್ಲರಿಗೂ ಗೊತ್ತಿರುವ ವಿಚಾರವೇ. ಜಂಬೂ ಸವಾರಿ ಯಶಸ್ವಿಯಾದರೆ ಇಡೀ ದಸರಾ ಯಶಸ್ವಿಯಾದಂತೆ. ಸಾವಿರ ಕೆಜಿಯ ಚಿನ್ನದ ಅಂಬಾರಿಯಲ್ಲಿ ವೀರಾಜಮಾನಳಾದ ಚಾಮುಂಡೇಶ್ವರಿಯನ್ನು ಹೊತ್ತು ಸಾಗುವುದು ಸುಲಭವಲ್ಲ. ಆದರೆ ಅದನ್ನು ಅಭಿಮನ್ಯು ಯಶಸ್ವಿಯಾಗಿ ನಿರ್ವಹಿಸುತ್ತಾ ಬರುವುದರೊಂದಿಗೆ ಎಲ್ಲರ ಮೆಚ್ಚುಗೆಗೆ ಪಾತ್ರನಾಗಿದ್ದಾನೆ. ಪ್ರತಿ ವರ್ಷವೂ ಎರಡು ತಿಂಗಳುಗಳ ಕಾಲ ವಿವಿಧ ತಾಲೀಮು ನಡೆಸಿ ಸಿದ್ಧತೆ ಮಾಡಲಾಗುತ್ತಿದೆ.

Mysuru Dasara 2024 How Abhimanyu Became The Captain Of The Dasara Gajapade

ಕೆಲವು ವರ್ಷಗಳ ಹಿಂದೆ ಜಂಬೂಸವಾರಿಯಲ್ಲಿ ಪಾಲ್ಗೊಂಡು ಸಂಗೀತಗಾರರ ಸಂಗೀತ ಗಾಡಿಯನ್ನು ಎಳೆಯುತ್ತಿದ್ದ ಅಭಿಮನ್ಯು ಇದೀಗ ಚಿನ್ನದ ಅಂಬಾರಿಯನ್ನು ಹೊರುವ ಜವಬ್ದಾರಿಯನ್ನು ಹೊತ್ತುಕೊಂಡು ಅದನ್ನು ಯಶಸ್ವಿಯಾಗಿ ನೆರವೇರಿಸುತ್ತಾ ಬಂದಿರುವುದು ವಿಶೇಷವಾಗಿದೆ. ಆ.23ರಂದು ಅರಮನೆಯನ್ನು ಅಭಿಮನ್ಯು ನೇತೃತ್ವದಲ್ಲಿ ಧನಂಜಯ, ಭೀಮ, ಗೋಪಿ, ಕಂಜನ್, ರೋಹಿತ್, ಏಕಲವ್ಯ, ವರಲಕ್ಷ್ಮೀ ಮತ್ತು ಲಕ್ಷ್ಮೀ ಅರಮನೆ ಪ್ರವೇಶಿಸಲಿದ್ದು, ಇವುಗಳ ತೂಕ ಪರೀಕ್ಷೆ ನಂತರ ತಾಲೀಮು ಆರಂಭವಾಗಲಿದೆ.

ಅಂಬಾರಿ ಹೊರುವ ಮಹತ್ವದ ಕಾರ್ಯ

ಮೈಸೂರು ದಸರಾ ಎಂದಾಕ್ಷಣ ನಮ್ಮೆಲ್ಲರ ಚಿತ್ತ ಜಂಬೂಸವಾರಿಯತ್ತ ಹರಿಯುವುದು ಸಹಜ. ಈ ಜಂಬೂ ಸವಾರಿ ಮಹಾರಾಜನರ ಕಾಲದಿಂದಲೂ ನಡೆದು ಬಂದಿದ್ದು, ಅಲ್ಲಿಂದ ಇಲ್ಲಿಯವರೆಗೆ ಹತ್ತು ಹಲವು ಬದಲಾವಣೆಗಳು ಆಗಿದ್ದು, ಹಾಗೆಯೇ ಹಲವು ಹೊಸತನ್ನು ಸೇರ್ಪಡೆ ಮಾಡಿ ಸಾಂಸ್ಕೃತಿಕ ವೈಭವವನ್ನು ಹೆಚ್ಚಿಸಲಾಗಿದೆ. ಜಂಬೂಸವಾರಿ ಬಗ್ಗೆ ಮಾತನಾಡುವಾಗಲೆಲ್ಲ ನಾವು ಅಂಬಾರಿ ಹೊತ್ತು ಸಾಗುವ ಆನೆಗಳ ಶಕ್ತಿ ಸಾಮರ್ಥ್ಯಕ್ಕೆ ಸಲಾಮ್ ಹೊಡೆಯಲೇ ಬೇಕು. ಈ ಬಾರಿಯೂ ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುವ ಮಹತ್ವದ ಕಾರ್ಯವನ್ನು ನಿರ್ವಹಿಸಲು ಸಜ್ಜಾಗುತ್ತಿದ್ದಾನೆ.

Mysuru Dasara 2024 How Abhimanyu Became The Captain Of The Dasara Gajapade

ಇನ್ನು ಜಂಬೂಸವಾರಿಯಲ್ಲಿ ಚಿನ್ನದ ಅಂಬಾರಿ ಹೊರುತ್ತಿರುವ ಅಭಿಮನ್ಯು ಬಗ್ಗೆ ಮೆಲುಕು ಹಾಕಲೇ ಬೇಕಾಗುತ್ತದೆ. ಇದು ಅಂಬಾರಿ ಹೊರುವ ಮುನ್ನ ಹಲವು ವರ್ಷಗಳ ಕಾಲ ಜಂಬೂಸವಾರಿಯಲ್ಲಿ ಸಂಗೀತಗಾರರ ಗಾಡಿಯನ್ನು ಎಳೆಯುವ ಕಾರ್ಯವನ್ನು ಮಾಡುತ್ತಿತ್ತು. ನಿಜ ಹೇಳಬೇಕೆಂದರೆ ಜಂಬೂಸವಾರಿಯಲ್ಲಿ ಅರಮನೆ ಸಂಗೀತಗಾರರ ಗಾಡಿಯನ್ನು ಎಳೆಯುವುದು ಸುಲಭವಲ್ಲ. ಏಕೆಂದರೆ ಜಂಬೂಸವಾರಿ ವೇಳೆ ಬೃಹತ್ ಗಾಡಿಯಲ್ಲಿ ಸಂಗೀತಗಾರರು ಆಸೀನರಾಗಿ ಸಂಗೀತದ ಸುಧೆ ಹರಿಸುತ್ತಿದ್ದರೆ, ಅವರನ್ನು ಎಳೆದೊಯ್ಯುತ್ತಾ ಮುನ್ನಡೆಯ ಬೇಕು. ಈ ಗಾಡಿ ಸಾವಿರಾರು ಕೆಜಿಯಷ್ಟು ತೂಕವಿದ್ದು ಅದನ್ನು ನಿಯಂತ್ರಿಸುತ್ತಾ ಮುನ್ನಡೆಯ ಬೇಕಾಗುತ್ತದೆ.

ಸಂಗೀತಗಾಡಿ ಎಳೆಯುವುದು ಸುಲಭದ ಕೆಲಸವಲ್ಲ

ಈ ಕಾರ್ಯವನ್ನು ಅಭಿಮನ್ಯು ಯಶಸ್ವಿಯಾಗಿ ಮಾಡುತ್ತಾ ಬಂದಿತ್ತು. ಈ ಸಂಗೀತ ಗಾಡಿಗೆ ಜಂಬೂಸವಾರಿಯಲ್ಲಿ ಮಹತ್ವದ ಸ್ಥಾನ ನೀಡಲಾಗಿದೆ. ಮಹಾರಾಜರ ಕಾಲದಲ್ಲಿ ಸಂಗೀತಗಾರರಿಗೆ ಹೆಚ್ಚಿನ ಮಹತ್ವ ನೀಡಲಾಗುತ್ತಿತ್ತು. ಮಹಾರಾಜರು ತಮ್ಮ ಆಸ್ಥಾನದಲ್ಲಿದ್ದ ಸಂಗೀತಗಾರರು ಜಂಬೂಸವಾರಿಯಲ್ಲಿ ಸಾಗಲು ಅವಕಾಶ ಮಾಡಿಕೊಟ್ಟಿದ್ದರು. ಅಷ್ಟೇ ಅಲ್ಲದೆ ಅವರು ಸಂಗೀತವನ್ನು ನುಡಿಸಲು ಅನುಕೂಲವಾಗುವಂತೆ ನಾಲ್ಕು ಚಕ್ರಗಳ ಛಾವಣಿ ಹೊಂದಿದ ಸುಂದರವಾದ ಬೃಹತ್ ಗಾಡಿಯನ್ನು ನಿರ್ಮಿಸಿದ್ದರು. ಈ ಗಾಡಿಯನ್ನು ಆನೆಗಳಿಂದ ಎಳೆಸಲಾಗುತ್ತಿತ್ತು.

Mysuru Dasara 2024 How Abhimanyu Became The Captain Of The Dasara Gajapade

ಅರಮನೆಯಿಂದ ಹೊರಟು ಬನ್ನಿಮಂಟಪದವರೆಗೂ ಸುಮಾರು ಆರು ಕಿ.ಮೀ. ದೂರದವರೆಗೂ ಸಂಗೀತ ಇಂಪು ಪಸರಿಸುತ್ತಿತ್ತು. ಹಿಂದಿನ ಈ ಸಂಪ್ರದಾಯವನ್ನು ಇಂದಿಗೂ ಮುಂದುವರೆದುಕೊಂಡು ಬಂದಿದ್ದು, ಅದನ್ನು ದಶಕಕ್ಕೂ ಹೆಚ್ಚು ಕಾಲ ಅಭಿಮನ್ಯು ಚಾಚು ತಪ್ಪದೆ ನಿರ್ವಹಿಸಿದ್ದನು. ಸಂಗೀತಗಾರರನ್ನು ಕೊಂಡೊಯ್ಯುವ ಬೃಹತ್ ಗಾಡಿ ಸುಸ್ಥಿತಿಯಲ್ಲಿದೆಯಾ ಎಂದು ಪರಿಶೀಲನೆ ನಡೆಸಿದ ಬಳಿಕ ಅದನ್ನು ಎಳೆದು ಗಾಡಿ ಸುಸ್ಥಿತಿಯಲ್ಲಿದೆ ಎಂಬುದನ್ನು ಮನದಟ್ಟು ಮಾಡಿಕೊಂಡ ಬಳಿಕ ಜಂಬೂಸವಾರಿಯಲ್ಲಿ ಸೇರ್ಪಡೆಗೊಳಿಸಲಾಗುತ್ತಿತ್ತು. ಅದು ಆಚೆಗಿರಲಿ.

1977ರಲ್ಲಿ ಕೊಡಗಿನಲ್ಲಿ ಸೆರೆ ಸಿಕ್ಕ ಅಭಿಮನ್ಯು

ಅಭಿಮನ್ಯು ಬಗ್ಗೆ ಹೇಳುವುದಾದರೆ ಒಂದು ಕಾಲದಲ್ಲಿ ಇದು ಎಲ್ಲಾ ಆನೆಗಳಂತೆ ಕೊಡಗಿನ ಅರಣ್ಯದಲ್ಲಿ ಅಂಡಲೆಯುತ್ತಾ ಪುಂಡಾಟ ನಡೆಸುತ್ತಿತ್ತು. ಹೀಗಾಗಿ ಇದನ್ನು 1977 ರಲ್ಲಿ ಕೊಡಗಿನ ಹೆಬ್ಬಳ್ಳ ಅರಣ್ಯ ಪ್ರದೇಶದಲ್ಲಿ ಸೆರೆಹಿಡಿದು ಪಳಗಿಸಿ ಅಭಿಮನ್ಯು ಎಂದು ನಾಮಕರಣ ಮಾಡಲಾಯಿತು. ಬಲಿಷ್ಠನಾಗಿರುವ ಈತನನ್ನು ಪುಂಡಾನೆಗಳನ್ನು ಸೆರೆಹಿಡಿದು ಪಳಗಿಸಲು ಮತ್ತು ಚಿಕಿತ್ಸೆ ನೀಡಲು ಬಳಸಿಕೊಳ್ಳಲಾಗುತ್ತದೆ. ಸದ್ಯ ಈತನ ವಯಸ್ಸು 58ವರ್ಷವಾಗಿದ್ದು, ಕಳೆದ 25 ವರ್ಷಗಳಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಳ್ಳುತ್ತಿದೆ.

ಗಜಪಯಣಕ್ಕೆ ಹುಣಸೂರಿನ ವೀರನಹೊಸಳ್ಳಿಯಲ್ಲಿ ಬುಧವಾರ ಚಾಲನೆ ದೊರೆತು ಮೈಸೂರು ನಗರವನ್ನು ಪ್ರವೇಶ ಮಾಡಿ ಅರಣ್ಯಭವನದಲ್ಲಿ ವಾಸ್ತವ್ಯ ಹೂಡಿರುವ ಅಭಿಮನ್ಯು ನೇತೃತ್ವದ ಗಜಪಡೆಯನ್ನು ಅರಮನೆಗೆ ಶುಕ್ರವಾರ(ಆ.23) ಪ್ರವೇಶ ಪಡೆಯಲಿವೆ. ಆ ನಂತರ ಆರಮನೆ ಆವರಣದಲ್ಲಿ ಬೀಡು ಬಿಡುವ ಗಜಪಡೆ ಪ್ರತಿದಿನವೂ ಅಲ್ಲಿಂದಲೇ ಅಭಿಮನ್ಯು ನೇತೃತ್ವದಲ್ಲಿ ತಾಲೀಮು ಆರಂಭಿಸಲಿವೆ. ಗಜಪಡೆ ಅರಮನೆ ಪ್ರವೇಶದ ಬಳಿಕ ಮೈಸೂರಿಗೆ ದಸರಾ ಕಳೆಬರಲಿದೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+