Get Updates
Get notified of breaking news, exclusive insights, and must-see stories!

Mysuru Dasara 2024: ಮೈಸೂರು ಅರಮನೆಯಲ್ಲಿ ಆಯುಧಪೂಜೆ ಹೇಗಿರಲಿದೆ?-ಇಲ್ಲಿದೆ ಮಾಹಿತಿ

Mysuru Dasara 2024 Ayudha Pooja: ರಾಜಮಹಾರಾಜರ ಕಾಲದಿಂದಲೂ ಆಯುಧಪೂಜೆಗೆ ತನ್ನದೇ ಆದ ಮಹತ್ವವಿದೆ. ವರ್ಷಪೂರ್ತಿ ಖಡ್ಗ ಹಿಡಿದು ಶತ್ರುಸಂಹಾರ ಮಾಡುತ್ತಿದ್ದ ಮಹಾರಾಜರು ವಿಜಯದಶಮಿಗೆ ಮುನ್ನ ದಿನ ತಮ್ಮ ಆಯುಧಗಳಿಗೆ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸುತ್ತಿದ್ದರು. ಕೇವಲ ಆಯುಧ ಮಾತ್ರವಲ್ಲದೆ, ಯುದ್ಧದಲ್ಲಿ ಭಾಗಿಯಾಗುತ್ತಿದ್ದ ಆನೆ, ಕುದುರೆ ಮತ್ತು ಅರಮನೆಯಲ್ಲಿರುತ್ತಿದ್ದ ಹಸು, ಒಂಟೆಗಳಿಗೂ ಪೂಜೆಯನ್ನು ಸಲ್ಲಿಸಲಾಗುತ್ತಿತ್ತು.

ಈ ಪದ್ಧತಿ ಈಗಲೂ ಮುಂದುವರೆದುಕೊಂಡು ಬಂದಿದ್ದು, ರಾಜಪರಂಪರೆಯನ್ನು ಸಾರುತ್ತಿರುವ ಮೈಸೂರು ಅರಮನೆಯಲ್ಲಿಯೂ ಅದ್ಧೂರಿಯಾಗಿ ಆಯುಧ ಪೂಜೆಯನ್ನು ಮಾಡಲಾಗುತ್ತಿದೆ. ಇನ್ನು ದ್ರೌಪದಾಯುಗದಲ್ಲಿ ಅರ್ಜುನನು ಅಜ್ಞಾತವಾಸದಲ್ಲಿದ್ದ ಸಂದರ್ಭದಲ್ಲಿ ಬನ್ನಿಮರದಲ್ಲಿಟ್ಟ ಶಸ್ತ್ರಗಳನ್ನು ತೆಗೆದು ಪೂಜಿಸಿದ ದಿನ ಆಯುಧ ಪೂಜೆಯೆಂದೂ, ವಿರಾಟನ ಗೋವುಗಳನ್ನು ಸೆರೆ ಹಿಡಿದ ಕೌರವ ಸೈನ್ಯದ ಮೇಲೆ ಆಕ್ರಮಣ ಮಾಡಿ ವಿಜಯ ಸಾಧಿಸಿದ ದಿನ ವಿಜಯದಶಮಿ ಎಂದು ಹೇಳಲಾಗುತ್ತಿದೆ.

Mysuru Dasara 2024 Grand Ayudha Pooja Celebration at Palace Know details

ಸೈನ್ಯ ಮತ್ತು ಆಯುಧಗಳು ರಾಜರ ಆಡಳಿತದಲ್ಲಿ ಪ್ರಮುಖವಾಗಿದ್ದವು. ಸದಾ ಯುದ್ಧಗಳಲ್ಲಿಯೇ ನಿರತರಾಗಿರುತ್ತಿದ್ದ ರಾಜರು ಆಯುಧಗಳಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು. ಅಲ್ಲದೆ, ಯುದ್ಧದ ಗೆಲುವಿಗಾಗಿ ಆಯುಧ ಪೂಜೆ ಮಾಡುತ್ತಿದ್ದರು. ಪ್ರಜಾಪ್ರಭುತ್ವದ ಈ ಕಾಲದಲ್ಲಿ ಕೆಲವರು ತಮ್ಮ ಮನೆಗಳಲ್ಲಿರುವ ಆಯುಧ, ವಾಹನ, ದಿನನಿತ್ಯ ಕೆಲಸ ಕಾರ್ಯಗಳಿಗೆ ಬಳಸುವ ಯಂತ್ರಗಳು ಸೇರಿದಂತೆ ವಿವಿಧ ಉಪಕರಣಗಳಿಗೆ ಪೂಜೆ ಸಲ್ಲಿಸುತ್ತಾರೆ.

ಇದೆಲ್ಲದರ ನಡುವೆ ಮೈಸೂರು ಅರಮನೆಯಲ್ಲಿ ಅಂದಿನ ರಾಜಮಹಾರಾಜರ ಕಾಲದಲ್ಲಿ ಹೇಗೆ ಆಯುಧ ಪೂಜೆಯನ್ನು ನಡೆಸಲಾಗುತ್ತಿತ್ತೋ ಅದೇ ರೀತಿಯಲ್ಲಿ ಈಗಲೂ ನಡೆಸುತ್ತಿರುವುದು ವಿಶೇಷವಾಗಿದೆ. ಹಾಗೆನೋಡಿದರೆ, ಮೈಸೂರು ರಾಜವಂಶಸ್ಥರು ಆಯುಧಪೂಜೆ ಮತ್ತು ವಿಜಯದಶಮಿ ಸಂಪ್ರದಾಯವನ್ನು ಮುನ್ನಡೆಸಿಕೊಂಡು ಬಂದಿದ್ದು, ಸುಮಾರು ನಾನೂರು ವರ್ಷಗಳ ಸುಧೀರ್ಘ ಇತಿಹಾಸವಿರುವುದನ್ನು ನಾವು ಕಾಣಬಹುದಾಗಿದೆ. ಅದರಲ್ಲೂ ಮೈಸೂರು ಮಹಾರಾಜರು ಸಂಪ್ರದಾಯವನ್ನು ಚಾಚೂ ತಪ್ಪದೆ ಪಾಲಿಸಿಕೊಂಡು ಬಂದಿರುವುದೇ ಹೆಮ್ಮೆಯಾಗಿದೆ.

ಮೈಸೂರು ಅರಮನೆಯಲ್ಲಿ ಆಯುಧಪೂಜಾ ಕಾರ್ಯಕ್ರಮ ಹೇಗೆ ನಡೆಯುತ್ತದೆ ಎನ್ನುವುದನ್ನು ನೋಡುವುದಾದರೆ, ಆಯುಧ ಪೂಜೆಯ ದಿನದಂದು ಯುವರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅಂಬಾ ವಿಲಾಸ ಅರಮನೆಯ ಕರಿಕಲ್ಲು ತೊಟ್ಟಿಯಲ್ಲಿ ಆಯುಧಗಳು ಸೇರಿದಂತೆ ತಮ್ಮಲ್ಲಿರುವ ವಾಹನ ಪಟ್ಟದ ಆನೆ, ಕುದುರೆ ಹಸುಗಳಿಗೆ ಪೂಜೆಯನ್ನು ಸಲ್ಲಿಸುತ್ತಾರೆ. ಈ ವಿಧ-ವಿಧಾನಗಳು ಪೂಜಾ ಕಾರ್ಯಗಳು ಪ್ರಾತಃಕಾಲದಲ್ಲಿ ಆರಂಭಗೊಂಡು ಮಧ್ಯಾಹ್ನದವರೆಗೂ ನಡೆಯುತ್ತದೆ.

ಮೊದಲಿಗೆ ಸಾಲಿಗ್ರಾಮ ಪೂಜೆ: ಮೊದಲಿಗೆ ಅರಮನೆಯ ಆವರಣದಲ್ಲಿ ಆಯುಧಪೂಜೆಯನ್ನು ರಾಜಪರಂಪರೆಯಂತೆ ಆರಂಭಿಸಲಾಗುತ್ತದೆ. ಆರಂಭದಲ್ಲಿ ಸಾಲಿಗ್ರಾಮ ಪೂಜೆ ನೇರವೇರಿಸಿ, ನಂತರ ಅರಮನೆ ಆವರಣದಲ್ಲಿರುವ ಕೋಡಿ ಸೋಮೇಶ್ವರ ದೇವಾಲಯಕ್ಕೆ ಚಿನ್ನದ ಖಡ್ಗ, ಪಿಸ್ತೂಲು ಸೇರಿದಂತೆ ಅರಮನೆಯ ಆಯುಧಗಳನ್ನು ಚಿನ್ನಲೇಪಿತ ಪಲ್ಲಕ್ಕಿಯಲ್ಲಿ ಕೊಂಡೊಯ್ದು ಪುರಾತನ ಬಾವಿಯ ಗಂಗೆಯಿಂದ ಅದನ್ನು ಶುಚಿಗೊಳಿಸಿ ಬಳಿಕ ಪೂಜೆ ನೆರವೇರಿಸಲಾಗುತ್ತದೆ.

ಇದೇ ಸಮಯದಲ್ಲಿ ಅರಮನೆಯಲ್ಲಿ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರು ವಿವಿಧ ಪೂಜೆ ಹೋಮ ಹವನಗಳನ್ನು ನೇರವೇರಿಸುತ್ತಾರೆ. ಅಷ್ಟರಲ್ಲಿ ಅದೇ ಸಮಯಕ್ಕೆ ಕೋಡಿ ಸೋಮೇಶ್ವರ ದೇವಾಲಯದಿಂದ ಶುಚಿಗೊಳಿಸಿ ಪಲ್ಲಕಿಯಲ್ಲಿ ತಂದ ಆಯುಧ ಸೇರಿದಂತೆ ಇತರೆ ವಸ್ತುಗಳನ್ನು ಅರಮನೆಯ ಆನೆಬಾಗಿಲು ಮೂಲಕ ಕಲ್ಯಾಟಮಂಟಪಕ್ಕೆ ಕೊಂಡೊಯ್ದು ಜೋಡಿಸಲಾಯಿತು.

ಪೂಜೆಗೆ ರಾಜಪುರೋಹಿತರ ಮಾರ್ಗದರ್ಶನ: ಆ ನಂತರ ಆಗಮಿಸಿದ ರಾಜಪುರೋಹಿತರು ನೀಡಿದ ಮಾರ್ಗದರ್ಶನದಂತೆ ಆಯುಧಗಳನ್ನು ಜೋಡಿಸಿ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಎಲ್ಲ ಆಯುಧಗಳಿಗೆ ಪೂಜೆ ಸಲ್ಲಿಸುತ್ತಾರೆ. ಇದೆಲ್ಲದರ ನಡುವೆ ನವರಾತ್ರಿ ಆರಂಭದಲ್ಲಿ ಖಾಸಗಿ ದರ್ಬಾರ್‌ಗೆ ಮುನ್ನ ಸಿಂಹಾಸನಕ್ಕೆ ಜೋಡಿಸಿದ್ದ ಸಿಂಹಕ್ಕೆ ಪೂಜೆ ಸಲ್ಲಿಸಿ ಅದನ್ನು ವಿಸರ್ಜಿಸಲಾಗುತ್ತದೆ. ಆಯುಧ ಪೂಜೆಯ ಹಿನ್ನೆಲೆ ಬೆಳಗ್ಗೆ ಚಂಡಿಕಾ ಹೋಮ ಆರಂಭಿಸಿ ಬಳಿಕ ಪೂರ್ಣಾಹುತಿ ನಡೆಯುತ್ತದೆ.

ನಂತರ ಕರಿಕಲ್ಲು ತೊಟ್ಟಿಯಲ್ಲಿ ಅರಮನೆಯಲ್ಲಿರುವ ಐಷಾರಾಮಿ ಕಾರು ಮತ್ತು ಇತರೆ ವಾಹನಗಳಿಗೂ ಪೂಜೆಯನ್ನು ಮಾಡಲಾಗುತ್ತದೆ. ಹಿಂದಿನ ಕಾಲದ ಸಂಪ್ರದಾಯದಂತೆ ಅರಮನೆಯಲ್ಲಿರುವ ಪಟ್ಟದ ಆನೆ, ಪಟ್ಟದ ಕುದುರೆಗಳು, ಪಟ್ಟದ ಒಂಟೆಗಳು, ಪಟ್ಟದ ಹಸುಗಳು ಹಾಗೂ ಅರಮನೆ ಆರು ಆನೆಗಳಿಗೂ ಸಂಪ್ರದಾಯಬದ್ಧ ಪೂಜೆ ನೆರವೇರಿಸಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ.

ಸಾರ್ವಜನಿಕರಿಂದ ಅದ್ಧೂರಿ ಆಯುಧಪೂಜೆ: ಈ ವೇಳೆ ರಾಜವಂಶಸ್ಥೆ ಪ್ರಮೋದಾದೇವಿ ಹಾಗೂ ಯದುವೀರರ ಪತ್ನಿ ತ್ರಿಷಿಕಾಕುಮಾರಿ ಮತ್ತು ಪುತ್ರ ಆದ್ಯವೀರ್ ಸೇರಿದಂತೆ ರಾಜಮನೆತನದ ಹಲವರು ಉಪಸ್ಥಿತರಿರುತ್ತಾರೆ. ಇದರಾಚೆಗೆ ಸಾರ್ವಜನಿಕ ವಲಯದಲ್ಲಿ ಮನೆ, ಕಚೇರಿಗಳು, ಅಂಗಡಿ, ಮಳಿಗೆಗಳಲ್ಲಿ ಪೂಜೆಗಳು ನಡೆಯುತ್ತವೆ. ವಾಹನಗಳಿಗೆ ಪೂಜೆ ಸಲ್ಲಿಸಿ ಯಾವುದೇ ತೊಂದರೆಯಾಗದಂತೆ ಬೇಡಿಕೊಳ್ಳುವುದು ನಡೆಯುತ್ತದೆ. ಒಟ್ಟಾರೆ ಆಯುಧಪೂಜಾ ಕಾರ್ಯಕ್ರಮ ಹೊರಗೆ ಅದ್ಧೂರಿಯಾಗಿ ನಡೆಯುತ್ತಿರುತ್ತದೆ.

ಅರಮನೆಯೊಳಗೆ ಸಂಪ್ರದಾಯಬದ್ಧವಾಗಿ ಆಯುಧಪೂಜೆ ನಡೆಯುವ ಮೂಲಕ ಇತಿಹಾಸದ ರಾಜವೈಭವ ಮರುಕಳಿಸಿದ ಅನುಭವವಾಗುತ್ತದೆ. ಒಟ್ಟಿನಲ್ಲಿ ಹೇಳಬೇಕಾದರೆ ನವರಾತ್ರಿಯ ಅಂತಿಮ ಘಟ್ಟದ ಸಂಭ್ರಮೋಲ್ಲಾಸದ ಈ ಸಂದರ್ಭ ಮಹಾರಾಜರ ದಿವ್ಯ ಸಾನಿಧ್ಯದಲ್ಲಿ ಜರುಗುವ ಆಯುಧಪೂಜೆ ಆಳರಸರ ಗತಕಾಲದ ವೈಭವವನ್ನು ನಮ್ಮ ಮುಂದೆ ತೆರೆದಿಡುವ ದೃಶ್ಯಕಾವ್ಯ ಎಂದರೆ ತಪ್ಪಾಗಲಾರದು.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+