ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ದಸರಾ: ನೇರವಾಗಿ 15 ಲಕ್ಷ, ಆನ್‌ಲೈನ್‌ ಮೂಲಕ 6.5 ಲಕ್ಷ ಜನರಿಂದ ವೀಕ್ಷಣೆ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಅಕ್ಟೋಬರ್‌, 10: ಮೈಸೂರು ದಸರಾ ಮಹೋತ್ಸವವನ್ನು 15 ಲಕ್ಷ ಜನರು ನೇರವಾಗಿ ನೋಡಿ ಕಣ್ತುಂಬಿಕೊಂಡಿದ್ದಾರೆ. ಆನ್‌ಲೈನ್‌ನಲ್ಲಿ 6.5 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ. ಆಶ್ಚರ್ಯವೆಂದರೆ ಪುನೀತ್ ರಾಜ್‌ಕುಮಾರ್ ಅವರಿಗೆ ನುಡಿನಮನ ಸಲ್ಲಿಸುವ ಉದ್ದೇಶದಿಂದ ನಡೆಸಿದ್ದ 'ಅಪ್ಪು ನಮನ' ಕಾರ್ಯಕ್ರಮವನ್ನು 3.5 ಲಕ್ಷ ಜನರು ವೀಕ್ಷಿಸಿದ್ದಾರೆ.

ಮಧುರ ಧ್ವನಿಯ ಗಾಯಕ ಎಂದೇ ಪ್ರಖ್ಯಾತಿ ಪಡೆದಿರುವ ಸೋನು ನಿಗಮ್ ಅವರು ಈ ಬಾರಿ 'ಯುವ ದಸರೆ'ಯಲ್ಲಿ ನಡೆಸಿಕೊಟ್ಟ ಸಂಗೀತ ಕಾರ್ಯಕ್ರಮ ಹೆಚ್ಚು ಜನರನ್ನು ಸೆಳೆದಿದೆ. 60 ಸಾವಿರಕ್ಕೂ ಹೆಚ್ಚು ಜನರು ಆನ್‌ಲೈನ್‌ನಲ್ಲಿ ಈ ಕಾರ್ಯಕ್ರಮವನ್ನು ನೋಡಿದ್ದಾರೆ. 4.7 ಲಕ್ಷ ಜನರು ಗಾಯನದ ಸವಿಯನ್ನು ಮೆಚ್ಚಿಕೊಂಡಿದ್ದಾರೆ. ಇನ್ನು ಬಾಲಿವುಡ್ ಗಾಯಕಿ ಸುನಿಧಿ ಚೌಹಾಣ್ ಗಾಯನವನ್ನು 3.5 ಲಕ್ಷ ಜನರು ವರ್ಚುವಲ್‌ನಲ್ಲಿ ನೋಡಿದ್ದಾರೆ. ಒಟ್ಟಾರೆ ಯುವ ದಸರಾವನ್ನು 21 ಲಕ್ಷ ಹಾಗೂ ಅರಮನೆ ಮುಂದೆ ನಡೆದ ಸಾಂಸ್ಕೃತಿಕ ಕಾರ್ಯಕ್ರಮವನ್ನು 8 ಲಕ್ಷ ಜನರು ವೀಕ್ಷಣೆ ಮಾಡಿದ್ದಾರೆ.

ಮೈಸೂರು ದಸರಾದ ಖರ್ಚಿನ ಲೆಕ್ಕ ಕೊಡಿ; ಎಚ್. ವಿಶ್ವನಾಥ್ ಆಗ್ರಹಮೈಸೂರು ದಸರಾದ ಖರ್ಚಿನ ಲೆಕ್ಕ ಕೊಡಿ; ಎಚ್. ವಿಶ್ವನಾಥ್ ಆಗ್ರಹ

ಆನ್‌ಲೈನ್‌ಗೂ ಭರ್ಜರಿ ಸ್ಪಂದನೆ
ಕೋವಿಡ್ ಕಾರಣದಿಂದ ಕಳೆದ ಎರಡು ವರ್ಷ ಸರಳವಾಗಿ ದಸರಾ ಮಹೋತ್ಸವ ನಡೆದಿತ್ತು. ಈ ವೇಳೆ ಅರಮನೆ ಮುಂಭಾಗದ ವೇದಿಕೆಯಲ್ಲಿ ನಡೆಸಿದ ದಸರಾ ಸಾಂಸ್ಕೃತಿಕ ಕಾರ್ಯಕ್ರಮವನ್ನು ಆಫ್‌ಲೈನ್‌ಗಿಂತ ಆನ್‌ಲೈನ್‌ನಲ್ಲಿಯೇ ಹೆಚ್ಚು ಜನರು ವೀಕ್ಷಣೆ ಮಾಡಿದ್ದಾರೆ ಎನ್ನುವ ದತ್ತಾಂಶ ಲಭ್ಯ ಆಗಿದೆ. ಈ ಬಾರಿ ಆನ್‌ಲೈನ್‌ನಲ್ಲೇ ದಸರಾ ವೈಭವವನ್ನು ಹೆಚ್ಚು ಜನರು ಆಸ್ವಾದಿಸಿದ್ದು, ಆನ್‌ಲೈನ್‌ಗೂ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ. ಕಳೆದ ವರ್ಷ ಗಾಯಕ ರಾಜೇಶ್ ಕೃಷ್ಣನ್ ನಡೆಸಿಕೊಟ್ಟಿದ್ದ 'ಎಸ್‌ಪಿಬಿ ನುಡಿನಮನ' ಕಾರ್ಯವನ್ನು ವಾರ್ತಾ ಇಲಾಖೆಯ ಪೇಸ್‌ಬುಕ್ ಪೇಜ್‌ನಲ್ಲಿ 1.93 ಲಕ್ಷ ಜನ ವೀಕ್ಷಿಸಿದ್ದರು. ಆ ಮೂಲಕ ಮೈಸೂರಿನ ಪ್ರವಾಸೋದ್ಯಮ ದೃಷ್ಟಿಯಿಂದ ವರ್ಚುವಲ್ ಟೂರಿಸಂಗೆ ಬೇಡಿಕೆ ಹೆಚ್ಚಾಗಿದೆ.

Mysuru Dasara 2022: 15 People watched directs , 6.5 lakh people in online

6.7 ಲಕ್ಷ ಜನ ದಸರಾ ವೆಬ್‌ಸೈಟ್ ವೀಕ್ಷಣೆ
ಈ ಬಾರಿ ಹಲವು ಹೊಸತನದೊಂದಿಗೆ ಉದ್ಘಾಟನೆಗೊಂಡ ದಸರಾ 'ವೆಬ್‌ಸೈಟ್' ಅನ್ನು ಇಲ್ಲಿಯವರೆಗೂ 6.7 ಲಕ್ಷ ಜನ ವೀಕ್ಷಣೆ ಮಾಡಿದ್ದಾರೆ. ಕನ್ನಡ ಮತ್ತು ಇಂಗ್ಲಿಷ್ ಎರಡೂ ಭಾಷೆಯಲ್ಲೂ ಪ್ರವಾಸಿಗರಿಗೆ ಮಾಹಿತಿ ನೀಡಲಾಗಿತ್ತು. ಜಂಬೂ ಸವಾರಿ ಮೆರವಣಿಗೆ, ದಸರಾ ಉದ್ಘಾಟನೆ, ಅರಮನೆ ಆವರಣದಲ್ಲಿ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಪೂರ್ಣ ಮಾಹಿತಿಯನ್ನು ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿತ್ತು. ಮೈಸೂರು ಅರಮನೆ, ಮೃಗಾಲಯ ನಡೆದು ಬಂದ ಹಾದಿ ಸೇರಿದಂತೆ ಸಂಪೂರ್ಣ ವಿವರಗಳು, ದಸರಾ ಹಿನ್ನೆಲೆ, ಉದ್ಘಾಟಕರ ಪರಿಚಯ, ಉಪಸಮಿತಿಗಳ ವಿವರ, ಕಾರ್ಯಕ್ರಮಗಳ ಪಟ್ಟಿ, ಹಿಂದಿನ ದಸರಾ ಮಹೋತ್ಸವದ ಪೋಟೋ, ಪ್ರವಾಸಿ ತಾಣಗಳ ಸಂಪೂರ್ಣ ವಿವರಗಳು ವೆಬ್‌ಸೈಟ್‌ನಲ್ಲಿ ಲಭ್ಯವಿದ್ದವು.

Mysuru Dasara 2022: 15 People watched directs , 6.5 lakh people in online

ವಿದೇಶದಲ್ಲೂ ದಸರಾ ವೀಕ್ಷಣೆ
ಕಳೆದ ವರ್ಷಕ್ಕೆ ಹೋಲಿಸಿದರೆ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಹೊರನಾಡ ಕನ್ನಡಿಗರು ಹಾಗೂ ವಿದೇಶಿಗರು ದಸರಾ ಮಹೋತ್ಸವವನ್ನು ವರ್ಚುವಲ್ ಮಾದರಿಯಲ್ಲೇ ಕಣ್ತುಂಬಿಕೊಂಡಿದ್ದಾರೆ. ಅಮೆರಿಕಾ, ಕೆನಡಾ, ಬ್ರಿಟನ್, ಸಿಡ್ಜರ್‌ಲ್ಯಾಂಡ್ ಸೇರಿದಂತೆ ಇತರೆ ದೇಶದಲ್ಲಿರುವ ಕನ್ನಡಿಗರು ಹಾಗೂ ಇತರೆ ವಿದೇಶಿಗರು ಆನ್ ಲೈನ್‌ನಲ್ಲೇ ದಸರಾ ಆಸ್ವಾದಿಸಿದ್ದಾರೆ.

English summary
Mysuru Dasara 2022: 15 People watched directs , 6.5 lakh people in online . Know more,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X