ದಸರಾ ವೇಳೆ ಹೃದಯಾಘಾತದಿಂದ ‘ಝಾನ್ಸಿರಾಣಿ' ಸಾವು

ಮೈಸೂರು, ಅಕ್ಟೋಬರ್. 24: ಈ ಬಾರಿಯ ದಸರಾ ಮಹೋತ್ಸವ ಅಂತ್ಯ ಕಾಲದಲ್ಲಿ ವಿಷಾದಕಾರಿ ಘಟನೆಯೊಂದಕ್ಕೆ ಸಾಕ್ಷಿಯಾಗಿದೆ. ಜನಾಕರ್ಷಣೆಯ ಪಂಜಿನ ಕವಾಯಿತು ವೇಳೆ ಕುದುರೆಯೊಂದು ಕುಸಿದು ಬಿದ್ದು ಸಾವನ್ನಪ್ಪಿದೆ.

ದಸರಾ ಮಹೋತ್ಸವದ ಪಂಜಿನ ಕವಾಯತಿನಲ್ಲಿ ಪಾಲ್ಗೊಂಡಿದ್ದ ಅಶ್ವಾರೋಹಿ ಪಡೆಯ ಕುದುರೆಯೊಂದು ಕವಾಯಿತು ನಡೆಯುತ್ತಿದ್ದ ವೇಳೆಯೇ ಕುಸಿದು ಬಿದ್ದಿದೆ, ಹಬ್ಬದ ಸಂಭ್ರಮದಲ್ಲಿ ಪಾಲ್ಗೊಂಡಿದ್ದ ನಾಗರಿಕರ ಮನಸ್ಸಿನಲ್ಲಿ ಘಟನೆ ವಿಷಾದ ಮೂಡಿಸಿತು.[ಸುಂದರ ಜಂಬೂ ಸವಾರಿಯೊಂದಿಗೆ ಸರಳ ದಸರಾಗೆ ತೆರೆ]

dasara

ಅಶ್ವಾರೋಹಿ ಪಡೆಯ 'ಆರ್‌.ಎಸ್‌. 24- ಝಾನ್ಸಿರಾಣಿ' (16) ಹೆಣ್ಣುಕುದುರೆ ಕುಸಿದು ಬಿದ್ದು ಮೃತಪಟ್ಟಿತು. ಈ ಬಗ್ಗೆ ಮಾಹಿತಿ ನೀಡಿರುವ ಪೊಲೀಸ್‌ ಕಮಿಷನರ್‌ ಬಿ. ದಯಾನಂದ ಹೃದಯಾಘಾತದಿಂದ ಕುದುರೆ ಅನಿರೀಕ್ಷಿತವಾಗಿ ಸಾವನ್ನಪ್ಪಿರುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.[ಯುವರಾಣಿ ತ್ರಿಷಿಕಾ ಕಾಣದೆ ನಿರಾಶರಾದ ಜನ]

ದಸರಾ ಮೆರವಣಿಗೆ ಬನ್ನಿ ಮಂಟಪ ತಲುಪಿದ ಮೇಲೆ ಪಂಜಿನ ಕವಾಯಿತು ಆರಂಭವಾಯಿತು. ಕುಶಾಲತೋಪುಗಳನ್ನು ಸಿಡಿಸಲಾಯಿತು. ಆದರೆ ಮೈದಾನದಲ್ಲಿದ್ದ 'ಝಾನ್ಸಿರಾಣಿ' ಏಕಾಏಕಿ ಕುಸಿಯಿತು. ಪಶುವೈದ್ಯಕೀಯ ಆಸ್ಪತ್ರೆಗೆ ಸಾಗಿಸುವ ಯತ್ನ ಮಾಡಿದರೂ ಪ್ರಯೋಜನವಾಗಲಿಲ್ಲ.

dasara
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+