ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ನಾಳೆಯಿಂದ ರಸ್ತೆಗಿಳಿಯಲಿದ್ದಾರೆ ಬಾಡಿ ಕ್ಯಾಮ್ ಧರಿಸಿರುವ ಪೊಲೀಸರು

|
Google Oneindia Kannada News

Recommended Video

ರೂಲ್ಸ್ ಮೇಲೆ ರೂಲ್ಸ್ ಬೆಚ್ಚಿಬಿದ್ದ ಜನತೆ..? | New Traffic Rules | Oneindia Kannada

ಮೈಸೂರು, ಸೆಪ್ಟೆಂಬರ್ 6: ಸಂಚಾರಿ ನಿಯಮಗಳನ್ನು ಉಲ್ಲಂಘನೆ ಮಾಡುವುದನ್ನು ಹತೋಟಿಗೆ ತರಲು ಹೊಸ ಹೊಸ ಯೋಜನೆ ತರುವಲ್ಲಿ ಮೈಸೂರು ಟ್ರಾಫಿಕ್ ಪೊಲೀಸ್ ತಂಡ ಯಾವಾಗಲೂ ಒಂದು ಕೈ ಮುಂದು. ಈ ಬಾರಿಯೂ ಹೊಸ ರೀತಿಯ ದಂಡದ ದರಪಟ್ಟಿಯೊಂದಿಗೆ ಬಾಡಿ ಕ್ಯಾಮ್ ಧರಿಸಿದ ಪೊಲೀಸರು ಸಂಚಾರಿ ನಿಯಮ ಉಲ್ಲಂಘನೆಯನ್ನು ನಿಯಂತ್ರಣಕ್ಕೆ ತರಲು ಮುಂದಾಗಿದ್ದಾರೆ.

ಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ದುಪ್ಪಟ್ಟು ದಂಡಸಂಚಾರಿ ನಿಯಮ ಉಲ್ಲಂಘಿಸಿದರೆ ಪೊಲೀಸರಿಗೆ ದುಪ್ಪಟ್ಟು ದಂಡ

ಸಂಚಾರ ನಿಯಮಗಳ ಉಲ್ಲಂಘನೆಗೆ ದಂಡದ ಮೊತ್ತ ಹೆಚ್ಚಳ ಮಾಡಿರುವ ಕೇಂದ್ರ ಸರ್ಕಾರದ ಪರಿಷ್ಕತ ಯೋಜನೆಯೂ ನಾಳೆಯಿಂದ ಮೈಸೂರಿನಲ್ಲಿ ಅನುಷ್ಠಾನಗೊಳ್ಳಲಿದೆ. ಇದರೊಟ್ಟಿಗೆ ಕ್ಯಾಮೆರಾ ಧರಿಸಿರುವ 20 ಪೊಲೀಸರು ನಿಯಮ ಉಲ್ಲಂಘಿಸಿದವರ ಚಿತ್ರವನ್ನು ದಾಖಲಿಸಿಕೊಳ್ಳಲಿದ್ದಾರೆ.

Mysuru city police team has been introduced body camera system

ಈ ಕುರಿತು ಮಾಹಿತಿ ನೀಡಿರುವ ನಗರ ಪೊಲೀಸ್ ಆಯುಕ್ತ ಕೆ.ಟಿ ಬಾಲಕೃಷ್ಣ, ಮುಂದಿನ ದಿನಗಳಲ್ಲಿ ಸಂಚಾರ ನಿಯಮ ಉಲ್ಲಂಘಿಸುವವರನ್ನು ಹತೋಟಿಗೆ ತರಲು ಬಾಡಿ ಕ್ಯಾಮ್ ಗಳ ಸಂಖ್ಯೆಯನ್ನು ದುಪ್ಪಟ್ಟು ಮಾಡಲು ಉದ್ದೇಶಿಸಿದ್ದು ಅದಷ್ಟು ಶೀಘ್ರ ಅನುಷ್ಠಾನಕ್ಕೆ ಬರಲಿದೆ. ಆದ್ದರಿಂದ ಮೈಸೂರಿಗರು ಸಂಚಾರ ನಿಯಮಗಳನ್ನ ಕಡ್ಡಾಯವಾಗಿ ಪಾಲಿಸಿ ಎಂದು ಆಯುಕ್ತರು ಮನವಿ ಮಾಡಿದ್ದಾರೆ.

Mysuru city police team has been introduced body camera system

ನಾಳೆಯಿಂದ ಜಾರಿಯಾಗುವ ನೂತನ ನಿಯಮಯದ ಪ್ರಕಾರ ವಿಮೆ ಇಲ್ಲದೆ ವಾಹನ ಚಾಲನೆ ಮಾಡಿದಲ್ಲಿ ಮೊದಲ ಬಾರಿಗೆ 2 ಸಾವಿರ ರೂ, ಎರಡನೇ ಬಾರಿ ಮತ್ತೆ ಉಲ್ಲಂಘನೆ ಮಾಡಿದರೆ 4 ಸಾವಿರ ರೂ. ದಂಡ ಅಥವಾ 3 ತಿಂಗಳು ಜೈಲು ಶಿಕ್ಷೆ. ನಿಶಬ್ದ ವಲಯದಲ್ಲಿ ವಾಹನ ಶಬ್ದ ಮಾಡಿದರೆ ಮೊದಲ ಬಾರಿಗೆ 1 ಸಾವಿರ, ಎರಡನೇ ಬಾರಿಗೆ 2 ಸಾವಿರ ರೂ. ದಂಡ. ಹೆಲ್ಮೆಟ್ ಧರಿಸದೇ ವಾಹನ ಚಾಲನೆ ಮಾಡಿದಲ್ಲಿ 1 ಸಾವಿರ ದಂಡ. ಕಾರ್ ಸೀಟ್ ಬೆಲ್ಟ್ ಧರಿಸದೇ ಇದಲ್ಲಿ 1 ಸಾವಿರ ದಂಡ. ನೋಂದಣಿ ಮಾಡಿಸದ ವಾಹನ ಚಾಲನೆ ಮಾಡುವುದಕ್ಕೆ ಮೊದಲ ಬಾರಿಗೆ 5 ಸಾವಿರ ರೂ ಹಾಗೂ ಎರಡನೇ ಬಾರಿ ಉಲ್ಲಂಘನೆ ಮಾಡಿದಲ್ಲಿ 10 ಸಾವಿರ ರೂ. ದಂಡ ಅಥವಾ ಒಂದು ವರ್ಷಗಳ ಕಾಲ ಜೈಲು ಶಿಕ್ಷೆ ನೀಡಲು ನಿಯಮವಿದೆ ಎಂದು ತಿಳಿಸಿದರು.

Mysuru city police team has been introduced body camera system

ಸಾರ್ವಜನಿಕ ರಸ್ತೆಯಲ್ಲಿ ರೇಸಿಂಗ್ ಮತ್ತು ವೀಲಿಂಗ್ ಪ್ರಯೋಗ ಮಾಡಿದರೆ, ಮೊದಲ ಬಾರಿಗೆ 5 ಸಾವಿರ ರೂ, 2 ನೇ ಬಾರಿಗೆ 10 ಸಾವಿರ ರೂ. ದಂಡ ಅಥವಾ ಒಂದು ತಿಂಗಳ ಜೈಲುವಾಸ. ಅನಧಿಕೃತ ವ್ಯಕ್ತಿಗಳಿಗೆ ವಾಹನಗಳನ್ನ ಓಡಿಸಲು ಅವಕಾಶ ನೀಡುವುದು ಅಥವಾ ಅಪ್ರಾಪ್ತರು ವಾಹನ ಚಲಾವಣೆ ಮಾಡಿದರೆ 5 ಸಾವಿರ ರೂ. ದಂಡ, ಮದ್ಯ ಸೇವನೆ ಮಾಡಿ ವಾಹನ ಚಲಾಯಿಸಿದರೆ ಮೊದಲ ಬಾರಿಗೆ 10 ಸಾವಿರ ರೂ. ದಂಡ ಅಥವಾ 6 ತಿಂಗಳು ಜೈಲುವಾಸ, ಮೂರು ವರ್ಷದೊಳಗೆ ಮತ್ತೆ ಉಲ್ಲಂಘನೆ ಮಾಡಿದರೆ l5 ಸಾವಿರ ರೂ. ದಂಡ ಅಥವಾ 2 ವರ್ಷ ಜೈಲು ವಾಸ ಶಿಕ್ಷೆ ನೀಡಲಾಗುವುದು ಎಂದು ತಿಳಿಸಿದರು.

Mysuru city police team has been introduced body camera system

ನಾಳೆಯಿಂದ ಜಾರಿಗೆ ತರುವ ನೂತನ ಸಂಚಾರಿ ದಂಡ ನಿಯಮವು ಸರಕಾರಿ ವಾಹನ ಹಾಗೂ ಜನಪ್ರತಿನಿಧಿಗಳ ವಾಹನಗಳಿಗೂ ಅನ್ವಯವಾಗುತ್ತದೆ. ಸರಕಾರಿ ವಾಹನ ಅಥವಾ ವಿಐಪಿ ವಾಹನ ಎಂದು ಯಾರಿಗೂ ವಿನಾಯ್ತಿ ನೀಡುವ ಪ್ರಶ್ನೆಯೇ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.

English summary
Mysuru city police team has been introduced new body camera system to control traffic violation. Tomorrow itself they are going to start their work and implement new fine system in district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X