ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರು ಮಹಾನಗರ ಪಾಲಿಕೆಯಿಂದ 'ಮೈ ಕ್ಲೀನ್ ಸಿಟಿ' ಆಪ್ ಬಿಡುಗಡೆ

|
Google Oneindia Kannada News

ಮೈಸೂರು, ಫೆಬ್ರವರಿ 5:ಮೈಸೂರು ಮಹಾನಗರ ಪಾಲಿಕೆಯು ತನ್ನ ವ್ಯಾಪ್ತಿಯ ಪರಿಸರ ಮತ್ತು ರಸ್ತೆಗಳ ಸಂರಕ್ಷಣೆಗಾಗಿ ಹೊಸ ಆಪ್ ಒಂದನ್ನು ಹೊರತಂದಿದೆ. ಅದುವೇ 'ಮೈ ಕ್ಲೀನ್ ಸಿಟಿ' ಮೊಬೈಲ್ ಅಪ್ಲಿಕೇಷನ್.

ದಿನನಿತ್ಯದ ಸಮಸ್ಯೆಗಳಾದ ರಸ್ತೆ ದುರಸ್ತಿ, ಗುಂಡಿ ಮುಚ್ಚುವಿಕೆ ಸೇರಿದಂತೆ ನೈರ್ಮಲ್ಯದ ಸಮಸ್ಯೆಯನ್ನೂ ಸಹ ನೇರವಾಗಿ ಅಪ್ಲಿಕೇಶನ್ ಬಳಸುವ ಮೂಲಕ ಸಾರ್ವಜನಿಕರು ದೂರು ನೀಡಬಹುದು. ಈ ಮೊಬೈಲ್ ಅನ್ನು ಗೂಗಲ್ ಪ್ಲೇ ಸ್ಟೋರ್ ನಿಂದ ನೇರವಾಗಿ ಡೌನ್ ಲೋಡ್ ಮಾಡಿಕೊಳ್ಳಲು ಮೈಸೂರು ಮಹಾನಗರ ಪಾಲಿಕೆಯ ಲಿಂಕ್ ಗೆ ಲಾಗಿನ್ ಮಾಡಬಹುದು.

ಸ್ವಚ್ಛ ಸರ್ವೇಕ್ಷಣ್ ಅಭಿಯಾನ:ಮೈಸೂರಿಂದ 1 ಲಕ್ಷಕ್ಕೂ ಅಧಿಕ ಮಂದಿ ವೋಟ್ಸ್ವಚ್ಛ ಸರ್ವೇಕ್ಷಣ್ ಅಭಿಯಾನ:ಮೈಸೂರಿಂದ 1 ಲಕ್ಷಕ್ಕೂ ಅಧಿಕ ಮಂದಿ ವೋಟ್

ಈ ಅಪ್ಲಿಕೇಷನ್ ನಲ್ಲಿ ಎಂಸಿಸಿ ನಿರ್ವಹಣೆ ಮಾಡುತ್ತಿರುವ ಮತ್ತು ನಿರ್ಮಾಣ ಮಾಡಿದ ರಸ್ತೆ ಮತ್ತಿತರ ಕಾರ್ಯಗಳ ಮಾಹಿತಿ ಅಂದರೆ ಗುತ್ತಿಗೆದಾರರ ಹೆಸರು ಮತ್ತು ವಿವರ, ಕಾಮಗಾರಿ ಆರಂಭ, ಮುಗಿಯುವ ದಿನಾಂಕ, ನಿರ್ವಹಣೆಯ ಅವಧಿ ಒಳಗೊಂಡ ವಿವರಗಳು ಮೊಬೈಲ್ ಅಪ್ಲಿಕೇಷನ್ ನಲ್ಲೇ ದೊರೆಯಲಿದೆ.

Mysuru city corporation launches new application

ರಸ್ತೆ ಗುಂಡಿಗಳು, ಬೀದಿದೀಪಗಳ ದುರಸ್ತಿ ಮತ್ತು ಹಾಳಾದ ಚರಂಡಿ, ಒಡೆದ ನೀರಿನ ಪೈಪ್ , ಕಸದ ರಾಶಿ, ರಸ್ತೆ ಒತ್ತುವರಿ ಮಾಡಿದ ಸ್ಥಳಗಳ ಬಗ್ಗೆ ಮಾಹಿತಿ, ಪಾದಚಾರಿ ರಸ್ತೆಗಳ ಒತ್ತುವರಿ ಮತ್ತು ಬೀದಿ ಪ್ರಾಣಿಗಳ ಹಾವಳಿ, ಸತ್ತ ಪ್ರಾಣಿಗಳು ಸೇರಿದಂತೆ ಯಾವುದೇ ಸಮಸ್ಯೆಗಳಿದ್ದರೂ ಸಾರ್ವಜನಿಕರು ಮೊಬೈಲ್ ಅಪ್ಲಿಕೇಷನ್ ಮೂಲಕ ದೂರು ನೀಡಬಹುದು.

 ಮೈಸೂರು ಪೊಲೀಸ್ ಆರಂಭಿಸಿರುವ ಮೊಬೈಲ್ ಆಪ್ ಹೇಗಿದೆ ಗೊತ್ತಾ? ಮೈಸೂರು ಪೊಲೀಸ್ ಆರಂಭಿಸಿರುವ ಮೊಬೈಲ್ ಆಪ್ ಹೇಗಿದೆ ಗೊತ್ತಾ?

ಅಷ್ಟೇ ಅಲ್ಲ ಈ ಶೌಚಾಲಯಗಳು, ಪ್ರಾದೇಶಿಕ ಕಚೇರಿ ಸೇರಿದಂತೆ ನಗರದ ಪ್ರಮುಖ ಸ್ಥಳಗಳ ಬಗ್ಗೆ ಮಾಹಿತಿ ನಾಗರಿಕರು ನೀಡಿದ ದೂರುಗಳಲ್ಲಿ ಇತ್ಯರ್ಥವಾದ ಹಾಗೂ ಬಾಕಿ ಉಳಿದ ದೂರುಗಳ ಮಾಹಿತಿಯನ್ನು ಸಹ ವೀಕ್ಷಿಸಬಹುದು.

 ಬೆಳೆಗಳ ಕೀಟ ನಿಯಂತ್ರಣ ಮಾಹಿತಿ ಪಾಂಟಿಕ್ಸ್ ಆ್ಯಪ್ ನಲ್ಲಿ ಲಭ್ಯ ಬೆಳೆಗಳ ಕೀಟ ನಿಯಂತ್ರಣ ಮಾಹಿತಿ ಪಾಂಟಿಕ್ಸ್ ಆ್ಯಪ್ ನಲ್ಲಿ ಲಭ್ಯ

ಹಾಗೆಯೇ ಸ್ಥಳೀಯ ಪಾಲಿಕೆ ಸದಸ್ಯರು ಸ್ಥಾಯಿ ಸಮಿತಿ ವಿವರ ಹಾಗೂ ಪಾಲಿಕೆ ಅಧಿಕಾರಿಗಳ ದೂರವಾಣಿ ಸಂಖ್ಯೆ ಇತ್ಯಾದಿ ಮಾಹಿತಿಯನ್ನು ಕ್ಷಣಾರ್ಧದಲ್ಲೇ ಪಡೆಯಬಹುದಾಗಿದೆ. ಮುಂದಿನ ದಿನಗಳಲ್ಲಿ ಐಒಎಸ್ ಆವೃತ್ತಿ ಬಿಡುಗಡೆ ಹಾಗೂ ನಾಗರಿಕರು ವಾಸಿಸುವ ಮಾಹಿತಿ ವಾರ್ಡ್ ಸಂಖ್ಯೆ ತಿಳಿಯುವ ವ್ಯವಸ್ಥೆ ಸಹ ಈ ಅಪ್ಲಿಕೇಶನ್ ನ ಮೂಲಕ ತಿಳಿಸಲಾಗುತ್ತದೆ.

English summary
Mysuru Corporation has launched a new app for its environmental and road safety.This app will solve mysuru citizens problems.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X