ಸೆಪ್ಟೆಂಬರ್‌ನಿಂದ ಮೈಸೂರು–ಚೆನ್ನೈ ನಡುವೆ ವಿಮಾನ ಹಾರಾಟ
ಮೈಸೂರು, ಜೂನ್ 12 : ಜನಸಾಮಾನ್ಯರಿಗೆ ಕಡಿಮೆ ದರದಲ್ಲಿ ವಿಮಾನಯಾನ ಸೌಲಭ್ಯ ಕಲ್ಪಿಸುವ 'ಉಡಾನ್' ಯೋಜನೆಯಡಿ ಸೆಪ್ಟೆಂಬರ್‌ನಲ್ಲಿ ಮೈಸೂರು-ಚೆನ್ನೈ ನಡುವಣ ವಿಮಾನ ಹಾರಾಟ ಆರಂಭವಾಗಲಿದೆ.
ಪ್ರಾದೇಶಿಕ ಸಂಪರ್ಕ ವ್ಯವಸ್ಥೆಯಡಿ ಈ ಸೇವೆ ಒದಗಿಸಲು ನಾಗರಿಕ ವಿಮಾನಯಾನ ಸಚಿವಾಲಯ ಮುಂದಾಗಿದೆ. ಅದಕ್ಕಾಗಿ ಏರ್ ಒಡಿಶಾ ಹಾಗೂ ಟರ್ಬೊ ಮೇಘಾ ಸಂಸ್ಥೆಗಳೊಂದಿಗೆ ಒಪ್ಪಂದ ಮಾಡಿಕೊಂಡಿದೆ. ಯೋಜನೆಗೆ ಸಚಿವಾಲಯ ಹಾಗೂ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರದ ಜತೆ ಕರ್ನಾಟಕ ಹಾಗೂ ತಮಿಳುನಾಡು ಒಪ್ಪಂದ ಮಾಡಿಕೊಂಡಿವೆ.

ಒಂದು ಗಂಟೆಯ ಪ್ರಯಾಣಕ್ಕೆ ಟಿಕೆಟ್ ದರ 2,500 ರು. ನಿಗದಿ ಮಾಡಲಾಗಿದೆ. ಇದು ಅಂದಾಜು 500 ಕಿ.ಮೀವರೆಗೆ ಅನ್ವಯವಾಗಲಿದೆ. ವಿಮಾನಯಾನ ಸಂಸ್ಥೆಗಳು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಂದ ಹಣಕಾಸಿನ ನೆರವು ಪಡೆಯಲಿವೆ.












Click it and Unblock the Notifications