ಪುಸ್ತಕ ರೂಪಕ್ಕಿಳಿದ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'

ಮೈಸೂರು, ಡಿಸೆಂಬರ್ 6: ಮೈಸೂರು ಮತ್ತು ಚಾಮರಾಜನಗರ ಜಿಲ್ಲೆಗಳ ರಾಜಕೀಯ ಕಥೆಗಳೇ ಹಾಗೆ; ಕುತೂಹಲಕಾರಿ, ರೋಮಾಂಚಕ ಮತ್ತು ಆಸಕ್ತಿಕರ. ಇದನ್ನು ಪುಸ್ತಕ ರೂಪಕ್ಕಿಳಿಸಿದ್ದಾರೆ ಹಿರಿಯ ಪತ್ರಕರ್ತ ಅಂಶಿ ಪ್ರಸನ್ನ ಕುಮಾರ್.

ಮೈಸೂರು ಭಾಗದ ರಾಜಕೀಯದ 'ಗೂಗಲ್ ' ಎಂದೇ ತಮ್ಮ ಶಿಷ್ಯರಿಂದ ಕರೆಸಿಕೊಳ್ಳುವ ಪ್ರಸನ್ನ ಕುಮಾರ್ 'ಮೈಸೂರು ಚಾಮರಾಜನಗರ ರಾಜಕೀಯ ಇತಿಹಾಸ'ದ ಪುಸ್ತಕ ಬರೆದಿದ್ದಾರೆ.

ಚುನಾವಣೆ ಹೊತ್ತಲ್ಲೇ ಬಿಡುಗಡೆಯಾಗಲಿರುವ ಈ ಪುಸ್ತಕದಲ್ಲಿ ಅವರು ಮೈಸೂರು - ಚಾಮರಾಜನಗರದ ರಾಜಕೀಯ ಮತ್ತು ಚುನಾವಣೆಯ ವಿವರಗಳನ್ನು ದಾಖಲಿಸಿದ್ದಾರೆ.

'Mysuru Chamarajanagar political history' book will be released on this Friday

ಇದೇ ಶುಕ್ರವಾರ ಅಂದರೆ ಡಿಸೆಂಬರ್ 8ರಂದು ಈ ಪುಸ್ತಕ ಬಿಡುಗಡೆಯಾಗಲಿದೆ. ಮೈಸೂರಿನ ಕಲಾಮಂದಿರದಲ್ಲಿ ಡಿಸೆಂಬರ್ 8 ರ ಸಂಜೆ 4.30 ಗಂಟೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಈ ಪುಸ್ತಕ ಬಿಡುಗಡೆ ಮಾಡಲಿದ್ದಾರೆ.

ಕೃತಿಯ ಕುರಿತು ಹಿರಿಯ ಪತ್ರಕರ್ತ ಕೃಷ್ಣ ಪ್ರಸಾದ್ ಕಾರ್ಯಕ್ರಮದಲ್ಲಿ ವಿವರ ನೀಡಲಿದ್ದಾರೆ. ಸಚಿವರಾದ ಎಚ್.ಸಿ ಮಹದೇವಪ್ಪ, ತನ್ವೀರ್ ಸೇಠ್, ಗೀತಾ ಮಹದೇವಪ್ರಸಾದ್ ಹಾಗೂ ಮೈಸೂರು-ಚಾಮರಾಜನಗರ ಭಾಗದ ಹೆಚ್ಚಿನ ಶಾಸಕರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+