ಮೈಸೂರು ಬಿಇಓ ಕಚೇರಿಗೆ ಬಂತು ಹುಸಿಬಾಂಬ್ ಬೆದರಿಕೆ ಪತ್ರ
ಮೈಸೂರು, ಫೆಬ್ರವರಿ 1: ದಕ್ಷಿಣ ವಲಯ ಬಿಇಓ ಕಚೇರಿಗೆ ಹುಸಿಬಾಂಬ್ ಇಡಲಾಗಿದೆ ಎಂಬ ಬೆದರಿಕೆ ಪತ್ರ ರವಾನೆಯಾಗಿದ್ದು. ಕಚೇರಿಯ ಸಿಬ್ಬಂದಿಗಳಲ್ಲಿ ಆತಂಕ ಸೃಷ್ಟಿಯಾಗಿದೆ.
ಅನಾಮದೇಯ ವ್ಯಕ್ತಿಯಿಂದ ದಕ್ಷಿಣ ವಲಯ ಬಿಇಓ ಕಚೇರಿಯಲ್ಲಿ ಹುಸಿಬಾಂಬ್ ಇಡಲಾಗಿದೆ ಎಂದು ಬೆದರಿಕೆ ಪತ್ರ ಬಂದಿದೆ. ಈ ಪತ್ರವನ್ನು ಓದಿದ ಸಿಬ್ಬಂದಿ, ಅಧಿಕಾರಿಗಳು ಕಕ್ಕಾಬಿಕ್ಕಿಯಾಗಿ ಕಚೇರಿಯಿಂದ ಹೊರ ಬಂದು ಪಕ್ಕದ ಲಕ್ಷ್ಮೀಪುರಂ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ. ಅಲ್ಲದೆ ಆತಂಕಕ್ಕೊಳಗಾಗಿದ್ದಾರೆ.[ಮಂಗಳೂರು : ಕಂಕನಾಡಿ ಮಾರುಕಟ್ಟೆಗೆ ಹುಸಿ ಬಾಂಬ್ ಬೆದರಿಕೆ ಕರೆ]

ಇನ್ನು ಮುಖ್ಯಮಂತ್ರಿಗಳ ಭದ್ರತಾ ಸ್ಥಳದಲ್ಲಿ ನಿಯೋಜಿಸಲಾಗಿದ್ದ ಪೊಲೀಸ್ ಸಿಬ್ಬಂದಿ ಸ್ಥಳಕ್ಕೆ ದೌಡಾಯಿಸಿದ್ದಾರೆ. ಅಲ್ಲದೆ ಸ್ಥಳಕ್ಕೆ ಲಕ್ಷ್ಮೀ ಪುರ ಠಾಣಾ ಪೋಲೀಸರು, ಶ್ವಾನದಳದೊಂದಿಗೆ ಧಾವಿಸಿ ಪರಿಶೀಲನೆ ನಡೆಸಿದರು.

ಸ್ಥಳದಲ್ಲಿ ಯಾವುದೇ ಹುಸಿಬಾಂಬ್ ಇಲ್ಲವಾಗಿದ್ದು, ಬೆದರಿಕೆ ಪತ್ರ ಸುಳ್ಳು ಎನ್ನಲಾಗಿದೆ. ಅಲ್ಲದೆ ಪತ್ರ ಎಲ್ಲಿಂದ ರವಾನೆಯಾಯಿತು ಎಂಬುದರ ಬಗ್ಗೆ ಪೊಲೀಸರು ತನಿಖೆಗೆ ಮುಂದಾಗಿದ್ದಾರೆ.












Click it and Unblock the Notifications