ಮೈಸೂರು-ಬಾಗಲಕೋಟೆ ಬಸವ ಎಕ್ಸ್‌ಪ್ರೆಸ್ ರೈಲು ರದ್ದು

ಮೈಸೂರು, ಸೆಪ್ಟೆಂಬರ್ 20 : ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಪ್ರತಿದಿನದ ರೈಲನ್ನು ರದ್ದುಗೊಳಿಸಲಾಗಿದೆ. ಅಕ್ಟೋಬರ್ 6ರ ತನಕ ರೈಲು ಸಂಚಾರವಿಲ್ಲ ಎಂದು ಪ್ರಕಟಣೆ ಹೇಳಿದೆ.

ನೈಋತ್ಯ ರೈಲ್ವೆ ಶುಕ್ರವಾರ ಈ ಕುರಿತು ಪ್ರಕಟಣೆ ಹೊರಡಿಸಿದೆ. ಮೈಸೂರು-ಬಾಗಲಕೋಟೆ-ಮೈಸೂರು ನಡುವೆ ಸಂಚಾರ ನಡೆಸುವ ಬಸವ ಎಕ್ಸ್‌ಪ್ರೆಸ್ ರೈಲನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ.

ಸೆಂಟ್ರಲ್ ರೈಲ್ವೆಯ ಸೊಲ್ಲಾಪುರ ವಿಭಾಗದಲ್ಲಿ ದ್ವಿಪಥ ಹಳಿ ಜೋಡಣೆಗಾಗಿ ಕಾಮಗಾರಿ ಕೈಗೊಳ್ಳಲಾಗುತ್ತದೆ. ಸೊಲ್ಲಾಪುರ-ವಾಡಿ ವಿಭಾಗದ ಕಲಬುರಗಿ-ಸವಲ್ಗಿ ರೈಲ್ವೆ ನಿಲ್ದಾಣಗಳ ನಡುವೆ ಇಂಟರ್ ಲಾಕಿಂಗ್ ಕೆಲಸ ನಡೆಯುತ್ತಿದೆ.

Mysuru Bagalkot Mysuru Train Cancelled Till October 6

ಈ ಕಾಮಗಾರಿಗಳಿಗೆ ಅಡಚಣೆ ಉಂಟಾಗಬಾರದು ಎಂದು ಬಸವ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ಅಕ್ಟೋಬರ್ 6ರ ತನಕ ರದ್ದುಗೊಳಿಸಲಾಗಿದೆ ಎಂದು ನೈಋತ್ಯ ರೈಲ್ವೆ ಪ್ರಕಟಣೆಯಲ್ಲಿ ಹೇಳಿದೆ.

ಸಮಯ ಬದಲಾವಣೆ : ವಾಸ್ಕೋಡಗಾಮ-ಹಜರತ್ ನಿಜಾಮುದ್ದೀನ್-ವಾಸ್ಕೋಡಗಾಮ ಎಕ್ಸ್‌ಪ್ರೆಸ್ ರೈಲು ಸಂಚಾರದ ಸಮಯ ಇಂದಿನಿಂದ ಬದಲಾವಣೆಯಾಗಿದೆ. ವಾಸ್ಕೋಡಗಾಮಾದಿಂದ ಮಧ್ಯಾಹ್ನ 3.10ರ ಬದಲು 3 ಗಂಟೆಗೆ ರೈಲು ಹೊರಡಲಿದೆ. ವಾಸ್ಕೋಡಗಾಮಾ ನಿಲ್ದಾಣಕ್ಕೆ ಬೆಳಗ್ಗೆ 6.30ರ ಬದಲು 6.45ಕ್ಕೆ ತಲುಪಲಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+