Get Updates
Get notified of breaking news, exclusive insights, and must-see stories!

ಮೈಸೂರು ದಸರಾ 2023 ಜಂಬೂಸವಾರಿಯಲ್ಲಿ ಮೇಳೈಸಲಿರುವ 49 ಸ್ತಬ್ಧ ಚಿತ್ರಗಳು, ಯಾವ್ಯಾವ ಜಿಲ್ಲೆಯಿಂದ ಏನೇನು ವಿಶೇಷತೆ?

ಮೈಸೂರು, ಅಕ್ಟೋಬರ್‌, 24: ಚಿನ್ನದ ಅಂಬಾರಿ ಹೊತ್ತು ಗಜಪಡೆ ಸಾಗುವುದು ಮೈಸೂರು ದಸರಾದ ಪ್ರಮುಖ ಆಕರ್ಷಣೆ. ಆದರೆ ಈ ಆಕರ್ಷಣೆಗೆ ಮತ್ತಷ್ಟು ಮೆರಗು ನೀಡುವುದು ಸ್ತಬ್ಧ ಚಿತ್ರಗಳು ಮತ್ತು ಜನಪದ ಕಲಾತಂಡಗಳು. ಈ ಬಾರಿ ಜಂಬೂಸವಾರಿಯಲ್ಲಿ 49 ಸ್ತಬ್ಧಚಿತ್ರಗಳು ಮತ್ತು 100ಕ್ಕೂ ಜನಪದ ಕಲಾತಂಡಗಳು ಪಾಲ್ಗೊಳ್ಳುತ್ತಿವೆ. ಹಾಗಾದರೆ ಯಾವ್ಯವ ಜಿಲ್ಲೆಯಿಂದ ಏನೇನು ವಿಶೇಷತೆ ಇರಲಿದೆ ಎನ್ನುವ ಸಂಪೂರ್ಣ ಮಾಹಿತಿಯನ್ನು ಇಲ್ಲಿ ಗಮನಿಸಿ.

ರಾಜ್ಯದ ಎಲ್ಲಾ ಜಿಲ್ಲೆಗಳಿಂದ 31, ಸ್ತಬ್ಧಚಿತ್ರ ಉಪ ಸಮಿತಿಯಿಂದ 2 ಹಾಗೂ ವಿವಿಧ ಇಲಾಖೆಗಳಿಂದ 14 ಸ್ತಬ್ಧಚಿತ್ರಗಳು ಇರಲಿವೆ. ಕಳೆದ ಕೆಲವು ದಿನಗಳಿಂದ ನಗರದ ಹೊರವಲಯದಲ್ಲಿರುವ ಬಂಡೀಪುರದ ಎಪಿಎಂಸಿ ಆವರಣದಲ್ಲಿ ಸ್ತಬ್ದ ಚಿತ್ರಗಳನ್ನು ತಯಾರು ಮಾಡಿ ಅರಮನೆ ಆವರಣಕ್ಕೆ ತರಲಾಗಿದ್ದು, ಇಂದು ಮಧ್ಯಾಹ್ನ ನಂದಿಪೂಜೆ ಬಳಿಕ ನಿಶಾನೆ ಆನೆ ಅರ್ಜುನ ತೆರಳಲಿದೆ. ಅದರ ಹಿಂದೆ ಸ್ತಬ್ದ ಚಿತ್ರಗಳು ಮತ್ತು ಕಲಾ ತಂಡಗಳು ಮೆರವಣಿಗೆಯಲ್ಲಿ ಸಾಗಲಿವೆ.

Mysore Dasara 2023 Tableau List, Schedule, Special Arts and Craft

ಇನ್ನು ಸ್ತಬ್ಧ ಚಿತ್ರಗಳು ಆಯಾಯ ಜಿಲ್ಲೆಯ ಪ್ರಾಕೃತಿಕ, ಭೌಗೋಳಿಕ, ಐತಿಹಾಸಿಕ ವಿಶೇಷತೆಯನ್ನು ಬಿಂಬಲಿಸಲಿದ್ದು, ಈ ಬಾರಿಯ ಸ್ತಬ್ದ ಚಿತ್ರಗಳು ಹೇಗಿರಲಿವೆ ಎಂಬುದನ್ನು ನೋಡಿದ್ದೇ ಆದರೆ ಬಾಗಲಕೋಟೆಯ ಬಾದಾಮಿ ಚಾಲುಕ್ಯರ ರಾಜವಂಶ ಹಾಗೂ ಬನಶಂಕರಿದೇವಿಯ ಸ್ತಬ್ಧಚಿತ್ರ ಮೊದಲಿಗೆ ತೆರಳಲಿದೆ. ಬಳ್ಳಾರಿಯ ಕುಮಾರಸ್ವಾಮಿ ದೇವಸ್ಥಾನ, ಪಾರ್ವತಿ ದೇವಿ ದೇವಾಲಯ, ಕಸೂತಿ ಕಲೆ, ನಾರಿಹಳ್ಳ ಅಣೆಕಟ್ಟು, ಬೆಳಗಾವಿ ಜಿಲ್ಲೆಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್‌ ಫಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣನ ಪ್ರತಿಮೆಯ ಸ್ತಬ್ದ ಚಿತ್ರಗಳು ಗಮನಸೆಳೆಯಲಿವೆ.

ಇನ್ನು ಒಂದು ಜಾನಪದ ಕಲಾತಂಡದ ಜೊತೆ ಒಂದು ಸ್ತಬ್ಧಚಿತ್ರ ತೆರಳಲಿದ್ದು, ಸ್ಥಳೀಯ ಕಲೆ, ಸಾಹಿತ್ಯ, ಸಂಸ್ಕೃತಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಬೆಳಗಾವಿಯ ಮಹಾಲಿಂಗೇಶ್ವರ ದೇವಸ್ಥಾನ, ಗೋಕಾಕ್ ಪಾಲ್ಸ್, ಸುವರ್ಣ ಸೌಧ, ಕಿತ್ತೂರು ಚೆನ್ನಮ್ಮ, ಸಂಗೊಳ್ಳಿ ರಾಯಣ್ಣ, ಬೆಂಗಳೂರು ಗ್ರಾಮಾಂತರದ ದಕ್ಷಿಣ ಕಾಶಿ ಶಿವಗಂಗೆ ದೇವಸ್ಥಾನ, ಬೆಂಗಳೂರು ನಗರ ಜಿಲ್ಲೆಯಿಂದ ಚಂದ್ರಯಾನ- 3, ಬೀದರ್ ಜಿಲ್ಲೆಯ ಕೃಷ್ಣಾಮೃಗ ಸಂರಕ್ಷಣಾಧಾಮದ ಅರಣ್ಯ ಪ್ರದೇಶವು ಅನಾವರಣಗೊಳ್ಳಲಿದೆ.

ಚಾಮರಾಜನಗರ ಜಿಲ್ಲೆಯ ಜಾನಪದ ಭಕ್ತಿಯ ಬೀಡು, ಚಿಕ್ಕಬಳ್ಳಾಪುರ ಜಿಲ್ಲೆಯ ಏಕತೆಯಲ್ಲಿ ಅನೇಕತೆ, ಚಿಕ್ಕಮಗಳೂರು ಜಿಲ್ಲೆಯ ಬೆಟ್ಟದಿದ ಬಟ್ಟಲಿಗೆ, ಚಿತ್ರದುರ್ಗ ಜಿಲ್ಲೆಯ ಶ್ರೀ ಗುರು ತಿಪ್ಪೇರುದ್ರಸ್ವಾಮಿ ದೇವಸ್ಥಾನ, ದಕ್ಷಿಣ ಕನ್ನಡ ಜಿಲ್ಲೆಯ ಪಿಲಿಕುಳ ನಿಸರ್ಗಧಾಮ ಮತ್ತು ಮನೆ, ದಾವಣಗೆರೆ ಜಿಲ್ಲೆಯ ಸಂತ ಸೇವಾಲಾಲ್ ಹುಟ್ಟೂರು ಮತ್ತು ಬಜಾರ ಸಂಪ್ರದಾಯ, ಧಾರವಾಡ ಪೇಡಾ, ಧಾರವಾಡ ಎಮ್ಮೆ ನಮ್ಮ ಹೆಮ್ಮೆ, ಗದಗ ಜಿಲ್ಲೆಯ ಸಬರಮತಿ ಆಶ್ರಮವನ್ನು ನಿರ್ಮಿಸಲಾಗಿದೆ.

ದೇಗುಲ, ಪ್ರೇಕ್ಷಣೀಯ ತಾಣಗಳ ಅನಾವರಣ

ಹಾಸನ ಜಿಲ್ಲೆಯ ಹಾಸನಾಂಬ ದೇವಾಲಯ, ಹಲ್ಮಿಡಿ- ಈಶ್ವರ ದೇವಸ್ಥಾನ, ಅರಸೀಕೆರೆ-ಜೇನುಕಲ್ಲು ಸಿದ್ದೇಶ್ವರ ದೇವಾಲಯ, ಹಾವೇರಿಯ ಶಂಖನಾದ ಮೊಳಗಿಸುತ್ತಿರುವ ಶ್ರೀ ಕನಕದಾಸರು ಮತ್ತು ಗದ್ದಿಗೆ ಕಾಗಿನೆಲೆ, ಕಲಬುರಗಿ ಜಿಲ್ಲೆಯ ರಾಜವಂಶಸ್ಥರ ಕೋಟೆ, ಚಿಂಚೋಳಿ ಅರಣ್ಯ ಪ್ರದೇಶ ವನ್ಯಜೀವಿಧಾಮ ಬುದ್ಧನ ಸ್ತೂಪ, ತೊಗರಿ ಕಣಜ, ಸಿಮೆಂಟ್‌ಕಾರ್ಖಾನೆ, ಕೊಡಗಿನ ಪ್ರೇಕ್ಷಣೀಯ ತಾಣಗಳು ಅನಾವರಣಗೊಳ್ಳಲಿವೆ.

ಕೋಲಾರ ಜಿಲ್ಲೆಯ ನರೇಗಾ ಯೋಜನೆಯಡಿ ನಿರ್ಮಿಸಿದ ವೀರಗಲ್ಲು ಉತ್ಖನನ ಮತ್ತು ಮರುಸ್ಥಾಪನೆ, ಕೊಪ್ಪಳದ ಕಿನ್ನಾಳ ಕಲೆ, ಮಂಡ್ಯದ ಸಾಂಪ್ರದಾಯಕ ಉದ್ಯಮ ಆಲೆಮನೆ, ಮೈಸೂರಿನ ನಾಲ್ವಡಿ ಕೃಷ್ಣರಾಜ ಒಡೆಯರ್ ಕೊಡುಗೆ, ರಾಯಚೂರು ಜಿಲ್ಲೆಯ ನವರಂಗ್ ದರ್ವಾಜಾ ಹಾಗೂ ಆರ್‌ಟಿಪಿಎಸ್, ರಾಮನಗರ ಜಿಲ್ಲೆಯ ಚನ್ನಪಟ್ಟಣ ಗೊಂಬೆ, ಶಿವಮೊಗ್ಗ ಜಿಲ್ಲೆಯ ಕುವೆಂಪು ಪ್ರತಿಮೆ, ಗುಡವಿ ಪಕ್ಷಿಧಾಮ, ತುಮಕೂರು ಜಿಲ್ಲೆಯ ಮೂಡಲಪಾಯ, ಯಕ್ಷಗಾನ, ಉಡುಪಿ ಜಿಲ್ಲೆಯ ತ್ಯಾಜ್ಯ ಮತ್ತು ಮತ್ಸ್ಯ ಸ್ನೇಹಿ ಸಮುದ್ರ ಆಕರ್ಷಕವಾಗಿವೆ.

ಸಂವಿಧಾನ ಪೀಠಿಕೆ ಓದು ಕಡ್ಡಾಯದ ಸ್ತಬ್ದ ಚಿತ್ರ

ಉತ್ತರ ಕನ್ನಡ ಜಿಲ್ಲೆಯ ಶರಾವತಿ ಮಡಿಲಲ್ಲಿ ವನ್ಯಜೀವಿ ಸಂರಕ್ಷಣೆ ಅಭಿಯಾನ, ವಿಜಯಪುರ ಜಿಲ್ಲೆಯ ಜ್ಞಾನಯೋಗಾಶ್ರಮ, ವಿಜಯನಗರ ಜಿಲ್ಲೆಯ ವಿಠ್ಠಲ ದೇವಸ್ಥಾನ, ಯಾದಗಿರಿ ಜಿಲ್ಲೆಯ ಶ್ರೀ ವೇಣುಗೋಪಾಲಸ್ವಾಮಿ ದೇವಸ್ಥಾನ, ಸ್ತಬ್ಧಚಿತ್ರ ಉಪ ಸಮಿತಿಯಿಂದ ಮೈಸೂರು ದಸರಾ ವಾದ್ಯಗೋಷ್ಠಿ, ಯುನೆಸ್ಕೋದಿಂದ ಗುರುತಿಸಲ್ಪಟ್ಟ, ಬೇಲೂರು, ಹಳೇಬೀಡು ಮತ್ತು ಸೋಮನಾಥಪುರ ದೇವಾಲಯ, ಸಮಾಜ ಕಲ್ಯಾಣ ಇಲಾಖೆಯಿಂದ ಭಾರತದ ಸಂವಿಧಾನ ಮತ್ತು ಸಂವಿಧಾನ ಪೀಠಿಕೆ ಓದು ಕಡ್ಡಾಯ ಸ್ತಬ್ಧಚಿತ್ರದಲ್ಲಿ ಕಾಣಿಸಿಕೊಳ್ಳಲಿವೆ.

ವಾರ್ತಾ ಇಲಾಖೆಯಿಂದ ಸರ್ಕಾರದ ಪಂಚ ಗ್ಯಾರಂಟಿ ಯೋಜನೆಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಗೃಹಲಕ್ಷ್ಮಿ ಯೋಜನೆ, ಪ.ವರ್ಗ ಇಲಾಖೆಯಿಂದ ಶ್ರೀ ಮಹರ್ಷಿ ವಾಲ್ಮೀಕಿ ಪುತ್ಥಲಿ ಮತ್ತು ಇತರೆ ಯೋಜನೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ಇಲಾಖೆಯಿಂದ ಅನ್ನಭಾಗ್ಯ ಯೋಜನೆ, ಕರ್ನಾಟಕ ರಾಜ್ಯ ಪೊಲೀಸರಿಂದ ಶೌರ್ಯ- ನ್ಯಾಯ-ರಕ್ಷೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಅಂಗಾಂಗ ದಾನ ಜಾಗೃತಿ, ಸಹಕಾರ ಹಾಲು ಉತ್ಪಾದಕರ ಮಂಡಳಿಯಿಂದ ಕ್ಷೀರಭಾಗ್ಯ ಯೋಜನೆ, ಸೆಸ್ಕ್‌ನಿಂದ ಗೃಹಜ್ಯೋತಿ ಸ್ತಬ್ದ ಚಿತ್ರಗಳು ಮೆರವಣಿಗೆಯಲ್ಲಿ ಸಾಗಲಿವೆ.

ಹಲವು ಇಲಾಖೆಗಳ ಯೋಜನೆ ಅನಾವರಣ

ಮೈಸೂರು ವೈದ್ಯಕೀಯ ಕಾಲೇಜಿನ ಶತಮಾನೋತ್ಸವ, ಪ್ರವಾಸೋದ್ಯಮ ಇಲಾಖೆಯಿಂದ ಲಕ್ಕುಂಡಿಯ ಬ್ರಹ್ಮಜಿನಾಲಯ, ಕಾವೇರಿ ನೀರಾವರಿ ನಿಗಮದಿಂದ ನೀರಾವರಿ ನಿರ್ವಹಣಾ ಪದ್ಧತಿ, ವಾಕ್ ಮತ್ತು ಶ್ರವಣ ಸಂಸ್ಥೆಯಿಂದ ಉತ್ತಮ ಜೀವನದೆಡೆಗೆ ಆಯಿಷ್‌ನ ಕೊಡುಗೆ, ಲಿಡ್ಕರ್‌ನಿಂದ ಚರ್ಮ ಕುಶಲಕರ್ಮಿಗಳ ಅಭಿವೃದ್ಧಿ ಮುಂತಾದ ಮಾಹಿತಿಯುಳ್ಳ ಸ್ತಬ್ಧಚಿತ್ರಗಳು ಜಂಬೂಸವಾರಿಯಲ್ಲಿ ಇರಲಿವೆ.

ಇಷ್ಟೇ ಅಲ್ಲದೆ, ಜಿಲ್ಲಾ ಪಂಚಾಯತ್‌ ಹಾಗೂ ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಕೆಎಂಎಫ್, ವಾರ್ತಾ ಮತ್ತು ಪ್ರಚಾರ ಇಲಾಖೆ, ಮೈಸೂರು ವೈದ್ಯಕೀಯ ಕಾಲೇಜು ಮತ್ತು ಸಂಶೋಧನಾ ಸಂಸ್ಥೆ ಮತ್ತು ಸಮಾಜ ಕಲ್ಯಾಣ ಇಲಾಖೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ, ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಇಲಾಖೆ, ಕರ್ನಾಟಕ ರಾಜ್ಯ ಪೊಲೀಸ್ ಇಲಾಖೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಮೈಮುಲ್, ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮ, ಪ್ರವಾಸೋದ್ಯಮ ಇಲಾಖೆ, ಕಾವೇರಿ ನಿರಾವರಿ ನಿಗಮ, ವಾಕ್-ಶ್ರವಣ ಸಂಸ್ಥೆ, ಡಾ.ಬಾಬು ಜಗಜೀವನ್ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಹಾಗೂ ಸ್ಥಬ್ಧಚಿತ್ರ ಉಪ ಸಮಿತಿಯಿಂದ ಅರಮನೆ ವಾದ್ಯಗೋಷ್ಠಿಯ ಬಂಡಿ ಸ್ತಬ್ಧಚಿತ್ರಗಳು ಜಂಬೂಸವಾರಿಗೆ ಕಳೆಕಟ್ಟಲಿವೆ.

More From
Prev
Next
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+