'ಜಂಭದ ಕೋಳಿ ಪ್ರತಾಪ್ ಫಲಿತಾಂಶದ ದಿನ ಬೆತ್ತಲು'

ಮೈಸೂರು, ಏಪ್ರಿಲ್ 19: ಮೈಸೂರು-ಕೊಡಗು ಕ್ಷೇತ್ರದಿಂದ ಜಯಭೇರಿ ಬಾರಿಸುವ ಹುಮ್ಮಸ್ಸಿನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹಗೆ, ಪ್ರತಿಸ್ಪರ್ಧಿ ಅಭ್ಯರ್ಥಿ ಕಾಂಗ್ರೆಸ್ಸಿನ ವಿಶ್ವನಾಥ್ ಅವರು ಟಾಂಗ್ ನೀಡಿದ್ದಾರೆ.

'ಪ್ರತಾಪ್ ಸಿಂಹ ಒಬ್ಬ ಜಂಭದ ಕೋಳಿ. ಯಾರ ಕೋಳಿಯಿಂದಲೂ ಬೆಳಕಾಗುವುದಿಲ್ಲ. ನನ್ನಿಂದಲೇ ಎಲ್ಲಾ ಎಂಬ ದುರಹಂಕಾರಕ್ಕೆ ಜನ ತಕ್ಕ ಉತ್ತರ ನೀಡಲಿದ್ದಾರೆ' ಎಂದು ಕ್ಷೇತ್ರದ ಹಾಲಿ ಸಂಸದ ಎಚ್. ವಿಶ್ವನಾಥ್ ಕಟಕಿಯಾಡಿದ್ದಾರೆ. 'ಬಿಜೆಪಿಯ ಯಾವ ತಂತ್ರಗಾರಿಕೆಯೂ ನಡೆಯುವುದಿಲ್ಲ. ನಡೆ-ನುಡಿಯಲ್ಲಿ ದುರಹಂಕಾರ ತೋರಿಸುವ ಪ್ರತಾಪ್ ಸಿಂಹನಿಗೆ ಅವರ ಬಿಜೆಪಿ ಪಕ್ಷದಲ್ಲೇ ವಿರೋಧವಿದೆ' ಎಂದು ವಿಶ್ವನಾಥ್ ನುಡಿದರು.

ಮಡಿಕೇರಿಯಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಜಂಭದ ಕೋಳಿ. ನನ್ನ ಕೋಳಿ ಕೂಗಿದರೆ ಮಾತ್ರ ಬೆಳಕಾಗುವುದು ಎಂದು ಭಾವಿಸಿದ್ದಾನೆ. ಫಲಿತಾಂಶ ಬಂದಾಗ ಎಲ್ಲವೂ ಬೆತ್ತಲಾಗಲಿದೆ' ಎಂದು ವ್ಯಂಗ್ಯವಾಡಿದರು.

mysore-congress-candidate-vishwanath-chides-opponent-pratap-simha
ಜನ ಕಾಂಗ್ರೆಸ್ ಪಕ್ಷದ ಕೈಹಿಡಿಯಲಿದ್ದಾರೆ. ತಾವು ಗೆಲ್ಲುವುದರಲ್ಲಿ ಯಾವುದೇ ಸಂಶಯವಿಲ್ಲ ಎಂದೂ ಸಂಸದ ಎಚ್. ವಿಶ್ವನಾಥ್ ಭವಿಷ್ಯ ನುಡಿದರು.

ಪ್ರತಾಪ್ ಪರ ರವಿ ಬ್ಯಾಟಿಂಗ್: ಮತ್ತೊಂದೆಡೆ ಮೈಸೂರಿನಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಚಿಕ್ಕಮಗಳೂರಿನ ಬಿಜೆಪಿ ಶಾಸಕ ಸಿಟಿ ರವಿ ಅವರು ನರೇಂದ್ರ ಮೋದಿ ಅಧಿಕಾರಕ್ಕೆ ಬರಬೇಕೆಂಬ ಉದ್ದೇಶದಿಂದ ಎಲ್ಲ ಪಕ್ಷಗಳ ಮತದಾರರೂ ಈ ಬಾರಿ ಬಿಜೆಪಿಗೇ ಮತ ಹಾಕಿದ್ದಾರೆ. ಹಾಗಾಗಿ ಈ ಬಾರಿ ಪಕ್ಷದ ಅಭ್ಯರ್ಥಿಗಳು ಗೆಲ್ಲುವುದು ಖಚಿತವೆಂದು ಹೇಳಿದರು.

'ರಾಜ್ಯದಲ್ಲಿ 20ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿಗೆ ಒಲಿಯಲಿವೆ. ದೇಶಾದ್ಯಂತ 272ಕ್ಕೂ ಹೆಚ್ಚು ಸ್ಥಾನಗಳು ಬಿಜೆಪಿಗೆ ದಕ್ಕಲಿವೆ. ನರೇಂದ್ರ ಮೊದಿ ಅವರು ಪ್ರಧಾನಿಯಾಗುವುದರಲ್ಲಿ ಯಾವುದೇ ಅನುಮಾನವಿಲ್ಲ' ಎಂದು ರವಿ ಆತ್ಮವಿಶ್ವಾಸ ವ್ಯಕ್ತಪಡಿಸಿದರು. ಸುದ್ದಿಗೋಷ್ಠಿಯಲ್ಲಿ ಸ್ಥಳೀಯ ಅಭ್ಯರ್ಥಿ ಪ್ರತಾಪ್ ಸಿಂಹ ಉಪಸ್ಥಿತರಿದ್ದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+