ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಮುಖ್ಯಮಂತ್ರಿ ಚಂದ್ರು ಮಾತುಗಳು
Recommended Video
ಮೈಸೂರು, ಫೆಬ್ರವರಿ 14: ಕೇವಲ ಚಂದ್ರಶೇಖರ್ ಇದ್ದವನು ಮೈಮ್ ಚಂದ್ರು, ಯುನಿವರ್ಸಿಟಿ ಚಂದ್ರು, ನಂತರ ಮುಖ್ಯಮಂತ್ರಿ ಚಂದ್ರು ಹೇಗಾದೆ ಎಂಬುದನ್ನು ಹೇಳಿಕೊಳ್ಳುತ್ತಾ ಇಂದು ಹಿರಿಯ ಚಲನಚಿತ್ರ ನಟ, ರಂಗಕರ್ಮಿ ಮುಖ್ಯಮಂತ್ರಿ ಚಂದ್ರು ತಮ್ಮ ನೆನಪುಗಳನ್ನು ಮೆಲುಕು ಹಾಕಿಕೊಂಡರು.
ಇಂದು ಮೈಸೂರು ಜಿಲ್ಲಾ ಪತ್ರಕರ್ತರ ಸಂಘ ಹಮ್ಮಿಕೊಂಡಿದ್ದ ಸಂವಾದದಲ್ಲಿ ಭಾಗವಹಿಸಿ ಮಾತನಾಡಿದ ಮುಖ್ಯಮಂತ್ರಿ ಚಂದ್ರು, ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು. ತಮ್ಮ ರಂಗಭೂಮಿಯ 45 ವರ್ಷಗಳ ನಂಟನ್ನು ತೆರೆದಿಟ್ಟರು. ಬಹುರೂಪಿ ವಿಚಾರದಲ್ಲಿ 'ಗಾಂಧಿಪಥ' ಕೇಳಿ ಸಂತೋಷದಿಂದ ಒಪ್ಪಿಕೊಂಡು ಬಂದೆ ಎಂದು ತಿಳಿಸಿದರು. ರಂಗಭೂಮಿ, ಕನ್ನಡ ಭಾಷೆ, ರಾಜಕಾರಣ... ಹೀಗೆ ಹಲವು ವಿಷಯಗಳ ಕುರಿತು ತಮ್ಮ ಅನುಭವ, ಅನಿಸಿಕೆಗಳನ್ನು ಹಂಚಿಕೊಂಡರು.

ಮುಖ್ಯಮಂತ್ರಿ ಚಂದ್ರು ಆಗಿದ್ದು...
"ಮುಖ್ಯಮಂತ್ರಿ ನಾಟಕ ಮಾಡಿದಾಗಿನಿಂದ ಮುಖ್ಯಮಂತ್ರಿ ಚಂದ್ರು ಆಗಿ ಗುರುತಿಸಿಕೊಂಡೆ. ಆಗ ನನಗೆ 27-28 ವರ್ಷ ಇರಬಹುದಷ್ಟೆ. ಕಿರುತೆರೆ, ಹಿರಿತೆರೆ ಎಲ್ಲದರಲ್ಲೂ ಅಭಿನಯಿಸಿದರೂ ರಂಗಭೂಮಿಯೇ ಮೈಲುಗಲ್ಲಾಯಿತು" ಎಂದು ಸಂತಸಪಟ್ಟರು. "ಮುಖ್ಯಮಂತ್ರಿ ಚಂದ್ರು" ನಾಟಕ ಪ್ರತಿವರ್ಷ 20 ರಿಂದ 24 ಪ್ರದರ್ಶನಗಳನ್ನು ಕಾಣುತ್ತಿತ್ತು. ರಾಜ್ಯ, ಹೊರರಾಜ್ಯ, ಗಡಿಭಾಗ, ನ್ಯೂಜಿಲ್ಯಾಂಡ್, ಮಲೇಶಿಯಾ, ಆಸ್ಟ್ರೇಲಿಯಾ, ಮಲೇಶಿಯಾ, ಲಂಡನ್ ನಲ್ಲಿ ಕೂಡ ಪ್ರದರ್ಶನ ಕಂಡಿದೆ ಎಂದು ವಿವರಿಸಿದರು. ನಾನು 45 ವರ್ಷಗಳಿಂದ ರಂಗಭೂಮಿಯಲ್ಲಿದ್ದು 40 ವರ್ಷಗಳಿಂದಲೂ ಮುಖ್ಯಮಂತ್ರಿ ಪಾತ್ರ ಮಾಡುತ್ತಿದ್ದೇನೆ. ಹವ್ಯಾಸಿ ರಂಗಭೂಮಿಯಲ್ಲಿ ಇದು ಮೈಲುಗಲ್ಲಾಗಿದ್ದು ಗಿನ್ನಿಸ್ ದಾಖಲೆ ಸೇರಲು ಪ್ರಯತ್ನಗಳು ಸಾಗಿವೆ. ಈಗಾಗಲೇ 700 ಪ್ರದರ್ಶನ ಕಂಡಿರುವ ಮುಖ್ಯಮಂತ್ರಿ ನಾಟಕ ಈ ಬಾರಿಯ ಬಹುರೂಪಿ ನಾಟಕೋತ್ಸವದಲ್ಲಿ ನಾಳೆ 701ನೇ ಪ್ರದರ್ಶನ ಕಾಣುತ್ತಿರುವುದು ವಿಶೇಷ ಎಂದರು.

ಕನ್ನಡ ಭಾಷೆಯ ಬಗೆಗಿನ ಚಂದ್ರು ಅಭಿಮಾನ
ನಾಡು, ನುಡಿ, ಗಡಿ ವಿಚಾರದಲ್ಲಿ ಇಡೀ ಕನ್ನಡ ನಾಡನ್ನು ಡಾ. ರಾಜಕುಮಾರ್ ಒಂದುಗೂಡಿಸಿದ್ದರು. ಗೋಕಾಕ್ ಚಳುವಳಿಗೆ ಬಲ ತಂದು ಕೊಟ್ಟಿದ್ದೇ ಡಾ. ರಾಜಕುಮಾರ್. ನಂತರ ಅಂಬರೀಷ್ ಅವರ ಸ್ಥಾನವನ್ನು ತುಂಬಿದರು. ಅವರಿಬ್ಬರೂ ಹಾಕಿಕೊಟ್ಟ ದಾರಿಯಲ್ಲಿ ನಾವೆಲ್ಲರೂ ಸಾಗಬೇಕಿದೆ. ಕನ್ನಡದ ವಿಚಾರದಲ್ಲಿ ಚಲನಚಿತ್ರ ರಂಗದ ಎಲ್ಲ ದಿಗ್ಗಜ ನಟರು ಒಟ್ಟಾಗಿ ನಿಲ್ಲಬೇಕು ಎಂದರು. ಕನ್ನಡದ ರಾಯಭಾರಿಯಾಗಿಯೂ ನಾನು ಕೆಲಸ ಮಾಡಿದ್ದೇನೆ.
ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷನಾಗಿಯೂ ಇದ್ದೆ. ಕನ್ನಡ ಪರ ಹೋರಾಟಗಳನ್ನು ನಡೆಸಿದ್ದೇವೆ. ಆದರೆ ಇದುವರೆಗೂ ಆಳ್ವಿಕೆ ನಡೆಸಿದ ಎಲ್ಲಾ ಸರ್ಕಾರಗಳ ಬೇಜವಾಬ್ದಾರಿತನದಿಂದಾಗಿ ಕನ್ನಡ ಭಾಷೆ ತೊಂದರೆಗೆ ಸಿಲುಕಿದೆ. ಶಿಕ್ಷಣ ನೀತಿಯ ಸರಳೀಕರಣ, ವ್ಯಾಪಾರಿಕರಣದಿಂದಾಗಿಯೂ ಕನ್ನಡ ಭಾಷಾ ಬೆಳವಣಿಗೆಗೆ ಧಕ್ಕೆಯಾಗಿದೆ. ಭಾಷೆ ಭವಿಷ್ಯಕ್ಕೆ ದಾರಿ ಎಂಬುದನ್ನು ಸರ್ಕಾರ ಅರಿಯಬೇಕು. ಕನ್ನಡ ಭಾಷೆಗೆ ಆದ್ಯತೆ ಎನ್ನುವ ಬದಲು ಕನ್ನಡ ಭಾಷೆಯನ್ನು ಕಡ್ಡಾಯ ಮಾಡಬೇಕು ಎಂದು ಪ್ರತಿಪಾದಿಸಿದರು.

"ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ"
"ನಾನು ರಂಗಭೂಮಿ, ಚಿತ್ರರಂಗ, ಕಿರುತೆರೆ, ರಾಜಕಾರಣದಲ್ಲಿ ಗುರುತಿಸಿಕೊಂಡಿದ್ದೇನೆ. ರಾಜಕಾರಣ ಪ್ರವೇಶಿಸಿದ ಕೇವಲ 20 ದಿನದಲ್ಲೇ ಶಾಸಕನಾಗಿ ಆಯ್ಕೆಯಾದೆ, ಆನಂತರ ಎರಡು ಬಾರಿ ಎಂ.ಎಲ್.ಸಿ ಆದೆ. ರಾಜಕಾರಣವನ್ನು ಸುಮ್ಮನೆ ಮಾಡಿದೆ. ಆದರೀಗ ನನಗೆ ಟಿಕೆಟ್ ಕೊಟ್ಟರೂ ಚುನಾವಣೆಗೆ ನಿಲ್ಲುವುದಿಲ್ಲ. ನಾನು ಪ್ರಾಮಾಣಿಕನಾಗಿದ್ದು, ರಾಜಕಾರಣ ಸೇರಿ ಹಣ ಆಸ್ತಿ ಮಾಡಿಲ್ಲ. ಹಾಗಾಗಿ ನನಗೆ ಚುನಾವಣೆಯಲ್ಲಿ ನಿಲ್ಲುವ ಶಕ್ತಿ ಇಲ್ಲ. ಆಕಸ್ಮಿಕವಾಗಿ ರಂಗಭೂಮಿಗೆ ಬಂದ ನಾನು ಚಲನಚಿತ್ರ ರಂಗ, ಕಿರುತೆರೆಯಲ್ಲೂ ಸಕ್ರಿಯನಾದೆ. ಆದರೆ ಸಿನಿಮಾದಿಂದಾಗಿ ಬಲಗಣ್ಣು, ಎಡಗಿವಿ ಕಳೆದುಕೊಂಡು ಮಾತನಾಡಲಾಗದ ಸ್ಥಿತಿಗೆ ತಲುಪಿದ್ದೆ. ಆನಂತರ ಚೇತರಿಸಿಕೊಂಡೆ. ನನ್ನ ಕೈಕಾಲು ಗಟ್ಟಿಯಾಗಿರುವವರೆಗೂ ನಾಟಕ ಆಡುವುದನ್ನು ನಿಲ್ಲಿಸುವುದಿಲ್ಲ ಎಂದರು

ರಂಗಭೂಮಿ ಬಗ್ಗೆ ಮುಖ್ಯಮಂತ್ರಿ ಚಂದ್ರು ಮಾತು
ನಾಟಕಕ್ಕೆ ತನ್ನದೇ ಶಕ್ತಿಯಿದೆ. ಆದರೆ ನಾಟಕಕಾರರು ರಾಜೀಸೂತ್ರ ಅನುಸರಿಸುತ್ತಿದ್ದಾರೆ. ಅಂದಿನ ದಿನಗಳಲ್ಲಿ ಇದ್ದ ಹೋರಾಟದ ಮನೋಭಾವ ಈಗ ಇಲ್ಲದಂತಾಗಿದೆ. ಒಬ್ಬ ಹವ್ಯಾಸಿ ರಂಗ ತಂಡದಿಂದ ಕಲಾಗಂಗೋತ್ರಿಯ ಓರ್ವ ನಟನಾಗಿ ನಿರಂತರವಾಗಿ 40 ವರ್ಷ ಅಭಿನಯಿಸಿ 700 ಪ್ರದರ್ಶನಗಳನ್ನು ನೀಡಿರುವುದು ರಂಗ ದಾಖಲೆ. ರಂಗಭೂಮಿ ನನ್ನ ಬದುಕಿನ ಇತಿಹಾಸವನ್ನೇ ರೂಪಿಸಿದೆ. ಎಲ್ಲವೂ ಆಕಸ್ಮಿಕವಾಗಿಯೇ ನಡೆದಿದ್ದು. ರಂಗಭೂಮಿ, ಕಿರುತೆರೆ, ಹಿರಿತೆರೆ, ರಾಜಕಾರಣ ಎಲ್ಲವೂ ಆಕಸ್ಮಿಕವೇ ಎಂದರು.
-
Gold Rate: ಏಪ್ರಿಲ್ 4ರ ಚಿನ್ನ-ಬೆಳ್ಳಿ ದರ: ಬೆಂಗಳೂರಿನಲ್ಲಿ ಇಂದಿನ ನಿಖರ ಬೆಲೆ ಎಷ್ಟು? -
ಮೈಸೂರಲ್ಲಿ ವಂದೇ ಭಾರತ್ ರೈಲ್ವೆ ಹಬ್: 400 ಕೋಟಿ ರೂ ವೆಚ್ಚದಲ್ಲಿ ಹೈಟೆಕ್ ನಿರ್ವಹಣಾ ಕೇಂದ್ರ -
New Airport: ವಿಜಯಪುರ ಏರ್ಪೋರ್ಟ್ಗೆ ಸಿಕ್ತು 220 ಕೋಟಿ ರೂ, ಕಾರ್ಯಾಚರಣೆ ಬಗ್ಗೆ ಎಂಬಿ ಪಾಟೀಲ ಅಪ್ಡೇಟ್ -
Bengaluru Property: ಬೆಂಗಳೂರಿನ 3 ಲಕ್ಷಕ್ಕೂ ಅಧಿಕ ಆಸ್ತಿ ಮಾಲೀಕರಿಗೆ ಶುಭ ಸುದ್ದಿ -
"ಇಲ್ಲಿ ಎಲ್ಲದಕ್ಕೂ ಚೌಕಾಸಿ ಮಾಡಬೇಕು": ಬೆಂಗಳೂರಿನಲ್ಲಿ 2 ತಿಂಗಳು ಕಳೆದ ಮುಂಬೈ ಯುವಕನ Viral Post -
3 ವರ್ಷಕ್ಕೆ 1.17 ಕೋಟಿ: ಮಲೈಕಾ ಅರೋರಾ ಅಪಾರ್ಟ್ಮೆಂಟ್ ಬಾಡಿಗೆ ಬಹಿರಂಗ -
Karnataka Weather: ಬೇಸಿಗೆ ಬಿಸಿಲ ನಡುವೆ ರಾಜ್ಯದ ಹಲವೆಡೆ ಗುಡುಗು-ಮಿಂಚು ಸಹಿತ ಮಳೆ; ಈ ಜಿಲ್ಲೆಗಳಿಗೆ ಯೆಲ್ಲೋ ಅಲರ್ಟ್ -
April 4 Horoscope: ಇಂದು ನಿಮ್ಮ ರಾಶಿ ಏನು ಹೇಳುತ್ತದೆ? ಏಪ್ರಿಲ್ 4 ಭವಿಷ್ಯ ಇಲ್ಲಿದೆ -
HSRP: ಎಚ್ಎಸ್ಆರ್ಪಿ ನಂಬರ್ ಪ್ಲೇಟ್ ಕಡ್ಡಾಯ: ವದಂತಿಗಳಿಗೆ ಕಿವಿಗೊಡಬೇಡಿ ಎಂದು ಸ್ಪಷ್ಟನೆ ಕೊಟ್ಟ ಸಾರಿಗೆ ಇಲಾಖೆ -
Bengaluru: ಆಟೋ LPG ಕೊರತೆ ಬಗೆಹರಿಯುವ ವಿಶ್ವಾಸ: ಪೂರೈಕೆ ಹೆಚ್ಚಿಸಿದ ಇಂಡಿಯನ್ ಆಯಿಲ್ -
ರಾಜ್ಯಪಾಲರೇ ಗಂಟುಮೂಟೆ ಕಟ್ಟಿಕೊಂಡು ನಿಮ್ಮ ರಾಜ್ಯಕ್ಕೆ ತೊಲಗಿ: ಕರವೇ ನಾರಾಯಣಗೌಡ ಎಚ್ಚರಿಕೆ -
ಲಲಿತ್ಪುರ ಫಾರ್ಮಾ ಪಾರ್ಕ್ ಅನ್ನು ಜಾಗತಿಕ ರಫ್ತು ಕೇಂದ್ರವನ್ನಾಗಿ ಮಾಡುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ












Click it and Unblock the Notifications