ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮೈಸೂರಲ್ಲಿ ಜೆಸಿಬಿಗಳ ಘರ್ಜನೆ; ಅಕ್ರಮ ವಾಣಿಜ್ಯ ಕಟ್ಟಡ ಧ್ವಂಸ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು, ಡಿಸೆಂರ್ 16: ಮೈಸೂರು ನಗರದಲ್ಲಿ ಜೆಸಿಬಿಗಳು ಘರ್ಜನೆ ಮಾಡಿವೆ. ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಮೀಪದ ನಿರ್ಮಾಣಗೊಂಡಿದ್ದ ಅಕ್ರಮ ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಲಾಯಿತು.

ಬುಧವಾರ ಬೆಳಗ್ಗೆಯಿಂದಲೇ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ (ಮೂಡಾ) ಪೊಲೀಸರ ಭದ್ರತೆಯಲ್ಲಿ ಬೆಲವತ್ತ ಗ್ರಾಮದ ಸರ್ವೆ ನಂಬರ್ 295ರಲ್ಲಿ ಕಾನೂನು ಬಾಹಿರವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಮಳಿಗೆಗಳನ್ನು ತೆರವು ಮಾಡಲಾಯಿತು.

ಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧಹಿಂದೂ ರುದ್ರಭೂಮಿಯಲ್ಲಿ ಮೂಡಾ ವ್ಯಾಪಾರ ಮಳಿಗೆ ನಿರ್ಮಾಣ: ಸ್ಥಳೀಯರ ವಿರೋಧ

ಈ ಭೂಪ್ರದೇಶವು ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಸ್ಥಳೀಯ ಯೋಜನಾ ಪ್ರದೇಶದ ವ್ಯಾಪ್ತಿಗೆ ಒಳಪಟ್ಟಿದೆ. ಈ ಸ್ಥಳೀಯ ಯೋಜನಾ ಪ್ರದೇಶದಲ್ಲಿ ಯಾವುದೇ ಅಭಿವೃದ್ಧಿ ಕಾರ್ಯಗಳನ್ನು ಕೈಗೊಳ್ಳುವ ಮುನ್ನ ಪ್ರಾಧಿಕಾರದಿಂದ ಅನುಮತಿ ಪಡೆಯುವುದು ಕಡ್ಡಾಯವಾಗಿದೆ.

ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್ಮೈಸೂರು: ಮೂಡಾ ಸೈಟ್ ಮಾರಾಟಕ್ಕಿಟ್ಟವನ ಮೇಲೆ ಕ್ರಿಮಿನಲ್‌ ಕೇಸ್

MUDA Commercial Complex Demolition Drive In City

ಕರ್ನಾಟಕ ನಗರ ಯೋಜನಾ ಕಾಯ್ದೆ 1961ರಡಿಯಲ್ಲಿ ಕೃಷಿ ಭೂಮಿಯಲ್ಲಿ ಮೈಸೂರು-ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯ (ಶೋಭಾ ಗಾರ್ಡನ್ ಬಡಾವಣೆಯ ಉತ್ತರ ದಿಕ್ಕಿನಲ್ಲಿ) ಮುಖ್ಯ ರಸ್ತೆಗೆ ಅಭಿಮುಖವಾಗಿ ಅನುಮೋದನೆ ಪಡೆಯದೇ ವಾಣಿಜ್ಯ ಮಳಿಗೆಗಳನ್ನು ನಿರ್ಮಿಸಿದ್ದು ಕಾನೂನು ಬಾಹಿರವಾಗಿದೆ.

ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ ಕೋರ್ಟ್ ಆದೇಶದ ಮೇರೆಗೆ ಮೂಡಾ ವಿಶೇಷಾಧಿಕಾರಿಗಳ ಕಚೇರಿ ಜಪ್ತಿ

ಒಟ್ಟು 5 ಮಳಿಗೆಗಳನ್ನು ಮೈಸೂರು ನಗರ ಪಾಲಿಕೆ ವಾರ್ಡ್‌ 99ರ ಸದಸ್ಯ ಸಮೀಉಲ್ಲ ನಿರ್ಮಿಸುತಿದ್ದರು. ಈ ಸರ್ವೆ ನಂಬರ್ ಭೂಪ್ರದೇಶದಲ್ಲಿ ಅನಧಿಕೃತವಾಗಿ ನಿರ್ಮಾಣವಾಗುತ್ತಿರುವ ವಾಣಿಜ್ಯ ಸಂಕೀರ್ಣ ಕಾಮಗಾರಿಯನ್ನು ಸ್ಥಗಿತಗೊಳಿಸುವಂತೆ ಎರಡು ಬಾರಿ ನೋಟೀಸ್‌ ನೀಡಲಾಗಿತ್ತು.

MUDA Commercial Complex Demolition Drive In City

ಅನಧಿಕೃತವಾಗಿ ನಿರ್ಮಾಣವಾಗಿರುವ ವಾಣಿಜ್ಯ ಸಂಕೀರ್ಣ ಕಟ್ಟಡವನ್ನು ಪೊಲೀಸ್ ಬಂದೋಬಸ್ತ್‌ನಲ್ಲಿ ತೆರವುಗೊಳಿಸಲಾಗಿದೆ ಎಂದು ಮುಡಾ ಆಯುಕ್ತ ಡಾ. ಡಿ. ಬಿ. ನಟೇಶ್ ಹೇಳಿದ್ದಾರೆ.

English summary
Mysore Urban Development Authority (Muda) took illegal building demolition drive on December 16, 2020. Commercial complex demolished in near Bengaluru-Mysuru high way.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X