ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಎಸ್‌ಐಎಲ್‌ನಿಂದ ಕುಡಿಯುವ ನೀರು, ಔಷಧ ಮಳಿಗೆ

|
Google Oneindia Kannada News

ಮೈಸೂರು, ಜ.9 : ಎಂಎಸ್‌ಐಎಲ್ ಶೀಘ್ರದಲ್ಲೇ ಔಷಧ ಮತ್ತು ಶುದ್ಧ ಕುಡಿಯುವ ನೀರಿನ ವ್ಯಾಪಾರ ಕ್ಷೇತ್ರಕ್ಕೆ ಪಾದಾರ್ಪಣೆ ಮಾಡಲಿದೆ. ಬೆಂಗಳೂರು ಸೇರಿದಂತೆ ರಾಜ್ಯದ ಪ್ರತಿ ಜಿಲ್ಲೆಯಲ್ಲಿ ಎಂಎಸ್‌ಐಎಲ್ ಔಷಧ ಮಾರಾಟ ಮಳಿಗೆ ಸ್ಥಾಪನೆಯಾಗಲಿದೆ.

ರಾಜ್ಯ ಸರ್ಕಾರದ ಮೈಸೂರು ಸೇಲ್ಸ್‌ ಇಂಟರ್‌ನ್ಯಾಷನಲ್ ಲಿಮಿಟೆಡ್ (ಎಂಎಸ್‌ಐಎಲ್) ಸಂಸ್ಥೆಯು ಅಧ್ಯಕ್ಷ ಎಂ.ಎಲ್.ಅನಿಲ್ ಕುಮಾರ್ ಈ ಕುರಿತು ಮಾಹಿತಿ ನೀಡಿದ್ದಾರೆ. ಪ್ರಸಕ್ತ ಹಣಕಾಸು ವರ್ಷದಲ್ಲಿಯೇ ಔಷಧ ಮಳಿಗೆ ಮತ್ತು ಖನಿಜ­ಯುಕ್ತ ನೀರಿನ ಬಾಟಲಿಗಳ ಮಾರಾಟವನ್ನು ಆರಂಭಿಸಲಿದ್ದೇವೆ ಎಂದು ಹೇಳಿದ್ದಾರೆ.

msil

ಸಾರ್ವಜಿನಿಕರಿಗೆ ಸುಲಭ ಬೆಲೆಯಲ್ಲಿ ಔಷಧ ಮಾರಾಟ ಮಾಡಲು ಎಂಎಸ್‌ಐಎಲ್ ಈ ಯೋಜನೆಯನ್ನು ರೂಪಿಸಿದೆ. ಬೆಂಗಳೂರು ಸೇರಿದಂತೆ ಪ್ರತಿಯೊಂದು ಜಿಲ್ಲಾ ಕೇಂದ್ರಗಳಲ್ಲಿಯೂ ಸುಸಜ್ಜಿತ ಮಳಿಗೆಗಳ ಮೂಲಕ ಔಷಧ ಮಾರಾಟ ಆರಂಭಿಸ­ಲಾಗುವುದು ಎಂದು ಅನಿಲ್ ಕುಮಾರ್ ತಿಳಿಸಿದರು. [ಮೈಸೂರು ರೇಷ್ಮೆ ಸೀರೆಗೆ ಮನಸೋತ ಏರ್ ಇಂಡಿಯಾ]

ನಮ್ಮ ಸಂಸ್ಥೆಯು ಕನಿಷ್ಠ ಲಾಭಾಂಶವನ್ನು ಪಡೆದು ಜನರಿಗೆ ಈ ಯೋಜನೆಗಳನ್ನು ಆರಂಭಿಸಲಾಗುತ್ತಿದೆ. ಶುದ್ಧವಾದ ಕುಡಿಯುವ ನೀರನ್ನು ಕಡಿಮೆ ಬೆಲೆಯಲ್ಲಿ ಜನರಿಗೆ ಪೂರೈಕೆ ಮಾಡುವ ಯೋಜನೆಯೂ ಇದೆ. ಖನಿಜ­ಯುಕ್ತ ನೀರಿನ ಬಾಟಲಿಗಳ ಮಾರಾಟವನ್ನು ಶೀಘ್ರದಲ್ಲಿಯೇ ಆರಂಭಿಸಲಾಗುವುದು ಎಂದು ಅವರು ಮಾಹಿತಿ ನೀಡಿದ್ದಾರೆ. [ಮೈಸೂರು ವಿವಿಗೆ ಜ.27ಕ್ಕೆ ರಾಷ್ಟ್ರಪತಿ ಬರ್ತಾರೆ]

ಚಿಟ್ ಫಂಡ್ ಶಾಖೆಗಳು : ಎಂಎಸ್‌ಐಎಲ್‌ ಸಂಸ್ಥೆಯ 22 ಚಿಟ್ ಫಂಡ್ ಕೇಂದ್ರಗಳು ಸದ್ಯ ಕಾರ್ಯನಿರ್ವಹಿಸುತ್ತಿವೆ. ಅವುಗಳಲ್ಲಿ 15 ಕೇಂದ್ರಗಳು ಬೆಂಗಳೂರಿನಲ್ಲಿವೆ. ಜಿಲ್ಲಾ ಕೇಂದ್ರ, ಪ್ರಮುಖ ನಗರಗಳಲ್ಲಿಯೂ ಚಿಟ್ ಫಂಡ್ ಕೇಂದ್ರಗಳನ್ನು ಆರಂಭಿಸಲಾಗುತ್ತದೆ ಎಂದರು.

ಸದ್ಯ ಬಹಳಷ್ಟು ಖಾಸಗಿ ಸಂಸ್ಥೆಗಳು ಮತ್ತು ವ್ಯಕ್ತಿಗಳು ಚಿಟ್‌ ಫಂಡ್ ವ್ಯವಹಾರ ನಡೆಸುತ್ತಿದ್ದಾರೆ. ಆದರೆ, ಎಂಎಸ್‌ಐಎಲ್ ಸರ್ಕಾರಿ ಸಂಸ್ಥೆಯಾಗಿದ್ದು, ಅತ್ಯಂತ ವಿಶ್ವಾಸಾರ್ಹ­ವಾಗಿದೆ ಎಂದು ಅನಿಲ್ ಕುಮಾರ್ ಹೇಳಿದರು. ರಾಜ್ಯದಲ್ಲಿ ಮೊದಲ ಹಂತದಲ್ಲಿ ಜಿಲ್ಲಾ ಕೇಂದ್ರಗಳಲ್ಲಿ, ಎರಡನೇ ಹಂತದಲ್ಲಿ ತಾಲ್ಲೂಕು ಕೇಂದ್ರಗಳಲ್ಲಿ ಚಿಟ್‌ ಫಂಡ್ ಶಾಖೆಗಳನ್ನು ಆರಂಭಿಸಲಾಗುವುದು ಎಂದರು.

English summary
Mysore Sales International Limited (MSIL) Chairman ML Anil Kumar said, Msil will launch pharmacy shops and packaged drinking water soon we are offering products at affordable rates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X