ಪಿರಿಯಾಪಟ್ಟಣದಲ್ಲಿ ಮಗು ಕೊಂದು ಆತ್ಮಹತ್ಯೆ ಮಾಡಿಕೊಂಡ ತಾಯಿ
ಮೈಸೂರು, ಏಪ್ರಿಲ್ 11: ತಾಯಿಯೊಬ್ಬರು ಮಗುವಿನ ಕತ್ತು ಕೊಯ್ದು ತಾನೂ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಪಿರಿಯಾಪಟ್ಟಣದ ಹೆಮ್ಮಿಗೆ ಗ್ರಾಮದಲ್ಲಿ ನಡೆದಿದೆ.
ಸೀಮಾ ಬಾನು (24) ಮನ್ಹಾ ಬಾನು (3) ಮೃತಪಟ್ಟವರು. ಗಂಡ ಹೆಂಡತಿ ನಡುವೆ ಜಗಳವಾಗಿದ್ದು, ಇದರಿಂದ ಬೇಸರಗೊಂಡಿದ್ದ ಸೀಮಾ ಮಗುವಿನ ಕುತ್ತಿಗೆ ಕುಯ್ದು, ತಾನೂ ಕುತ್ತಿಗೆ ಕುಯ್ದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಸೀಮಾ ಗಂಡ, ಆರೋಪಿ ಸೈಯದ್ ಸದ್ದಾಮ್ ನನ್ನು ಪೊಲೀಸರು ಬಂಧಿಸಿದ್ದಾರೆ. ಮೃತಳ ಕುಟುಂಬಸ್ಥರು ಕೊಲೆ ಆರೋಪ ಮಾಡಿದ್ದಾರೆ. ಪಿರಿಯಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.












Click it and Unblock the Notifications