ಪ್ರೇಮಿಗಳ ದಿನದಂದು ಎಚ್.ಡಿ.ಕೋಟೆ ವಸತಿ ಶಾಲೆಯಿಂದ ಬಾಲಕಿ ಕಿಡ್ನಾಪ್
ಮೈಸೂರು, ಫೆಬ್ರವರಿ 25: ವಸತಿ ಶಾಲೆಯಿಂದ ಬಾಲಕಿಯೊಬ್ಬಳನ್ನು ಯುವಕನೊಬ್ಬ ಅಪಹರಣ ಮಾಡಿರುವ ಘಟನೆ ಎಚ್.ಡಿ. ಕೋಟೆ ತಾಲೂಕಿನ ಬೆಳತ್ತೂರು ಗ್ರಾಮದ ಮೊರಾರ್ಜಿ ವಸತಿ ಶಾಲೆಯಲ್ಲಿ ನಡೆದಿದೆ. ಈ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
ಮೊರಾರ್ಜಿ ವಸತಿ ಶಾಲೆಯಲ್ಲಿ 10ನೇ ತರಗತಿ ಓದುತ್ತಿದ್ದ ಬಾಲಕಿಯನ್ನು ಪ್ರೇಮಿಗಳ ದಿನವಾದ ಫೆಬ್ರವರಿ 14ರಂದು ಯುವಕನೊಬ್ಬ ಕಿಡ್ನಾಪ್ ಮಾಡಿದ್ದಾನೆ. ಈ ಸಂಬಂಧ ಪ್ರಾಂಶುಪಾಲರಾದ ಶ್ರೀದೇವಿ ಅವರು ಎಚ್.ಡಿ. ಕೋಟೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ಶಾಲೆಯಲ್ಲಿ ಅಂದು ಪೂಜಾ ಕಾರ್ಯಕ್ರಮ ನಡೆಯುತ್ತಿದ್ದು, ಈ ಸಂದರ್ಭದಲ್ಲಿ ಬಾಲಕಿಯನ್ನು ಕಿಡ್ನಾಪ್ ಮಾಡಲಾಗಿದೆ. ವೆಂಕಟೇಶ್ ಎಂಬಾತ ಬಾಲಕಿಯ ಅಪಹರಣ ಮಾಡಿರುವುದಾಗಿ ತಿಳಿದುಬಂದಿದೆ. ಶಾಲೆಯಿಂದಲೇ ದ್ವಿಚಕ್ರ ವಾಹನದಲ್ಲಿ ಬಾಲಕಿಯನ್ನು ಎಳೆದೊಯ್ದಿರುವುದಾಗಿ ತಿಳಿದುಬಂದಿದೆ. ವೆಂಕಟೇಶ್ ಎಂಬಾತನ ವಿರುದ್ಧ ಪೊಲೀಸರು ಐಪಿಸಿ 363 ಅನ್ವಯ ಪ್ರಕರಣ ದಾಖಲಿಸಿದ್ದಾರೆ.












Click it and Unblock the Notifications