ಕುಟುಂಬ ಸಮೇತರಾಗಿ ಮತದಾನ ಮಾಡಿದ ಸಚಿವ ಸಾ.ರಾ.ಮಹೇಶ್

ಮೈಸೂರು, ಏಪ್ರಿಲ್ 18:ಸಚಿವ ಸಾ.ರಾ.ಮಹೇಶ್ ಕೆ.ಆರ್.ನಗರ ತಾಲೂಕಿನಲ್ಲಿ ಕುಟುಂಬ ಸಮೇತರಾಗಿ ಆಗಮಿಸಿ ಮತ ಚಲಾಯಿಸಿದರು. ಸಾ.ರಾ.ಮಹೇಶ್ ಪತ್ನಿ ಅನಿತಾ, ಪುತ್ರ ಧನುಷ್ ಜೊತೆ ಆಗಮಿಸಿ ಸಾಲಿಗ್ರಾಮದ ಸರ್ಕಾರಿ ಶಾಲೆಯಲ್ಲಿ ಮತದಾನ ಮಾಡಿದರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

ಮತ ಚಲಾವಣೆ ಒಂದೆಡೆಯಾದರೆ, ಇತ್ತ ನಗರದ ಹಲವೆಡೆ ಕೆಲವರು ಮತದಾನದಿಂದ ವಂಚಿತರಾಗಿದ್ದಾರೆ. ಒಂದೇ ಹೆಸರಿನ ಮತ್ತೊಬ್ಬ ವ್ಯಕ್ತಿಗೆ ಮತ ಹಾಕಲು ಮತಗಟ್ಟೆ ಅಧಿಕಾರಿಗಳು ಅವಕಾಶ ನೀಡಿದ್ದಾರೆ. ಮೈಸೂರಿನ ತ್ಯಾಗರಾಜ ರಸ್ತೆಯಲ್ಲಿ ಇರುವ ಮತಗಟ್ಟೆ ಸಂಖ್ಯೆ 133 ರಲ್ಲಿ ಗಂಗಾಧರ ಎಂಬ ವ್ಯಕ್ತಿ ಮತದಾನದಿಂದ ವಂಚಿತರಾಗಿದ್ದಾರೆ.

ಮೈಸೂರು - ಕೊಡಗು ಲೋಕಸಭಾ ಕ್ಷೇತ್ರದಲ್ಲಿ ನಿಧಾನಗತಿಯ ಮತದಾನ ನಡೆಯುತ್ತಿದೆ. ಇಂದು ಮಧ್ಯಾಹ್ನ 3 ಗಂಟೆಯ ಮತದಾನದ ಶೇಕಡವಾರು ಆಮೆಗತಿಯಲ್ಲಿ ಸಾಗುತ್ತಿದೆ. ಮಡಿಕೇರಿ- 58.45%, ವಿರಾಜಪೇಟೆ- 56.38%, ಪಿರಿಯಾಪಟ್ಟಣ- 56.47%, ಹುಣಸೂರು- 54.93%, ಚಾಮುಂಡೇಶ್ವರಿ- 45.86%, ಕೃಷ್ಣರಾಜ- 49.93%, ಚಾಮರಾಜ- 44.67%, ನರಸಿಂಹರಾಜ- 41.15% ಒಟ್ಟು 50.39% ರಷ್ಟು ಮತ ಚಲಾವಣೆಯಾಗಿದೆ.

Minister Sa. Ra.Mahesh cast thier vote at Saligrama government school

ನಗರದಲ್ಲಿ ಸ್ಕೇಟಿಂಗ್ ಯುವಕರು ಮತದಾನ ಮಾಡುವಂತೆ ಜನರಿಗೆ ವಿನೂತನವಾಗಿ ಮನವಿ ಮಾಡಿದರು. ಟೀ ಶರ್ಟ್ ತೊಟ್ಟು ವೋಟ್ ಹಾಕುವಂತೆ ಜಾಗೃತಿ ಮೂಡಿಸಿದರು. ಸಿದ್ದಾರ್ಥ ಲೇಔಟ್, ನಜರ್ ಬಾದ್, ಟೌನ್ ಹಾಲ್, ಮೆಡಿಕಲ್ ಕಾಲೇಜು, ಅರಸು ಬೋರ್ಡಿಂಗ್ ಶಾಲೆ, ಡಿಸಿ ಆಫೀಸ್ ,ಶ್ರೀ ರಾಂಪೇಟೆ ಮೈಸೂರು ಡೈರಿ ಸುತ್ತಾ ಮುತ್ತಾ ವೋಟ್ ಜಾಗೃತಿ ಮೂಡಿಸಿದರು.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+