ದಸರಾ ಓಟದ ಸ್ಪರ್ಧೆಯಲ್ಲಿ ಮುಗ್ಗರಿಸಿ ಬಿದ್ದ ಸಚಿವ ಜಿಟಿ ದೇವೇಗೌಡ
Recommended Video

ದಸರಾ ಓಟದ ಸ್ಪರ್ಧೆಯಲ್ಲಿ ಮುಗ್ಗರಿಸಿ ಬಿದ್ದ ಸಚಿವ ಜಿಟಿ ದೇವೇಗೌಡ | Oneindia Kannada
ಮೈಸೂರು, ಅಕ್ಟೋಬರ್.14: ವಿಶ್ವ ವಿಖ್ಯಾತ ಮೈಸೂರು ದಸರಾ ಹಿನ್ನಲೆಯಲ್ಲಿ ಇಂದು ಭಾನುವಾರ (ಅ.14) ದಸರಾ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು. ಓಟದ ಸ್ಪರ್ಧೆಗೆ ಚಾಲನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವ ಜಿಟಿ ದೇವೇಗೌಡರು, ನಂತರ ಸ್ಪರ್ಧೆಯಲ್ಲಿ ಪಾಲ್ಗೊಂಡು ಓಡುವ ವೇಳೆ ಮುಗ್ಗರಿಸಿ ಬಿದ್ದ ಘಟನೆ ನಡೆದಿದೆ.
ಓಡುವ ಬರದಲ್ಲಿ ಸಚಿವ ಜಿಟಿಡಿ ಮುಂಗಾತವಾಗಿ ಬಿದ್ದಿದ್ದು, ತಕ್ಷಣ ಅವರ ಪಕ್ಕದಲ್ಲಿದ್ದವರು ಅವರನ್ನು ಎಬ್ಬಿರಿಸಿ ಆರೈಕೆ ಮಾಡಿದ್ದಾರೆ. ಆದರೆ ಸುಧಾರಿಸಿಕೊಂಡ ನಂತರ ಸಚಿವರು ಮತ್ತೆ ಸ್ಪಲ್ವ ದೂರ ನಿಧಾನವಾಗಿ ಓಡಿದ್ದಾರೆ.
ಸದ್ಯ ಈ ಘಟನೆಯ ವಿಡಿಯೋ ಈಗ ವೈರಲ್ ಆಗಿದೆ. ಹಿರಿಯರ 2 ಕಿ.ಮೀ. ದೂರದ ಓಟದ ಸ್ಪರ್ಧೆಯಲ್ಲಿ ಉಸ್ತುವಾರಿ ಸಚಿವರು ಭಾಗಿಯಾಗಿದ್ದರು ಎನ್ನಲಾಗಿದೆ. ಪಂಚೆ ಎತ್ತಿಕಟ್ಟಿ ಓಟದಲ್ಲಿ ಭಾಗಿಯಾಗಿದ್ದ ಸಚಿವರು ಅತ್ಯುತ್ಸಾಹದಿಂದ ವೇಗದಲ್ಲಿ ಓಡಿ ಎಲ್ಲರ ಗಮನ ಸೆಳೆದರು.

ಸ್ಪರ್ಧೆಯಲ್ಲಿ ಸಾವಿರಕ್ಕೂ ಅಧಿಕ ಮಂದಿ ಭಾಗವಹಿಸಿದ್ದರು. 10,06, 05, 03 ಮತ್ತು 02 ಕಿ.ಮೀ. ವಿಭಾಗದಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು.












Click it and Unblock the Notifications