ಕೆಲಸ ಮಾಡುತ್ತಿದ್ದ ಲಾಡ್ಜ್ ನಲ್ಲೇ ನೇಣಿಗೆ ಶರಣಾದ ವ್ಯಕ್ತಿ
ಮೈಸೂರು, ನವೆಂಬರ್ 23: ಸಾಲಬಾಧೆ ತಾಳಲಾರದೆ ವ್ಯಕ್ತಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ನಂಜನಗೂಡಿನ ಖಾಸಗಿ ಲಾಡ್ಜ್ ನಲ್ಲಿ ನಡೆದಿದೆ.
ಮೃತರನ್ನು ನಂಜನಗೂಡು ಪಟ್ಟಣದ ಕುರುಬಗೇರಿಯ ನಿವಾಸಿ ಪ್ರೇಮ್ ಕುಮಾರ್ (55) ಎಂದು ಗುರುತಿಸಲಾಗಿದೆ. ತಾನು ಕೆಲಸ ನಿರ್ವಹಿಸುತ್ತಿದ್ದ ಲಾಡ್ಜ್ ನ ಕೊಠಡಿಯಲ್ಲಿ ವೈರ್ ನಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಮೃತ ಪ್ರೇಮ್ ಕುಮಾರ್ ಮೈಸೂರಿನ ಖಾಸಗಿ ಬ್ಯಾಂಕ್ ಹಾಗೂ ಕೆಲವು ಸ್ವಸಹಾಯ ಸಂಘಗಳಿಂದ ಲಕ್ಷಾಂತರ ರೂಪಾಯಿ ಸಾಲ ಪಡೆದಿದ್ದರು. ಮನೆಯನ್ನೂ ಕಟ್ಟಿಸುತ್ತಿದ್ದರು. ಸಾಲ ಮರುಪಾವತಿಸುವಂತೆ ಬ್ಯಾಂಕ್ ಮತ್ತು ಸಂಘದವರಿಂದ ಹೆಚ್ಚು ಒತ್ತಡವಿದ್ದ ಕಾರಣ ನೇಣಿಗೆ ಶರಣಾಗಿದ್ದಾರೆ. ಘಟನಾ ಸ್ಥಳಕ್ಕೆ ನಂಜನಗೂಡಿನ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.












Click it and Unblock the Notifications