• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನಲ್ಲಿ ಸುತ್ತಾಡಿದ ಕಣ್ಸನ್ನೆ ಬೆಡಗಿ ಪ್ರಿಯಾ ವಾರಿಯರ್

|

ಮಡಿಕೇರಿ, ಆಗಸ್ಟ್ 27: ಕಣ್ಸನ್ನೆಯಿಂದಲೇ ಸುದ್ದಿಯಾಗಿದ್ದ ಪ್ರಸಿದ್ಧ ಮಲಯಾಳಂ ನಟಿ ಪ್ರಿಯಾ ವಾರಿಯರ್ ಕೊಡಗಿನ ನಿಸರ್ಗಧಾಮಕ್ಕೆ ನಿನ್ನೆ ಭೇಟಿ ನೀಡಿದ್ದರು.

ಕಣ್ಮಿಟುಕಿಸಿದರೂ ಕೇಸು ಹಾಕ್ತೀರಾ, ಬೇರೆ ಕೆಲ್ಸ ಇಲ್ವಾ? ಸುಪ್ರೀಂ ಪ್ರಶ್ನೆ

ನೆರೆ ಪ್ರವಾಹದ ಗುಂಗಿನಿಂದ ಪ್ರವಾಸಿಗರನ್ನು ಹೊರತರಲು ಕುಶಾಲನಗರದ ನಿಸರ್ಗಧಾಮ ಕೇಂದ್ರ ಆಹ್ವಾನಿಸಿದ್ದ ಹಿನ್ನೆಲೆ ಭೇಟಿ ನೀಡಿದ್ದ ಅವರದ್ದು ಕೊಡಗಿಗೆ ಇದು ಮೂರನೇ ಬಾರಿ ಭೇಟಿ.

ಇದೇ ವೇಳೆ ಮಾತನಾಡಿದ ಅವರು, "ಕೊಡಗು ಈಗ ಸಹಜ ಸ್ಥಿತಿಯಲ್ಲಿದೆ. ಎಲ್ಲರೂ ಬಂದು ಪ್ರಕೃತಿಯ ಸೌಂದರ್ಯ ಸವಿಯಿರಿ" ಎಂದು ಕರೆ ನೀಡಿದರು. ಮುಂದೆ ಬಿಡುಗಡೆಯಾಗಲಿರುವ ತಮ್ಮ ಚಿತ್ರದ ಬಗ್ಗೆ ಪ್ರತಿಕ್ರಿಯಿಸಿದ ಪ್ರಿಯಾ ವಾರಿಯರ್, "ಹಿಂದಿ, ತೆಲುಗು ಹಾಗೂ ಕನ್ನಡ ಚಿತ್ರದಲ್ಲಿ ಸಿನಿಮಾ ಮಾಡುತ್ತಿದ್ದೇನೆ. ಅಭಿಮಾನಿಗಳು ಅಡಾರ್ ಲವ್ ಮಲಯಾಳಂ ಚಿತ್ರಕ್ಕೆ ನೀಡಿದ ಬೆಂಬಲವನ್ನು ಮುಂದಿನ ಸಿನಿಮಾಗಳಿಗೂ ನೀಡುತ್ತಾರೆ ಎಂಬ ನಿರೀಕ್ಷೆಯಲ್ಲಿದ್ದೇನೆ" ಎಂದು ನಕ್ಕರು.

ನಿಸರ್ಗಧಾಮದ ಟೂರಿಸ್ಟ್ ಸೆಂಟರ್ ನ ಹಲವು ಮಳಿಗೆಗಳಿಗೆ ಭೇಟಿ ನೀಡಿ ಶಾಪಿಂಗ್ ಕೂಡ ಮಾಡಿದರು.

English summary
Malayam actress Priya varrier visits Nisargadhama at Madikeri. She also appealed to tourist to come and enjoy at Nisarghadhama.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X