ಮೊದಲ ಹಂತದ ಲೋಕಸಮರಕ್ಕೆ ಕ್ಷಣಗಣನೆ:ಮಂಡ್ಯ, ಮೈಸೂರು ಕಡೆ ಬೆಟ್ಟಿಂಗ್ ಜೋರು!
Recommended Video
ಮೈಸೂರು, ಏಪ್ರಿಲ್ 17: ಲೋಕಸಭಾ ಚುನಾವಣೆ 2019ರ ಮೊದಲ ಹಂತದ ಮತದಾನದ ಹಬ್ಬಕ್ಕೆ ಕೆಲವೇ ಗಂಟೆ ಬಾಕಿ ಇದೆ. ಇತ್ತ ಚುನಾವಣೆಯ ಪ್ರಚಾರದ ಭರಾಟೆ ಮುಕ್ತಾಯವಾಗುತ್ತಿದ್ದಂತೆಯೇ ಇಂದು ಇಡೀ ರಾಜ್ಯದ ಕೇಂದ್ರ ಬಿಂದುವೆಂದೇ ಹೆಸರಾದ ಮಂಡ್ಯ ಹಾಗೂ ಮೈಸೂರಿನ ವಿವಿಧೆಡೆ ಬೆಟ್ಟಿಂಗ್ ದಂಧೆ ಸದ್ದಿಲ್ಲದೇ ಆರಂಭವಾಗಿದೆ.
ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?
ಸಾಮಾನ್ಯವಾಗಿ ಮತ ಎಣಿಕೆಯ ದಿನ ಬೆಟ್ಟಿಂಗ್ ಭರಾಟೆ ಹೆಚ್ಚಾಗಿರುತ್ತದೆ. ಆದರೆ ಈ ಬಾರಿ ಸೋಲು-ಗೆಲುವಿನ ಬಗ್ಗೆ ಹೆಚ್ಚು ಚರ್ಚೆ ನಡೆಯುತ್ತಿದೆ. ಇದೇ ಚರ್ಚೆ ಬೆಟ್ಟಿಂಗ್ ಗೆ ಎಡೆ ಮಾಡಿಕೊಟ್ಟಿದೆ.
ಈ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಚುನಾವಣಾ ಕಣದಲ್ಲಿ ಇದ್ದರೆ, ಅವರೊಂದಿಗೆ ನಿಖಿಲ್ ಹಣಾಹಣಿ ಜೋರಾಗಿದೆ ಎಂಬ ಅಭಿಪ್ರಾಯವನ್ನು ಆಧರಿಸಿ ಬೆಟ್ಟಿಂಗ್ ನಲ್ಲಿ ಹಣ ಕಟ್ಟುತ್ತಿದ್ದಾರೆ.

ಬೆಟ್ಟಿಂಗ್ ನಲ್ಲಿ ಮೈಸೂರು ಹಿಂದೆ ಬಿದ್ದಿಲ್ಲ. ಮತದಾರರ ಒಲವು ಯಾರ ಕಡೆಗೆ ಇದೆ ಎನ್ನುವುದಕ್ಕಿಂತಲೂ, ರಾಜ್ಯ ಮಟ್ಟದಲ್ಲಿ ಈ ಕ್ಷೇತ್ರ ಗಮನಾರ್ಹ ಎಂಬ ಕಾರಣಕ್ಕೆ ಬೆಟ್ಟಿಂಗ್ ನಡೆಯುತ್ತಿದೆ. ಬೆಟ್ಟಿಂಗ್ ನಡೆಸುವುದು ಕಾನೂನು ಬಾಹಿರ ಎಂಬುದು ಗೊತ್ತಿದ್ದರೂ ಗುಪ್ತವಾಗಿ ಅದಕ್ಕೆ ಕುಮ್ಮಕ್ಕು ನೀಡಲಾಗುತ್ತದೆ. ಸುಖಾ ಸುಮ್ಮನೆ ಹಣ ಕಳೆದುಕೊಳ್ಳುವ ಈ ದಂಧೆಗೆ ಜನ ಬಲಿಯಾಗಬಾರದು ಎಂದು ಹಿರಿಯರು ಕಿವಿಮಾತು ಹೇಳುತ್ತಾರೆ.
ಮತದಾನಕ್ಕೆ ಮುನ್ನಾದಿನ ನಡೆಯುವ ಬೆಟ್ಟಿಂಗ್ ಮತದಾನದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ. ಅಂದರೆ ಒಂದು ಪಕ್ಷದ ಪರ ಬೆಟ್ಟಿಂಗ್ ಮಾಡಿದವರು, ಇಂತಹ ಪಕ್ಷಕ್ಕೇ ವೋಟ್ ಮಾಡಿ ಎಂದು ತಮ್ಮ ಬಂಧು ಬಳಗದವರನ್ನು ಒತ್ತಾಯಿಸುವ ಸಂಭವ ಇದೆ. ಇದು ಒಟ್ಟು ಮತದಾನದ ಮೇಲೆ ಪರಿಣಾಮ ಬೀರಲೂಬಹುದು ಎನ್ನುವ ಅಭಿಪ್ರಾಯ ಪಕ್ಷಗಳ ಕಾರ್ಯಕರ್ತರಲ್ಲಿದೆ.












Click it and Unblock the Notifications