ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸೈಕಲ್ ಏರಿ‌ ಇಂಧನ ಉಳಿತಾಯದ ಜಾಗೃತಿ ಮೂಡಿಸುವ ಲೈಬ್ರರಿ ಡಿಡಿ

By ಮೈಸೂರು ಪ್ರತಿನಿಧಿ
|
Google Oneindia Kannada News

ಮೈಸೂರು,ಜು6: ಮೈಸೂರು ಜಿಲ್ಲೆ ಹಾಗೂ ನಗರ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್ ಜನರಲ್ಲಿ ಪುಸ್ತಕ ಪ್ರೇಮ ಬೆಳೆಸುವ ಉದ್ದೇಶದಿಂದ ಸೈಕಲ್ ಏರಿ ಜಾಗೃತಿ ಮೂಡಿಸುತ್ತಿದ್ದಾರೆ.

ಪುಸ್ತಕದ ಜೊತೆ ಇಂಧನ ಉಳಿತಾಯದ ಬಗ್ಗೆಯೂ ಅರಿವು ಮೂಡಿಸುತ್ತಿದ್ದಾರೆ. ಸಾಮಾನ್ಯವಾಗಿ ತಾಲೂಕು ಗ್ರಂಥಾಲಯಕ್ಕೆ ಮಂಜುನಾಥ್ ದಾಖಲೆ ಪರಿಶೀಲನೆಗೆಂದು ಪ್ರತಿ ತಿಂಗಳು ಭೇಟಿ ನೀಡುತ್ತಾರೆ. ಹೀಗೆ ಭೇಟಿ ನೀಡುವಾಗಲೆಲ್ಲಾ ಕಾರು ಬಳಸುವುದು ವಾಡಿಕೆ.

ಕಳಪೆ ಬಿತ್ತನೆ ಬೀಜ ಮಾರಿದರೆ ವಂಚನೆ ಪ್ರಕರಣ ದಾಖಲು: ಬಿ.ಸಿ. ಪಾಟೀಲ್ಕಳಪೆ ಬಿತ್ತನೆ ಬೀಜ ಮಾರಿದರೆ ವಂಚನೆ ಪ್ರಕರಣ ದಾಖಲು: ಬಿ.ಸಿ. ಪಾಟೀಲ್

ಮಂಜುನಾಥ್ ಸೈಕಲ್‌ಏರಿ‌ ಇಡೀ ಜಿಲ್ಲೆಯನ್ನು ಸುತ್ತಾಡಿ ಬಂದಿದ್ದಾರೆ. ಎರಡು ದಿನದಲ್ಲಿ 270 ಕಿ. ಮೀ. ಸೈಕಲ್ ತುಳಿದಿದ್ದಾರೆ. ಆ ಮೂಲಕ ಪುಸ್ತಕ ಹಾಗೂ ಇಂಧನ ಉಳಿತಾಯದ ಬಗ್ಗೆ ಜಾಗೃತಿ ಮೂಡಿಸುವ ವಿನೂತನ ಕೆಲಸ‌ ಮಾಡುತ್ತಿದ್ದಾರೆ.

ಜಿಲ್ಲೆಯಾದ್ಯಂತ ಸೈಕಲ್‌ನಲ್ಲಿ ಸಂಚಾರ

ಜಿಲ್ಲೆಯಾದ್ಯಂತ ಸೈಕಲ್‌ನಲ್ಲಿ ಸಂಚಾರ

ಮೊದಲ ದಿನ ಕೆ .ಆರ್. ನಗರ, ಹುಣಸೂರು, ಪಿರಿಯಾಪಟ್ಟಣ ಗ್ರಂಥಾಲಯಕ್ಕೆ ಭೇಟಿ ನೀಡಿದ ಡಿಡಿ ಬಿ. ಮಂಜುನಾಥ್, ಎಚ್.ಡಿ.ಕೋಟೆಯಲ್ಲಿ ವಾಸ್ತವ್ಯ ಹೂಡಿದ್ದಾರೆ. ನಂತರ ಎರಡನೇ ದಿನ ಸರಗೂರು, ತಿ.ನರಸೀಪುರ, ನಂಜನಗೂಡು ‌ಮೂಲಕ ಮೈಸೂರು ತಲುಪಿದ್ದಾರೆ.

ಸರ್ಕಾರಿ ವ್ಯವಸ್ಥೆ ಹಾಗೂ ಸರ್ಕಾರಿ ನೌಕರರ ಬಗ್ಗೆ ಸಾರ್ವಜನಿಕರಲ್ಲಿ ಒಂದು ರೀತಿಯ ಆಲಸ್ಯ ಭಾವನೆ. ಬಹುತೇಕ ಸರ್ಕಾರಿ ಅಧಿಕಾರಿಗಳು ಸರಿಯಾಗಿ ಕೆಲಸ ನಿರ್ವಹಿಸದಿರುವುದು, ಸಾರ್ವಜನಿಕರಿಗೆ ಸ್ಪಂದಿಸದಿರು ವುದು ಇದಕ್ಕೆ ಕಾರಣ. ಆದರೆ, ನಗರ ಗ್ರಂಥಾಲಯ ಇಲಾಖೆಯ ಉಪ ನಿರ್ದೇಶಕ ಬಿ. ಮಂಜುನಾಥ್ ಎರಡು ದಿನಗಳ ಕಾಲ ಜಿಲ್ಲೆಯಾದ್ಯಂತ ಸೈಕಲ್‌ನಲ್ಲಿ ಸಂಚರಿಸಿ ಪುಸ್ತಕ ಓದುವ ಸಂಸ್ಕೃತಿ ಬೆಳೆಸಲು ಪ್ರಯತ್ನಸಿದ್ದಾರೆ.

ಜೆಡಿಎಸ್ ತಟಸ್ಥ ಶಾಸಕ ಜಿ. ಟಿ. ದೇವೇಗೌಡರ ನಡೆ ಯಾವ ಕಡೆ?ಜೆಡಿಎಸ್ ತಟಸ್ಥ ಶಾಸಕ ಜಿ. ಟಿ. ದೇವೇಗೌಡರ ನಡೆ ಯಾವ ಕಡೆ?

ಸೈಕಲ್ ‌ನಗರಿಯೂ ಹೌದು

ಸೈಕಲ್ ‌ನಗರಿಯೂ ಹೌದು

"ಮೈಸೂರು ಅರಮನೆ ನಗರಿ ಹೇಗೋ ಸೈಕಲ್ ‌ನಗರಿ ಕೂಡ ಹೌದು. ಇತ್ತೀಚಿನ ದಿನಗಳಲ್ಲಿ ಇಂಧನದ ಬೆಲೆ ದುಬಾರಿ ಆಗಿದೆ. ಅಲ್ಲದೆ, ಸೈಕಲ್ ಪರಿಸರ ಸ್ನೇಹಿ. ಅಲ್ಲದೆ, ಪುಸ್ತಕ ಓದುವ ಸಂಸ್ಕೃತಿ ಯುವಜನರಲ್ಲಿ ಕಡಿಮೆ ಆಗುತ್ತಿದೆ. ಈ ನಿಟ್ಟಿನಲ್ಲಿ ಸೈಕಲ್ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಸೈಕಲ್ ಏರಿ ಮೈಸೂರಿನ ಎಲ್ಲಾ ತಾಲೂಕು ಗ್ರಂಥಾಲಯಕ್ಕೆ ಭೇಟಿ ನೀಡಿ ಕಚೇರಿ ಕೆಲಸ‌ಮುಗಿಸಿದ್ದೇನೆ," ಎನ್ನುತ್ತಾರೆ ಸಾರ್ವಜನಿಕ ಗ್ರಂಥಾಲಯದ ಉಪ ನಿರ್ದೇಶಕ ಬಿ. ಮಂಜುನಾಥ್.

ಗ್ರಂಥಾಲಯಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು

ಗ್ರಂಥಾಲಯಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು

ಸೈಕಲ್ ಜಾಥಾ ವೇಳೆ ಬಿ. ಮಂಜುನಾಥ್ ಅವರು ಗ್ರಂಥಾಲಯ ಇಲಾಖೆ, ಗ್ರಂಥಾಲಯಗಳು, ಶತಮಾನೋತ್ಸವ ಪೂರೈಸಿರುವ ನಗರ ಕೇಂದ್ರ ಗಂಥಾಲಯದ ಐತಿಹ್ಯ ಪರಿಚಯಿಸುವ ಕೆಲಸವನ್ನೂ ಮಾಡಿದ್ದಾರೆ. ಪೀಪಲ್ಸ್ ಪಾರ್ಕ್ ಆವರಣದ ವಿಶಾಲ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿರುವ ನೂತನ ಗ್ರಂಥಾಲಯದ ಬಗ್ಗೆಯೂ ಮಾಹಿತಿ ನೀಡಿದ್ದಾರೆ. ನಗರದ ಕೇಂದ್ರ ಗ್ರಂಥಾಲಯದ 32ಕ್ಕೂ ಹೆಚ್ಚು ಶಾಖಾ ಗ್ರಂಥಾಲಯಗಳಲ್ಲಿ 10 ಲಕ್ಷಕ್ಕೂ ಹೆಚ್ಚಿನ ಪುಸ್ತಕಗಳು, ನಗರ ಕೇಂದ್ರ ಗ್ರಂಥಾಲಯ ಒಂದರಲ್ಲಿಯೇ 1 ಲಕ್ಷ ಪುಸ್ತಕಗಳ ಇರುವ ಬಗ್ಗೆ ಮಾಹಿತಿ ನೀಡಿದ್ದಾರೆ.

ಸೈಕಲ್ ಓಡಿಸುವ ಅಭ್ಯಾಸ

ಸೈಕಲ್ ಓಡಿಸುವ ಅಭ್ಯಾಸ

2017ರಲ್ಲಿ ಮೈಸೂರಿಗೆ ಸೈಕಲ್ ಬಳಕೆ ಹೆಚ್ಚು ಮಾಡುವ ಟ್ರಿಣ್ ಟ್ರಿಣ್ ಯೋಜನೆ ಜಾರಿಗೆ ಬಂತು. ಇದರ ಉದ್ಘಾಟನೆಗೆ ಮಂಜುನಾಥ್ ಕೂಡ ಹೋಗಿದ್ದರು.‌ ಈ ವೇಳೆ‌ ಅಂದಿನ ಪಾಲಿಕೆ ಆಯುಕ್ತರಾದ ಜಗದೀಶ್ ಅವರೊಂದಿಗೆ ಮಂಜುನಾಥ್ ಸೈಕಲ್‌ಏರಿದ್ದಾರೆ.‌ ಆದರೆ ಸ್ವಲ್ಪ ದೂರ ಹೋಗುತ್ತಿದ್ದಂತೆ ತ್ರಾಸಗೊಂಡಿದ್ದಾರೆ. ಅಂದೆ ಸೈಕಲ್ ಓಡಿಸುವುದನ್ನು ಅಭ್ಯಾಸ ಶುರು ಮಾಡಿದ್ದಾರೆ. ಇದೀಗ ಸರಾಗವಾಗಿ ಮಂಜುನಾಥ್ ಅವರು ಸೈಕಲ್ ತುಳಿಯುತ್ತಾರೆ.‌ ಚಿಕ್ಕಮಗಳೂರಿನಲ್ಲಿ ನಡೆದ ಸೈಕಲ್ ರೇಸ್ ನಲ್ಲಿ ಭಾಗವಹಿಸಿದ್ದಾರೆ. ‌ಚಾರ್ಮಡಿಘಾಟ್ ಗೂ ಹೋಗಿ ಬಂದಿದ್ದಾರೆ.

English summary
Mysuru district and city public library deputy director B. Manjunath creating awareness on book love and fuel saving by riding a bicycle.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X