ಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ಆಟವಾಡಿದ ಪೋಲಿ ಉಪನ್ಯಾಸಕ

ಮೈಸೂರು, ನವೆಂಬರ್ 28: ಮ್ಯಾಟ್ರಿಮೊನಿ ವೆಬ್ ಸೈಟ್ ನಲ್ಲಿ ಪರಿಚಯವಾದ ನಗರದ ಕಾಲೇಜೊಂದರ ಉಪನ್ಯಾಸಕನೊಬ್ಬ ಯುವತಿಯನ್ನು ವಿವಾಹವಾಗುವುದಾಗಿ ನಂಬಿಸಿ ಅತ್ಯಾಚಾರ ಎಸಗಿದ್ದು, ಆ ಯುವತಿ ಈಗ ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾಳೆ.

ಉಪನ್ಯಾಸಕ ಜೆ.ಆರ್.ಸಂದೇಶ್ ಎಂಬಾತ 23 ವರ್ಷದ ಯುವತಿಗೆ ವಿವಾಹವಾಗುವುದಾಗಿ ವಂಚಿಸಿದ್ದಾನೆ. ಯುವತಿಯು ಮ್ಯಾಟ್ರಿಮೊನಿ ವೆಬ್ ಸೈಟ್ ಒಂದರಲ್ಲಿ ತನ್ನ ಪ್ರೊಫೈಲ್ ಹಾಕಿದ್ದರು. ಇದರಲ್ಲಿದ್ದ ಮೊಬೈಲ್ ನಂಬರ್ ಗೆ ಸಂದೇಶ ಕಳುಹಿಸುವ ಮೂಲಕ ತಾನು ಪ್ರತಿಷ್ಠಿತ ಕಾಲೇಜೊಂದರ ಉಪನ್ಯಾಸಕನೆಂದು ಪರಿಚಯಿಸಿಕೊಂಡಿದ್ದ ಸಂದೇಶ್.

Lecturer Fraud Through Matrimony Website In Mysuru

ಮದುವೆಯಾಗುವುದಾಗಿ ನಂಬಿಸಿ ಯುವತಿಗೆ ನಗ್ನ ಚಿತ್ರ ಕಳುಹಿಸುವಂತೆ ಒತ್ತಡ ಹಾಕಿದ್ದ. ಮಣಿದ ಯುವತಿ ಚಿತ್ರ ಕಳುಹಿಸಿದ್ದಾಳೆ. ಜೊತೆಗೆ ಆತನೊಂದಿಗೆ ಓಡಾಡಿಕೊಂಡಿದ್ದಾಳೆ. ಒಂದು ದಿನ ಕಾರಿನಲ್ಲಿ ನಿರ್ಜನ ಪ್ರದೇಶವೊಂದಕ್ಕೆ ಕರೆದುಕೊಂಡು ಹೋದ ಆತ ಅತ್ಯಾಚಾರವೆಸಗಿದ್ದಾನೆ. ವಿಷಯ ತಿಳಿದ ಯುವತಿಯ ಮನೆಯವರು ಆತನನ್ನು ಮನೆಗೆ ಕರೆಯಿಸಿ ಮನವೊಲಿಸುವ ಪ್ರಯತ್ನ ನಡೆಸಿದ್ದಾರೆ. ಆದರೆ ಉಪನ್ಯಾಸಕ ಕೊಲೆ ಮಾಡುವ ಬೆದರಿಕೆ ಹಾಕಿರುವುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.

ನಗರದ ಮಹಿಳಾ ಠಾಣೆಯಲ್ಲಿ ದೂರು ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+