ಕಾನೂನು ವಿದ್ಯಾರ್ಥಿಯ ಪ್ರಾಣಕ್ಕೆ ಎರವಾಯ್ತು ಹೊಸ ವರ್ಷಾಚರಣೆ

ಮೈಸೂರು, ಜನವರಿ 02: ಹೊಸ ವರ್ಷದ ಸಂಭ್ರಮ ಯುವಕನ ಪ್ರಾಣಕ್ಕೇ ಎರವಾದ ಘಟನೆ ಮೈಸೂರಿನಲ್ಲಿ ನಡೆದಿದೆ. ಹೊಸ ವರ್ಷಕ್ಕೆಂದು ಪಾರ್ಟಿ ಮಾಡುವ ಸಂದರ್ಭ ಯುವಕನೊಬ್ಬ ಸಾವನ್ನಪ್ಪಿದ್ದಾನೆ.

ಕಾನೂನು ವಿದ್ಯಾರ್ಥಿ, ಮೈಸೂರಿನ ಎರಡನೇ ಈದ್ಗಾ ನಿವಾಸಿ ಕಾರ್ತಿಕ್ (22) ಪ್ರಾಣ ಕಳೆದುಕೊಂಡ ಯುವಕ. ಈತ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಅಂತಿಮ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದ.

Law Student Died In New Year Party In Mysuru

ಉತ್ತಮ ಯೋಗಪಟು ಎನಿಸಿಕೊಂಡಿದ್ದ ಕಾರ್ತಿಕ್, ಹೊಸ ವರ್ಷಾಚರಣೆ ಹಿನ್ನಲೆ ಮೂವರು ಸ್ನೇಹಿತರ ಜೊತೆ ಡಿಸೆಂಬರ್ 31ರ ರಾತ್ರಿ ಪಾರ್ಟಿ ಮಾಡಲು ತೆರಳಿದ್ದ. ಈ ಸಂದರ್ಭ ಮದ್ಯ ಸೇವನೆಯಿಂದ ತೀವ್ರ ಅಸ್ವಸ್ಥನಾಗಿ ಹಠಾತ್ ಕುಸಿದುಬಿದ್ದಿದ್ದ. ಕುಡಿತದ ಮತ್ತಿನಲ್ಲಿದ್ದ ಸ್ನೇಹಿತರಿಗೆ ಈ ಸಂಗತಿ ಅರಿವಿಗೆ ಬಂದಿಲ್ಲ. ನಂತರ ಈತನನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಚಿಕಿತ್ಸೆ ಫಲಕಾರಿಯಾಗದೆ ನಿನ್ನೆ ರಾತ್ರಿ ಕಾರ್ತಿಕ್ ಸಾವನ್ನಪ್ಪಿದ್ದಾನೆ. ಮಂಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+