KSRTC: ಮೈಸೂರು ನಗರದಲ್ಲಿ ಸಂಚರಿಸಲಿವೆ 100 ಎಲೆಕ್ಟ್ರಿಕ್ ಬಸ್

ಮೈಸೂರು, ಮಾರ್ಚ್‌ 05: ಬೆಂಗಳೂರು ಮಹಾನಗರ ಸಾರಿಗೆ ಸಂಸ್ಥೆ (ಬಿಎಂಟಿಸಿ) ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರವನ್ನು ನಡೆಸುತ್ತಿದೆ. ಈಗ ರಾಜ್ಯದ ಇತರ ನಗರದಲ್ಲಿಯೂ ನಗರ ಸಾರಿಗೆಯಾಗಿ ಎಲೆಕ್ಟ್ರಿಕ್‌ ಬಸ್‌ ರಸ್ತೆಗಿಳಿಯಲಿವೆ. ಮೊದಲ ಹಂತದಲ್ಲಿ ಮೈಸೂರು ನಗರದಲ್ಲಿ 2025ರ ಅಂತ್ಯದ ವೇಳೆಗೆ 100 ಎಲೆಕ್ಟ್ರಿಕ್‌ ಬಸ್‌ಗಳು ಸಂಚಾರ ನಡೆಸಲಿವೆ ಎಂಬ ಮಾಹಿತಿ ಸಿಕ್ಕಿದೆ.

ಕೆಎಸ್ಆರ್‌ಟಿಸಿ ಮೈಸೂರು ನಗರ ಸಿಟಿ ಬಸ್‌ ಸಂಚಾರದ ನಿರ್ವಹಣೆ ನೋಡಿಕೊಳ್ಳುತ್ತದೆ. ಪ್ರಧಾನ ಮಂತ್ರಿ ಇ-ಬಸ್ ಯೋಜನೆಯಡಿ ಮೈಸೂರು ನಗರದಲ್ಲಿ ಎಲೆಕ್ಟ್ರಿಕ್‌ ಬಸ್‌ ಸಂಚಾರ ಆರಂಭಿಸಲಾಗುತ್ತದೆ. ಅಲ್ಲದೇ ಈ ಮೂಲಕ ನಗರದ ಪರಿಸರ ಕಾಪಾಡಲು ಸಹ ಕೊಡುಗೆ ನೀಡಲಾಗುತ್ತದೆ.

KSRTC Preparing To Run 100 Electric Bus In Mysuru City

ಕೇಂದ್ರ ಸರ್ಕಾರದ ಅನುದಾನದಲ್ಲಿ, ಸಾರ್ವಜನಿಕ-ಖಾಸಗಿ ಸಹಭಾಗಿತ್ವ (ಪಿಪಿಪಿ) ಮಾದರಿಯಲ್ಲಿ ಹಸಿರು ನಗರ ಚಲನಶೀಲತೆ ಯೋಜನೆ (ಜಿಯುಎಂಐ) ಅನುಷ್ಠಾನಗೊಳಿಸಲಾಗುತ್ತಿದೆ. ಈ ಯೋಜನೆಯ ಅನ್ವಯ ಮೈಸೂರು ನಗರಕ್ಕೆ ಎಲೆಕ್ಟ್ರಿಕ್ ಬಸ್‌ಗಳು ಬರಲಿವೆ.

ಎಷ್ಟು ಎಲೆಕ್ಟ್ರಿಕ್ ಬಸ್‌ಗಳ ಸಂಚಾರ?; ಮೈಸೂರು ನಗರದಲ್ಲಿ ಇ-ಬಸ್ ಸೌಲಭ್ಯವನ್ನು ಆರಂಭಿಸಲು ಅಗತ್ಯವಾದ ಮೂಲ ಸೌಕರ್ಯವನ್ನು ಸಿದ್ಧಗೊಳಿಸಲಾಗುತ್ತಿದೆ. ಕೆಎಸ್ಆರ್‌ಟಿಸಿ ಅಧಿಕಾರಿಗಳ ಮಾಹಿತಿ ಪ್ರಕಾರ 8-9 ತಿಂಗಳಿನಲ್ಲಿ ಇ-ಬಸ್‌ಗಳು ಮೈಸೂರು ನಗರಕ್ಕೆ ಬರಲಿವೆ.

ಮೊದಲ ಹಂತದಲ್ಲಿ 25 ಎಲೆಕ್ಟ್ರಿಕ್ ಬಸ್‌ಗಳು ನಗರಕ್ಕೆ ಬರಲಿವೆ. ಚಾಮುಂಡಿ ಬೆಟ್ಟ, ಇನ್ಫೋಸಿಸ್, ಜೆ. ಪಿ. ನಗರ, ಶ್ರೀರಂಗಪಟ್ಟಣ ಮಾರ್ಗದಲ್ಲಿ ಕೆಎಸ್ಆರ್‌ಟಿಸಿ ಈ ಎಲೆಕ್ಟ್ರಿಕ್ ಬಸ್‌ಗಳನ್ನು ಓಡಿಸಲು ಯೋಜನೆ ರೂಪಿಸಿದೆ.

ಕೇಂದ್ರ ಸರ್ಕಾರದ ಪಿಎಂ-ಇಬಸ್ ಸೇವಾ ಯೋಜನೆ ಪಿಪಿಪಿ ಮಾದರಿಯಲ್ಲಿ 10,000 ಇ-ಬಸ್‌ಗಳನ್ನು ನಿಯೋಜಿಸುವ ಮೂಲಕ ನಗರ ಬಸ್ ಕಾರ್ಯಾಚರಣೆಯನ್ನು ಹೆಚ್ಚಿಸುತ್ತದೆ. ಈ ಯೋಜನೆಯನ್ನು ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯವು ಪ್ರಾರಂಭಿಸಿದ್ದು, ನಿರ್ವಹಣೆಯನ್ನು ನೋಡಿಕೊಳ್ಳುತ್ತಿದೆ.

ಈ ಯೋಜನೆಯಡಿಯಲ್ಲಿ ವಿದ್ಯುತ್ ಮೂಲ ಸೌಕರ್ಯಗಳ ಅಭಿವೃದ್ಧಿಗೆ ಶೇ 100ರಷ್ಟು ನೆರವನ್ನು ಕೇಂದ್ರ ಸರ್ಕಾರ ನೀಡಲಿದೆ. ಡಿಪೋ ಮೂಲ ಸೌಕರ್ಯಕ್ಕಾಗಿ, ರಾಜ್ಯಗಳ ನಗರಗಳಿಗೆ ಶೇ 60, ಗುಡ್ಡಗಾಡು ರಾಜ್ಯಗಳು/ ಈಶಾನ್ಯ ರಾಜ್ಯಗಳು/ ಕೇಂದ್ರಾಡಳಿತ ಪ್ರದೇಶಗಳ ರಾಜಧಾನಿ ನಗರಗಳಿಗೆ ಶೇ 90ರಷ್ಟು ನೆರವು ನೀಡಲಾಗುತ್ತದೆ.

ಇದಲ್ಲದೆ, ಇ-ಬಸ್‌ಗಳ ಕಾರ್ಯಾಚರಣೆಗೆ ಪ್ರತಿ ಕಿಲೋ ಮೀಟರ್ ಆಧಾರದ ಮೇಲೆ 10 ವರ್ಷಗಳವರೆಗೆ ಅಥವಾ ಮಾರ್ಚ್ 2037ರಲ್ಲಿ ಯಾವುದು ಮೊದಲೋ ಅದಕ್ಕೆ ಬೆಂಬಲವನ್ನು ಒದಗಿಸಲಾಗುತ್ತದೆ.

ಸ್ಟ್ಯಾಂಡರ್ಡ್ (12 ಮೀ), ಮಿಡಿ (9 ಮೀ) ಮತ್ತು ಮಿನಿ (7 ಮೀ) ಬಸ್‌ಗಳಿಗೆ ಕ್ರಮವಾಗಿ ಪ್ರತಿ ಕಿಮೀಗೆ 24, 22, 20 ರೂ.ಗಳ ಕಾರ್ಯಾಚರಣೆ ಬೆಂಬಲವನ್ನು ಕೇಂದ್ರ ಸರ್ಕಾರದ ಮೂಲಕ ಒದಗಿಸಲಾಗುತ್ತದೆ.

ಈ ಯೋಜನೆಯಡಿ ರಾಜ್ಯಗಳು/ ನಗರಗಳು ಬಸ್ ಸೇವೆಗಳನ್ನು ನಡೆಸಲು ಮತ್ತು ಬಸ್ ನಿರ್ವಾಹಕರಿಗೆ ವೇತನ ಪಾವತಿಗಳನ್ನು ಮಾಡಲು ಜವಾಬ್ದಾರರು. ಯೋಜನೆಯಲ್ಲಿ ನಿರ್ದಿಷ್ಟಪಡಿಸಿದ ಮಟ್ಟಿಗೆ ಸಬ್ಸಿಡಿ ನೀಡುವ ಮೂಲಕ ಕೇಂದ್ರ ಸರ್ಕಾರವು ಈ ಎಲೆಕ್ಟ್ರಿಕ್ ಬಸ್‌ಗಳ ಕಾರ್ಯಾಚರಣೆಗೆ ಬೆಂಬಲವನ್ನು ನೀಡುತ್ತದೆ.

ಬಿಎಂಟಿಸಿ ವಿವಿಧ ಕಂಪನಿಗಳಿಂದ ಗುತ್ತಿಗೆ ಆಧಾರದ ಮೇಲೆ ಎಲೆಕ್ಟ್ರಿಕ್ ಬಸ್‌ಗಳನ್ನು ಪಡೆದುಕೊಂಡು ಬೆಂಗಳೂರು ನಗರದಲ್ಲಿ ಅವುಗಳನ್ನು ಓಡಿಸುತ್ತಿದೆ. ಈ ಬಸ್‌ಗಳಿಗೆ ಡ್ರೈವರ್‌ಗಳನ್ನು ಬಸ್ ನೀಡುವ ಕಂಪನಿಗಳೇ ನೀಡಬೇಕಿದೆ. ನಿರ್ವಾಹಕರನ್ನು ಮಾತ್ರ ಬಿಎಂಟಿಸಿಯಿಂದ ನೇಮಕ ಮಾಡಲಾಗುತ್ತದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+