KRS Dam Water Level: ಕೆಆರ್‌ಎಸ್ ಆಣೆಕಟ್ಟು ಭರ್ತಿ, ಇಂದಿನ ನೀರಿನ ಮಟ್ಟ ಒಳಹರಿವು ಮಾಹಿತಿ
ಮೈಸೂರು, ಜೂನ್ 19: ರಾಜ್ಯದಲ್ಲಿ ಮುಂಗಾರು ಮಳೆ ಮತ್ತೆ ಚುರುಕು ಪಡೆದಿದ್ದು, ಮುಂದಿನ ಒಂದು ವಾರ ಅಬ್ಬರಿಸುವ ಮುನ್ಸೂಚನೆ ನೀಡಿದೆ. ಈಗಾಗಲೇ ಬಂದ ದಾಖಲಾದ ಮಳೆಯ ಕಾರಣಕ್ಕೆ ಕೃಷ್ಣ ರಾಜ ಸಾಗರ (KRS) ಜಲಾಶಯದಲ್ಲಿ ಒಳಹರಿವಿನ ಪ್ರಮಾಣ ನಿತ್ಯವು ಏರಿಕೆ ಆಗುತ್ತಲೇ ಇದೆ.
ಕಾವೇರಿ ಮತ್ತು ಕೆಆರ್‌ಎಸ್ ಜಲಾನಯನ ಪ್ರದೇಶ ಹಾಗೂ ಸುತ್ತಮುತ್ತಲಿನ ಭಾಗಗಳಲ್ಲಿ ಸುರಿದ ಭಾರೀ ಮಳೆಗೆ ನದಿಗಳು ಮೈದುಂಬಿ ಹರಿಯುತ್ತಿವೆ. ಪರಿಣಾಮಾ ಕೆಆರ್‌ಎಸ್ ಸೇರಿದಂತೆ ವಿವಿಧ ಆಣೆಕಟ್ಟುಗಳು ಭರ್ತಿಯಾಗಿವೆ. ಒಳಹರಿವಿನ ಜೊತೆಗೆ ಹೊರಹರಿವಿನ ಪ್ರಮಾಣ, ನೀರಿನ ಸಂಗ್ರಹದ ಮಟ್ಟ ಏರಿಕೆ ಆಗಿದೆ.

ಇಂದು ಜೂನ್ 19ರಂದು ಬುಧವಾರ ಕೃಷ್ಣ ರಾಜ ಸಾಗರದಲ್ಲಿ ನೀರನ ಮಟ್ಟ ನೋಡುವುದಾದರೆ, ಒಳಹರಿವು 1209 ಕ್ಯೂಸೆಕ್ ಹೆಚ್ಚಾಗಿದೆ. ಒಟ್ಟು ಸಾಮರ್ಥ್ಯದಲ್ಲಿ 49.452 ಟಿಎಂಸಿ ಇದೆ. ಇಂದಿನ ನೀರಿನ ಸಂಗ್ರಹಣೆ ಶೇಕಡಾ 29.10ರಷ್ಟಿದೆ.
ಇನ್ನೂ ಕೆಆರ್‌ಎಸ್ ಜಲಾಶಯದಲ್ಲಿ ಹೊರಹರಿವು ಇಂದು ತುಸು ಏರಿಕೆ ಆಗಿದೆ. ಒಟ್ಟು 466 ಕ್ಯೂಸೆಕ್ ನೀರು ಹೊರ ಬೀಡಲಾಗಿದೆ. ಈ ಪೈಕಿ ಕಾಲುವೆಗೆ 50 ಕ್ಯೂಸೆಕ್, ಕಾವೇರಿ ನದಿಗೆ 416 ಕ್ಯೂಸೆಕ್ ನೀರನ್ನು ಹೊರ ಬಿಡಲಾಗಿದೆ.
ವಿವಿಧ ಆಣೆಕಟ್ಟುಗಳ ಮಾಹಿತಿ
ಇದೇ ರೀತಿ ಕಬಿನಿ, ಆಲಮಟ್ಟಿ, ಹಾರಂಗಿ, ಭದ್ರಾ ಆಣೆಕಟ್ಟು ಸೇರಿದಂತೆ ಇನ್ನಿತರ ಜಲಾಶಯಗಳಲ್ಲಿ ಒಳಹರಿವು ಹೆಚ್ಚಾಗಿದೆ. ಈ ಪೈಕಿ ಹೇಮಾವತಿ 622 ಕ್ಯೂಸೆಕ್ ಒಳಹರಿವು, ಕಬಿನಿ 594 ಕ್ಯೂಸೆಕ್ ಒಳಹರಿವು, ಹಾರಂಗಿ 319 ಕ್ಯೂಸೆಕ್ ಒಳಹರಿವು ಏರಿಕೆ ಆಗಿದೆ ಎಂದು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರ (KSNDMC) ಮಾಹಿತಿ ನೀಡಿದೆ.
ಮುಂದಿನ ಐದು ಭಾರೀ ಮಳೆ ಎಚ್ಚರಿಕೆ
ಮುಂದಿನ ಐದು ದಿನ ರಾಜ್ಯದಲ್ಲಿ ಅತ್ಯಧಿಕ ಮಳೆ ಆಗಲಿದೆ. ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ ಹಗುರದಿಂದ ಸಾಧಾರಣ, ಇನ್ನೂ ಹಲವಡೆ ಭಾರೀ ಮಳೆ ಆಗಲಿದೆ. ಜೂನ್ 24ರಂದು ಎಂಟು ಜಿಲ್ಲೆಗಳಿಗೆ ಅತ್ಯಧಿಕ ಮಳೆ ಆಗುವ ಕಾರಣ 'ರೆಡ್ ಅಲರ್ಟ್' ಘೋಷಿಸಲಾಗಿದೆ.












Click it and Unblock the Notifications