ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜ್ಯದಲ್ಲಿ ಶೇ 80ರಷ್ಟು ಬ್ರಾಹ್ಮಣರ ಮತ ಮೈತ್ರಿ ಅಭ್ಯರ್ಥಿಗಳಿಗೆ: ದಿನೇಶ್ ಗುಂಡೂರಾವ್

|
Google Oneindia Kannada News

Recommended Video

Lok Sabha Elections 2019:80% ಅಷ್ಟು ಜನರು ಮೈತ್ರಿ ಅಭ್ಯರ್ಥಿಗಳಿಗೆ ಸಾಥ್ ಕೊಡ್ತಾರೆ ಎಂದ ದಿನೇಶ್ ಗುಂಡೂರಾವ್

ಮೈಸೂರು, ಏಪ್ರಿಲ್ 17: ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಶೇ 80ರಷ್ಟು ಬ್ರಾಹ್ಮಣರ ಮತಗಳು ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಅಭ್ಯರ್ಥಿಗಳಿಗೇ ಸಿಗಲಿದೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಭರವಸೆ ವ್ಯಕ್ತಪಡಿಸಿದ್ದಾರೆ.

ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ? ಬಿಜೆಪಿ, ಕಾಂಗ್ರೆಸ್, ಸಿಪಿಎಂ ಪ್ರಣಾಳಿಕೆಯ ತುಲನೆ. ಯಾವ ಪಕ್ಷದ ಪ್ರಣಾಳಿಕೆ ಉತ್ತಮವಾಗಿದೆ?

ಮೈಸೂರಿನಲ್ಲಿ ಬುಧವಾರ ಚುನಾವಣಾ ಪ್ರಚಾರ ನಡೆಸಿದ ಅವರು, ಬ್ರಾಹ್ಮಣ ಸಮುದಾಯದ ಮುಖಂಡರೊಂದಿಗೆ ಸಭೆಯಲ್ಲಿ ಪಾಲ್ಗೊಂಡರು.

ಲೋಕಸಭಾ ಚುನಾವಣೆ 2019 : ವಿಶೇಷ ಪುಟ | ಗ್ಯಾಲರಿ

'ಸರ್ವೇ ಜನಾಃ ಸುಖಿನೋ ಭವಂತು' ಎನ್ನುವುದನ್ನು ಬ್ರಾಹ್ಮಣರು ಬಾಯಿ ಮಾತಿಗೆ ಸೀಮಿತವಾಗಿಸಬಾರದು. ಎಲ್ಲರ ಒಳಿತನ್ನು ಬಯಸುವ ಕಾಂಗ್ರೆಸ್ ಅಭ್ಯರ್ಥಿಗೆ ಮತ ಹಾಕಬೇಕು. ಈ ಮೂಲಕ ವೈಚಾರಿಕತೆ ಮತ್ತು ಸೃಜನಶೀಲತೆ ಪ್ರದರ್ಶಿಸಬೇಕು ಎಂದು ಕೋರಿದರು.

KPCC President Dinesh Gundu Rao 80 per cent of brahmins in the state will vote congress-jds

ಬ್ರಾಹ್ಮಣ ಸಮುದಾಯದ ಅಭಿವೃದ್ಧಿಗಾಗಿ ರಾಜ್ಯ ಸರ್ಕಾರ ಅನೇಕ ಯೋಜನೆಗಳನ್ನು ರೂಪಿಸಿದೆ. ಈ ಬಾರಿ ಬ್ರಾಹ್ಮಣ ಸಮುದಾಯದವರು ಕಾಂಗ್ರೆಸ್-ಜೆಡಿಎಸ್ ಅಭ್ಯರ್ಥಿಗಳಿಗೆ ಮತ ಹಾಕಲಿದ್ದಾರೆ. ತಮಗೆ ಮತಹಾಕುವಂತೆ ಬಿಜೆಪಿ ಸಮುದಾಯವನ್ನು ಓಲೈಸಲು ಪ್ರಯತ್ನಿಸುತ್ತಿದೆ. ಆದರೆ ಅದು ನಿಜವಾಗುವುದಿಲ್ಲ ಎಂದು ದಿನೇಶ್ ಹೇಳಿದರು.

ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ ಹರಿಪ್ರಸಾದ್ ಗೆ ಬೆಂಬಲ ವದಂತಿ: ಸ್ಪಷ್ಟನೆ ನೀಡಿದ ಬ್ರಾಹ್ಮಣ ಮಹಾಸಭಾ

ಮೊದಲ ಹಂತದ ಚುನಾವಣೆಯಲ್ಲಿ 14 ಕ್ಷೇತ್ರಗಳಲ್ಲಿ 12ರಲ್ಲಿ ನಾವೇ ಗೆಲುವು ಸಾಧಿಸುತ್ತೇವೆ. ಚಾಮರಾಜನಗರದಲ್ಲಿ ಆರ್. ಧ್ರುವನಾರಾಯಣ್ ಮತ್ತು ಮೈಸೂರು-ಕೊಡಗು ಕ್ಷೇತ್ರದಲ್ಲಿ ಸಿ.ಎಚ್. ವಿಜಯಶಂಕರ್ ಖಚಿತವಾಗಿ ಗೆಲ್ಲುತ್ತಾರೆ ಎಂದು ಭರವಸೆ ವ್ಯಕ್ತಪಡಿಸಿದರು.

ಬ್ರಾಹ್ಮಣರಿಗೆ ಕಾಂಗ್ರೆಸ್ ಆದ್ಯತೆ ನೀಡಿದೆ. ಬ್ರಾಹ್ಮಣರ ಅಭಿವೃದ್ಧಿ ನಿಗಮ ಸ್ಥಾಪಿಸಿ ಈಗಾಗಲೇ 25 ಕೋಟಿ ರೂ ನೀಡಿದೆ. ಅದನ್ನು 100 ಕೋಟಿಗೆ ಹೆಚ್ಚಿಸಲಾಗುತ್ತಿದೆ ಎಂದರು.

ಮಂಡ್ಯ ಬಂಡಾಯ ನಾಯಕರಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ ಮಂಡ್ಯ ಬಂಡಾಯ ನಾಯಕರಿಗೆ ದಿನೇಶ್ ಗುಂಡೂರಾವ್ ಎಚ್ಚರಿಕೆ

ವಿಜಯಶಂಕರ್ ಜಾತಿಯಲ್ಲಿ ಬ್ರಾಹ್ಮಣ ಅಲ್ಲದೆ ಇದ್ದರೂ ಅವರು ನಡತೆಯಲ್ಲಿ ಬ್ರಾಹ್ಮಣರು. ಅವರಲ್ಲಿ ಭಯ, ಭಕ್ತಿ, ಸರಳ ವ್ಯಕ್ತಿತ್ವ, ಸೌಮ್ಯ ಸ್ವಭಾವ ಇವೆಲ್ಲವೂ ಇವೆ. ಅವರು ಆಡಂಬರ ಮಾಡುವುದಿಲ್ಲ. ಇದಕ್ಕೆ ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಸಂಪೂರ್ಣ ವಿರುದ್ಧವಾಗಿದ್ದಾರೆ. ಅವರ ಜಾಯಮಾನದಲ್ಲೇ ಘನತೆ ಮತ್ತು ಗೌರವದಿಂದ ನಡೆದುಕೊಳ್ಳುವುದು ಇಲ್ಲ ಎಂದು ಟೀಕಿಸಿದರು.

English summary
KPCC President Dinesh Gundu Rao expressed confidence that 80 per cent of Brahmins in the state will vote for Congress-JDS candidates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X