ತ್ರಿಷಿಕಾ ಹುಟ್ಟುಹಬ್ಬ, ಟ್ವಿಟ್ಟರ್‌ನಲ್ಲಿ ಶುಭಾಶಯ ಕೋರಿದ ಯದುವೀರ್

ಮೈಸೂರು, ನವೆಂಬರ್ 3 : ತ್ರಿಷಿಕಾ ಯದುವೀರ್ ಒಡೆಯರ್ ರವರ ಹುಟ್ಟುಹಬ್ಬದ ಅಂಗವಾಗಿ ಯದುವೀರ್ ಒಡೆಯರ್ ತಮ್ಮ ಮುದ್ದಿನ ಮಡದಿಗೆ ಶುಭಾಶಯ ಕೋರಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ರವರು ತಮ್ಮ ಪತ್ನಿ ತ್ರಿಶಿಕಾ ಮತ್ತು ಮಗ ಆದ್ಯವೀರ್ ರ ಫೋಟೋ ಅಪ್ಲೋಡ್ ಮಾಡಿ ಶುಭಾಶಯ ಕೋರಿದ್ದಾರೆ. ಪತ್ನಿ ಮತ್ತು ಆದ್ಯವೀರ್ ಮಾತ್ರವಲ್ಲದೇ ಫೋಟೋದಲ್ಲಿ ಆನೆ ಅರ್ಜುನ ಕೂಡ ಇರುವುದು ಮತ್ತೊಂದು ವಿಶೇಷ.

ತಮ್ಮ ಫೇಸ್ ಬುಕ್ ಹಾಗೂ ಇನ್ಸ್ಟಾಗ್ರಾಂನ ವಾಲ್ ನಲ್ಲಿ ರಾಜ ಯದುವೀರ್ ಅವರು, 'ನನ್ನ ಧರ್ಮಪತ್ನಿಯಾದ, ಸನ್ನಿಧಾನ ಸವಾರಿಯವರು ಮಹಾರಾಣಿ ಶ್ರೀಮತಿ ತ್ರಿಶಿಕಾ ಕುಮಾರಿ ಒಡೆಯರ್ ಅವರ ವರ್ಧಂತಿಯಂದು ಶುಭ ಕೋರುತ್ತೇನೆ.

King Yaduveer wishes birthday to his wife Trishika

ಜಗನ್ಮಾತೆಯಾದ ಶ್ರೀ ಚಾಮುಂಡೇಶ್ವರಿ ದೇವಿಯು ಅವರಿಗೆ ಸಮಸ್ತ ಸನ್ಮಂಗಳವನ್ನುಂಟು ಮಾಡಲಿ ಎಂದು ಪ್ರಾರ್ಥಿಸುತ್ತೇನೆ' ಎಂದು ಬರೆದುಕೊಂಡಿದ್ದಾರೆ.

ಅಂಬಾರಿ ಹೊತ್ತ ಅರ್ಜುನ ಆನೆಯ ಮಂದೆ ನಿಂತುಕೊಂಡಿರುವ ರಾಣಿ ತ್ರಿಶಿಕಾ ಹಾಗೂ ಯುವ ರಾಜ ಆದ್ಯವೀರ್ ಇಬ್ಬರು ಸಂತಸದಿಂದ ಫೋಟೋಗೆ ಪೋಸ್ ನೀಡಿದ್ದಾರೆ. ಹಾಗೆಯೇ ಅವರಿಬ್ಬರು ಒಂದೇ ಬಣ್ಣದ ಬಟ್ಟೆಯನ್ನು ಸಹ ಧರಿಸಿರುವುದು ಸಹ ವಿಶೇಷ. ಇದು ಆದ್ಯವೀರ್ ಜನನದ ಬಳಿಕ ತ್ರಿಷಿಕಾರವರು ಆಚರಿಸಿಕೊಳ್ಳುತ್ತಿರುವ ಮೊದಲ ಹುಟ್ಟುಹಬ್ಬವಾಗಿದೆ. ಇದರಿಂದ ಅರಮನೆಯಲ್ಲಿ ಸಂತಸ ಮನೆ ಮಾಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+