ಮೈಸೂರು ಜಿಲ್ಲೆಯಲ್ಲಿ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಲಿರುವ ಅಭ್ಯರ್ಥಿಗಳು, ಅವರ ವಿವರ
ಮೈಸೂರು, ಏಪ್ರಿಲ್ 13: ಕರ್ನಾಟಕ ವಿಧಾನಸಭಾ ಚುನಾವಣೆಗೆ ಮೇ 10 ರಂದು ಮತದಾನ ನಡೆಯಲಿದೆ. ಈ ಹಿನ್ನೆಲೆಯಲ್ಲಿ ಮೈಸೂರು ಜಿಲ್ಲೆಯಲ್ಲಿ ಬಹುತೇಕ ಪ್ರಬಲ ಪಕ್ಷಗಳಿಂದ ಅಭ್ಯರ್ಥಿಗಳು ಕಣಕ್ಕಿಳಿದಿದ್ದಾರೆ. ಹೀಗಾಗಿ ಯಾವ ಯಾವ ಪಕ್ಷದಿಂದ ಯಾರೆಲ್ಲಾ ಅಭ್ಯರ್ಥಿಗಳು ಸ್ಪರ್ಧೆ ಮಾಡುತ್ತಿದ್ದಾರೆ ಎಂದು ನೋಡೋಣ.
ಪ್ರಮುಖ ರಾಜಕೀಯ ಪಕ್ಷಗಳಾದ ಬಿಜೆಪಿಯು ಒಟ್ಟು 198 ಕ್ಷೇತ್ರದ ಟಿಕೆಟ್ ಫೈನಲ್ ಮಾಡಿದೆ. ಇನ್ನೂ ಕಾಂಗ್ರೆಸ್ 166 ಕ್ಷೇತ್ರಗಳಿಗೆ ಟಿಕೆಟ್ ಹಂಚಿಕೆ ಮಾಡಿದೆ. ಜೆಡಿಎಸ್ ಮೊದಲ ಹಂತದಲ್ಲಿ 92 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಅಂತಿಮಗೊಳಿಸಿದೆ. ಮೈಸೂರು ಜಿಲ್ಲಾ ವ್ಯಾಪ್ತಿಯಲ್ಲಿ 11 ವಿಧಾನಸಭಾ ಕ್ಷೇತ್ರಗಳು ಬರುತ್ತವೆ. ಅವುಗಳ ವಿವರ ಇಲ್ಲಿದೆ.

1. ವರುಣಾ ವಿಧಾನಸಭಾ ಕ್ಷೇತ್ರ
ಮೊದಲಿಗೆ ಮೈಸೂರು ಜಿಲ್ಲೆಯಲ್ಲಿ ಹೈವೋಲ್ಟೇಜ್ ಕ್ಷೇತ್ರವಾಗಿರುವ ವರುಣಾದಲ್ಲಿ ಕಾಂಗ್ರೆಸ್‌ನಿಂದ ಮಾಜಿ ಸಿಎಂ ಸಿದ್ದರಾಮಯ್ಯ ಸ್ಪರ್ಧೆ ಮಾಡುತ್ತಿದ್ದಾರೆ, ಅವರ ವಿರುದ್ಧ ಬಿಜೆಪಿಯಿಂದ ಸಚಿವ ವಿ ಸೋಮಣ್ಣ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ವರುಣಾದಲ್ಲಿ ಜೆಡಿಎಸ್‌ನಿಂದ ಅಭಿಷೇಕ್ ಅವರನ್ನು ಕಣಕ್ಕೆ ಇಳಿಸಲಾಗಿದೆ. ಕಾಂಗ್ರೆಸ್‌ನ ಸಾಂಪ್ರದಾಯಿಕ ಕ್ಷೇತ್ರವಾಗಿರುವ ವರುಣಾದಲ್ಲಿ ಸಿದ್ದರಾಮಯ್ಯ ಅವರು ಗೆಲ್ಲುವುದು ನಿಶ್ಚಳವಾಗಿದೆ.
2. ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರ
ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಸಿದ್ದೇಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಇಲ್ಲಿ ಜೆಡಿಎಸ್‌ನಿಂದ ಜಟಿ ದೇವೇಗೌಡ ಕಣದಲ್ಲಿದ್ದಾರೆ. ಹಾಗೆಯೇ ಇಲ್ಲಿ ಬಿಜೆಪಿಯಿಂದ ಕವೀಶ್ ಗೌಡ ಅವರಿಗೆ ಟಿಕೆಟ್ ನೀಡಲಾಗಿದೆ. ಹಾಲಿ ಇಲ್ಲಿ ಜೆಡಿಎಸ್‌ನ ಜಿಟಿ ದೇವೇಗೌಡ ಅವರು ಇಲ್ಲಿ ಪ್ರಬಲ ಅಭ್ಯರ್ಥಿಯಾಗಿದ್ದು, ಅವರ ವಿರುದ್ಧ ಕಾಂಗ್ರೆಸ್‌ನ ಕವೀಶ್ ಗೌಡ ಅವರು ಎದುರಾಳಿಯಾಗಿದ್ದಾರೆ.
3. ಹುಣಸೂರು ವಿಧಾನಸಭಾ ಕ್ಷೇತ್ರ
ಹುಣಸೂರು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ಎಚ್‌ಪಿ ಮಂಜುನಾಥ್ ಕಣಕ್ಕೆ ಇಳಿದಿದ್ದಾರೆ. ಇಲ್ಲಿ ಹಾಲಿ ಶಾಸಕರಾಗಿ ಸದ್ಯ ಎಚ್‌ಪಿ ಮಂಜುನಾಥ್ ಅವರು 2018ರಲ್ಲಿ ಆಯ್ಕೆಯಾಗಿದ್ದಾರೆ. ಇವರ ವಿರುದ್ಧ ಬಿಜೆಪಿಯಿಂದ ದೇವರಹಳ್ಳಿ ಸೋಮಶೇಖರ್ ಕಣದಲ್ಲಿದ್ದಾರೆ. ಹಾಗೇಯೆ ಜೆಡಿಎಸ್‌ನಿಂದ ಜಿಟಿ ದೇವೇಗೌಡ ಅವರ ಮಗ ಹರೀಶ್ ಗೌಡ ಸ್ಪರ್ಧೆ ಮಾಡುತ್ತಿದ್ದಾರೆ.
4. ನರಸೀಪುರ ವಿಧಾನಸಭಾ ಕ್ಷೇತ್ರ
ನರಸೀಪುರ ವಿಧಾನಸಭಾ ಕ್ಷೇತ್ರದಲ್ಲಿ ಈ ವಿಧಾನಸಭಾ ಚುನಾವಣೆಗೆ ಈ ಬಾರಿ ಜೆಡಿಎಸ್‌ನಿಂದ ಹಾಲಿ ಶಾಸಕರಾಗಿರುವ ಅಶ್ವಿನಿ ಕುಮಾರ್ ಅವರಿಗೆ ನೀಡಲಾಗಿದೆ. ಕಾಂಗ್ರೆಸ್‌ನಿಂದ ಮಾಜಿ ಸಚಿವ ಎಚ್‌ಸಿ ಮಹಾದೇವಪ್ಪ ಸ್ಪರ್ಧೆಗೆ ಇಳಿದಿದ್ದಾರೆ. ಹಾಗೆಯೇ ಇಲ್ಲಿ ಬಿಜೆಪಿಯಿಂದ ಡಾ. ರೇವಣ್ಣ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮಹಾದೇವಪ್ಪ ಅವರನ್ನು ಅಶ್ವಿನ್ ಕುಮಾರ್ ಸೋಲಿಸಿದ್ದರು. ಆದರೆ ಹೊಸ ಹುರುಪಿನಲ್ಲಿ ಮಹಾದೇವಪ್ಪ ಇದ್ದಾರೆ.
5. ನಂಜನಗೂಡು ವಿಧಾನಸಭಾ ಕ್ಷೇತ್ರ
ನಂಜನಗೂಡು ವಿಧಾನಸಭಾ ಕ್ಷೇತ್ರದಲ್ಲಿ ಈ ಬಾರಿ ಕಾಂಗ್ರೆಸ್‌ನಿಂದ ದರ್ಶನ್ ಧ್ರುವನಾರಾಯಣ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇಲ್ಲಿ ಹಾಲಿ ಶಾಸಕರಾಗಿರುವ
ರ್ಷವರ್ಧನ್ ಅವರನ್ನು ಬಿಜೆಪಿ ಕಣಕ್ಕೆ ಇಳಿಸಿದೆ. ಸದ್ಯ ಇಲ್ಲಿ ಜೆಡಿಎಸ್‌ನಿಂದ ಅಭ್ಯರ್ಥಿಯನ್ನು ಇನ್ನು ಘೋಷಣೆ ಮಾಡಿಲ್ಲ. ಸದ್ಯ ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇದೆ. ಅಲ್ಲದೆ ಕೆಪಿಸಿಸಿ ಕಾರ್ಯಾಧ್ಯಕ್ಷರಾಗಿದ್ದ ಆರ್ ಧ್ರುವನಾರಾಯಣ್ ಅವರು ಅಕಾಲಿಕ ಮರಣ ಹೊಂದಿದ್ದು, ಅವರ ಮಗ ದರ್ಶನ್ ಧ್ರುವನಾರಾಯಣ್ ಗೆಲ್ಲುವ ಸಾಧ್ಯತೆ ಇದೆ.
6. ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರ
ಪಿರಿಯಾಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಈ ಭಾರಿ ಬಿಜೆಪಿಯಿಂದ ಸಿಎಚ್ ವಿಜಯಶಂಕರ್ ಅವರು ಕಣದಲ್ಲಿದ್ದರೆ ಕಾಂಗ್ರೆಸ್‌ನಿಂದ ಕೆ ವೆಂಕಟೇಶ್ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಜೆಡಿಎಸ್‌ನಿಂದ ಕೆ ಮಹಾದೇವ್ ಅವರು ಕಣಕ್ಕಿಳಿದಿದ್ದಾರೆ. ಎಎಪಿಯಿಂದ ರಾಜಶೇಖರ್ ದೊಡ್ಡಣ್ಣ ಕಣಕ್ಕೆ ಇಳಿದಿದ್ದಾರೆ.
7. ಕೆಆರ್ ನಗರ ವಿಧಾನಸಭಾ ಕ್ಷೇತ್ರ
ಕೆಆರ್ ನಗರ ವಿಧಾನಸಭಾ ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ನಿರೀಕ್ಷೆಯಂತೆ ಸಾರಾ ಮಹೇಶ್ ಟಿಕೆಟ್ ಪಡೆದಿದ್ದಾರೆ. ಇಲ್ಲಿ ಕಾಂಗ್ರೆಸ್‌ನಿಂದ ಡಿ ರವಿಶಂಕರ್ ಅದೃಷ್ಟ ಪರೀಕ್ಷೆ ಮಾಡಲಿದ್ದಾರೆ. ಇನ್ನು ಬಿಜೆಪಿಯಿಂದ ವೆಂಕಟೇಶ್ ಹೊಸಳ್ಳಿ ಅವರು ಸ್ಪರ್ಧೆ ಮಾಡುತ್ತಿದ್ದಾರೆ. ಜೆಡಿಎಸ್ ಭದ್ರಕೋಟೆಯಾಗಿರುವ ಕೆಆರ್ ನಗರದಲ್ಲಿ ಈ ಬಾರಿಯೂ ಸಾರಾ ಮಹೇಶ್ ಗೆಲ್ಲಲಿದ್ದಾರೆ ಎಂದು ಸಮೀಕ್ಷೆಗಳು ತಿಳಿಸಿವೆ.
8. ಎಚ್‌ಡಿ ಕೋಟೆ ವಿಧಾನಸಭಾ ಕ್ಷೇತ್ರ
ಎಚ್‌ಡಿ ಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಹಾಲಿ ಶಾಸಕ ಅನಿಲ್ ಚಿಕ್ಕಮಾಧು ಅವರು ಕಣಕ್ಕೆ ಇಳಿದಿದ್ದಾರೆ. ಬಿಜೆಪಿಯಿಂದ ಕೃಷ್ಣನಾಯಕ ಅವರು ಸ್ಪರ್ಧೆ ಮಾಡಿದರೆ ಜೆಡಿಎಸ್‌ನಿಂದ ಇನ್ನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಮಾಜಿ ಶಾಸಕರಾಗಿದ್ದ ಚಿಕ್ಕಮಾಧು ಅವರ ಪ್ರಭಾವ ಇಲ್ಲಿರುವುದರಿಂದ ಅವರ ಮಗ ಅನಿಲ್ ಚಿಕ್ಕಮಾಧು ಮತ್ತೆ ಗೆಲ್ಲುವ ವಿಶ್ವಾಸ ಹೊಂದಿದ್ದಾರೆ.
9. ಕೃಷ್ಣರಾಜ ವಿಧಾನಸಭಾ ಕ್ಷೇತ್ರ
ಕೃಷ್ಣರಾಜ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್‌ನಿಂದ ಇನ್ನು ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಬಿಜೆಪಿಯೂ ಕೂಡ ಇನ್ನು ಇಲ್ಲಿಗೆ ಅಭ್ಯರ್ಥಿಯನ್ನು ಘೋಷಣೆ ಮಾಡಿಲ್ಲ. ಕ್ಷೇತ್ರದಲ್ಲಿ ಜೆಡಿಎಸ್‌ನಿಂದ ಮಾತ್ರ ಮಲ್ಲೇಶ್ ಅವರಿಗೆ ಟಿಕೆಟ್ ನೀಡಲಾಗಿದೆ.
10. ನರಸಿಂಹರಾಜ ವಿಧಾನಸಭಾ ಕ್ಷೇತ್ರ
ನರಸಿಂಹರಾಜ ವಿಧಾನಸಭಾ ಕ್ಷೇತ್ರದಲ್ಲಿ ಹಾಲಿ ಶಾಸಕ ತನ್ವೀರ್ ಸೇಠ್ ಅವರಿಗೆ ಟಿಕೆಟ್ ನೀಡಲಾಗಿದೆ. ಬಿಜೆಪಿಯಿಂದ ಸಂದೇಶ್ ಸ್ವಾಮಿ ಟಿಕೆಟ್ ಪಡೆದು ಕಣಕ್ಕೆ ಇಳಿದಿದ್ದಾರೆ. ಜೆಡಿಎಸ್‌ನಿಂದ ಇಲ್ಲಿದೆ ಅಭ್ಯರ್ಥಿ ಹಾಕಿಲ್ಲ,
11. ಚಾಮರಾಜ ವಿಧಾನಸಭಾ ಕ್ಷೇತ್ರ
ಚಾಮರಾಜ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯಿಂದ ಹಾಲಿ ಶಾಸಕರಾಗಿರುವ ಎಲ್ ನಾಗೇಂದ್ರ ಅವರಿಗೆ ಟಿಕೆಟ್ ನೀಡಲಾಗಿದೆ. ಕಾಂಗ್ರೆಸ್‌ನಿಂದ ಇನ್ನು ಅಭ್ಯರ್ಥಿ ಘೋಷಣೆ ಮಾಡಿಲ್ಲ. ಜೆಡಿಎಸ್‌ನಿಂದಲೂ ಕ್ಷೇತ್ರಕ್ಕೆ ಅಭ್ಯರ್ಥಿ ಘೋಷಣೆ ಮಾಡಿಲ್ಲ.
| ಕ್ಷೇತ್ರ | ಬಿಜೆಪಿ | ಕಾಂಗ್ರೆಸ್ | ಜೆಡಿಎಸ್ | ಎಎಎಪಿ ಅಭ್ಯರ್ಥಿ |
| ವರುಣಾ | ವಿ. ಸೋಮಣ್ಣ | ಸಿದ್ದರಾಮಯ್ಯ | ಅಭಿಷೇಕ್ | ಘೋಷಣೆಯಾಗಿಲ್ಲ |
| ಚಾಮುಂಡೇಶ್ವರಿ | ಕವೀಶ್‌ಗೌಡ | ಸಿದ್ದೇಗೌಡ | ಜಿಟಿ ದೇವೇಗೌಡ | ಘೋಷಣೆಯಾಗಿಲ್ಲ |
| ಹುಣಸೂರು | ದೇವರಹಳ್ಳಿ ಸೋಮಶೇಖರ್ | ಎಚ್‌ಪಿ ಮಂಜುನಾಥ್ | ಹರೀಶ್‌ಗೌಡ | ಘೋಷಣೆಯಾಗಿಲ್ಲ |
| ನರಸೀಪುರ | ||||
| ನಂಜನಗೂಡು | ಹರ್ಷವರ್ಧನ್ | ದರ್ಶನ್ ಧ್ರುವನಾರಾಯಣ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |
| ಪಿರಿಯಾಪಟ್ಟಣ | ಸಿಎಚ್ ವಿಜಯಶಂಕರ್ | ಕೆ. ವೆಂಕಟೇಶ್ | ಕೆ. ಮಹಾದೇವ್ | ರಾಜಶೇಖರ್ ದೊಡ್ಡಣ್ |
| ಕೆಆರ್ ನಗರ | ವೆಂಕಟೇಶ್ | ಡಿ. ರವಿಶಂಕರ್ | ಸಾರಾ ಮಹೇಶ್ | ಘೋಷಣೆಯಾಗಿಲ್ಲ |
| ಎಚ್‌ಡಿ ಕೋಟೆ | ಕೃಷ್ಣ ನಾಯಕ್ | ಅನಿಲ್ ಕುಮಾರ್ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |
| ಕೃಷ್ಣರಾಜ ವಿಧಾನಸಭಾ ಕ್ಷೇತ್ರ | ಘೋಷಣೆಯಾಗಿಲ್ಲ | ಮಲ್ಲೇಶ್ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ |
| ನರಸಿಂಹರಾಜ ವಿಧಾನಸಭಾ ಕ್ಷೇತ್ರ | ಸಂದೇಶ್‌ಸ್ವಾಮಿ | ತನ್ವೀರ್ ಸೇಠ್ | ಘೋಷಣೆಯಾಗಿಲ್ಲ | ಧರ್ಮಶ್ರೀ |
| ಚಾಮರಾಜ ವಿಧಾನಸಭಾ ಕ್ಷೇತ್ರ | ಎಲ್ ನಾಗೇಂದ್ರ | ಘೋಷಣೆಯಾಗಿಲ್ಲ | ಘೋಷಣೆಯಾಗಿಲ್ಲ | ಮಾಳವಿಕ ಗುಬ್ಬಿವಾಣಿ |











Click it and Unblock the Notifications