Kabini Dam: ಭಾರೀ ಮಳೆಗೆ ಒಳಹರಿವು ಹೆಚ್ಚಳ, ಡ್ಯಾಂನಿಂದ 20000 ಕ್ಯೂಸೆಕ್ ನೀರು ಬಿಡುಗಡೆ, ಇಂದಿನ ಮಟ್ಟ?
ಬೆಂಗಳೂರು, ಜುಲೈ 15: ಕರ್ನಾಟಕದ ಮಲೆನಾಡು, ಪಶ್ಚಿಮ ಘಟ್ಟಗಳು ಹಾಗೂ ಕೇರಳ ರಾಜ್ಯದ ಕಣವೆ ಭಾಗದಲ್ಲಿ ವ್ಯಾಪಕ ಮಳೆ ಆಗುತ್ತಿರುವ ಪರಿಣಾಮವಾಗಿ ಕಬಿನಿ ಜಲಾಶಯದಲ್ಲಿ ವ್ಯಾಪಕ ಒಳಹರಿವು ಹೆಚ್ಚಾಗಿದೆ. ವಿಶೇಷವೆಂದರೆ ಹೆಚ್ಚಾಗುತ್ತಿರುವ ಸಾವಿರಾರು ಕ್ಯೂಸೆಕ್ ನೀರಷ್ಟೇ ಹೊರ ಹರಿವು ಇದೆ. ಅಪಾರ ಪ್ರಮಾಣದಲ್ಲಿ ಡ್ಯಾಂ ನಿಂದ ನೀರು ಬಿಡುತ್ತಿರುವ ಕಾರಣ, ಜಲಾನಯನ ಪ್ರದೇಶಗಳಲ್ಲಿ ಪ್ರವಾಹ ಭೀತಿ ಉಂಟಾಗಿದೆ.
ಹೌದು, ರಾಜ್ಯ ಸರ್ಕಾರ ಮೈಸೂರು ವ್ಯಾಪ್ತಿಯಲ್ಲಿರುವ ಕಬಿನಿ ಜಲಾಯಶದಿಂದ ಇಂದು ಸೋಮವಾರ ಜುಲೈ 15ರಂದು ಗರಿಷ್ಠ 2000 ಕ್ಯೂಸೆಕ್ ನೀರನ್ನು ಬಿಡುಗಡೆ ಮಾಡಿದೆ. ಇದಕ್ಕು ಮೊದಲೇ ಯಾವುದೇ ಸಮಯದಲ್ಲಾದರೂ ಗೇಟ್ ಮೂಲಕ ನೀರು ಹೊರ ಬಿಡಬಹುದು, ಸುರಕ್ಷಿತ ಸ್ಥಳಕ್ಕೆ ತೆರಳುವಂತೆ ಕಪಿಲಾ ನದಿ ತೀರ ಪ್ರದೇಶದ ಜನರಿಗೆ ಎಚ್ಚರಿಕೆ ಕೊಡಲಾಗಿತ್ತು.

ಕಪಿಲಾ ನದಿ ಕಾವೇರಿ ನದಿಯ ಉಪನದಿಯಾದ್ದು, ಕೇರಳದಲ್ಲಿ ಹುಟ್ಟಿ, ಅರಣ್ಯ, ಗುಡ್ಡಗಾಡು ಪ್ರದೇಶಗಳ ಮೂಲಕ ರಾಜ್ಯದ ಮೈಸೂರು ಮಾರ್ಗವಾಗಿ ಬಂದು ಕಾವೇರಿ ನದಿ ಸೇರುತ್ತದೆ. ಜಿಲ್ಲೆಯ ಎಚ್‌ಡಿ ಕೋಟೆ ವ್ಯಾಪ್ತಿಯಲ್ಲಿ ನದಿಗೆ ಅಡ್ಡಲಾಗಿ ಕಬಿನಿ ಜಲಾಶಯ ನಿರ್ಮಿಸಲಾಗಿದೆ.
ಇಂದಿನ ಕಬಿನಿ ಜಲಾಶಯದ ಮಟ್ಟ ಎಷ್ಟಿದೆ?
ನಿರಂತರ ಮುಂಗಾರು ಮಳೆ ಸುರಿದ ಪರಿಣಾಮವಾಗಿ ಈ ಜಲಾಶಯದ ಒಟ್ಟು 2284 ಅಡಿ ಪೈಕಿ 2282 ಅಡಿಯಷ್ಟು ನೀರು ಸಂಗ್ರಹವಾಗಿದೆ. ಇನ್ನು ಜಲಾಶಯವು ಒಟ್ಟು 19.52 ಟಿಎಂಸಿ ನೀರು ಸಂಗ್ರಹಿಸುವ ಸಾಮರ್ಥ್ಯ ಹೊಂದಿದ್ದು, ಈವರೆಗೆ ಕಬಿನಿ ಆಣೆಕಟ್ಟಿನಲ್ಲಿ 18.52 ಟಿಎಂಸಿ ಯಷ್ಟು ನೀರು ಸಂಗ್ರಹವಾಗಿದೆ. ಹೀಗಾಗಿ ನೀರು ಹೊರ ಬಿಡಲು ಸರ್ಕಾರ ನಿರ್ಧರಿಸಿದೆ.
ಇನ್ನೂ ರಾಜ್ಯದಲ್ಲಿ ಮುಂಗಾರು ಮಳೆ ಮುಂದುವರಿಯುತ್ತಿದೆ. ಜಲಾಶಯವು ಗರಿಷ್ಠ ಮಟ್ಟ ತಲುಪುತ್ತಿದ್ದು, ನಿಯಮದಂತೆ ನೀರು ಹರಿಸಲಾಗುತ್ತಿದೆ. ಸೋಮವಾರಕ್ಕೆ ನೋಡಿದರೆ ಜಲಾಶಯದ ಒಳಹರಿವು ಒಳಹರಿವು - 14,697 ಕ್ಯೂಸೆಕ್ ಇದ್ದು,

20,000 ಕ್ಯೂಸೆಕ್ ನೀರನ್ನು ನದಿಗೆ ಹೊರ ಬಿಡಲಾಗುತ್ತಿದೆ.
ಜಲಾಶಯದಲ್ಲಿ ಇಂದಿಗೆ ಸುಮಾರು ಶೇಕಡಾ 94.87ರಷ್ಟು ನೀರು ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಮಳೆ ಬರುವ ಪ್ರಯುಕ್ತ ಗರಿಷ್ಠ ಮಟ್ಟದ ನೀರನ್ನು ಉಳಿಸಿಕೊಂಡು ಒಳಹರಿವಿನ ಮೂಲಕ ಸಂಗ್ರಹವಾಗುವ ನೀರನ್ನು ಅಗತ್ಯಕ್ಕೆ ತಕ್ಕಂತೆ ಬಿಡುಗಡೆ ಮಾಡಲಾಗುತ್ತಿದೆ. ಕಳೆದ 24 ಗಂಟೆಯಲ್ಲಿ ಕಬಿನಿ ಜಲಾನಯನ ವ್ಯಾಪ್ತಿಯಲ್ಲಿ 30 ಮಿಲಿ ಮೀಟರ್ ಮಳೆ ದಾಖಲಾಗಿದೆ.












Click it and Unblock the Notifications