407 ನೇ ದಸರಾ ಮಹೋತ್ಸವಕ್ಕೆ ಬಿಗಿ ಭದ್ರತೆ
ಮೈಸೂರು, ಸೆಪ್ಟೆಂಬರ್ 21: ವಿಶ್ವವಿಖ್ಯಾತ ದಸರಾ ಮಹೋತ್ಸವಕ್ಕೆ ಟೈಟ್ ಗರುಡಾ ಫೋರ್ಸ್ ಕಾವಲು ನಿಯೋಜಿಸಲಾಗಿದೆ. ಚಾಮುಂಡಿ ಬೆಟ್ಟದಲ್ಲಿ ಇದೀಗ ಗಸ್ತು ತಿರುಗುತ್ತಿರುವ ಈ ಪಡೆ ದಸರಾ ಮಹೋತ್ಸವದಲ್ಲಿ ಯಾವುದೇ ಉಗ್ರರ ಕರಿನೆರಳು ಬೀಳದಂತೆ, ಜೊತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗೃತಾ ಕ್ರಮವಹಿಸಿದೆ.
ಗರುಡಾ ಫೋರ್ಸ್ ತಂಡದ ಮುಖ್ಯಸ್ಥ ಮಂಜುಕುಮಾರ್ ಮತ್ತು ವೆಂಕಟೇಶ್ ನೇತೃತ್ವದಲ್ಲಿ ಕಾವಲು ಕಾಯಲಾಗುತ್ತಿದೆ. ಈ ತಂಡದಲ್ಲಿ 40ಕ್ಕೂ ಹೆಚ್ಚು ಮಂದಿಯಿದ್ದಾರೆ. ದಸರಾ ಮುಗಿಯುವವರೆಗೂ ನಗರದಲ್ಲಿ ಈ ಪಡೆ ಸರ್ಪಗಾವಲಾಗಿರಲಿದೆ. ಯಾವುದೇ ವಾಹನ ಅಥವಾ ವ್ಯಕ್ತಿಯನ್ನು ತಪಾಸಣೆಗೊಳಪಡಿಸಿ, ಪ್ರಶ್ನಿಸುವ ಅಧಿಕಾರವನ್ನು ಈ ಪಡೆ ಹೊಂದಿದ್ದು, ಯಾರೂ ಅವರ ಬಳಿ ಕ್ಯಾತೆ ತೆಗೆಯುವಂತಿಲ್ಲ.
Recommended Video


ದಸರಾ ಭದ್ರತೆಗಾಗಿ 5056 ಪೊಲೀಸರನ್ನು ನಿಯೋಜನೆ ಮಾಡಲಾಗಿದ್ದು, ಕ್ಷಿಪ್ರ ಕಾರ್ಯಚರಣೆಗೆ 70 ಕಮಾಂಡೋ ಪಡೆ ಸಹ ನಿಯೋಜನೆಗೊಂಡಿದೆ. 60 ಕೆಎಸ್ ಆರ್ ಪಿ ಹಾಗೂ ಸಿಆರ್/ಡಿಆರ್ ತುಕಡಿಗಳು, 49 ಭದ್ರತಾ ತಪಾಸಣಾ ಪಡೆಗಳ 1600 ಹೋಂ ಗಾರ್ಡ್ಸ್ ನಿಯೋಜನೆ ಮಾಡಲಾಗಿದೆ.












Click it and Unblock the Notifications