ಮೈಸೂರು ಜಿಲ್ಲೆಗೆ ವಿದ್ಯಾವಂತ ಶಾಸಕರು, ಇಲ್ಲಿದೆ ಹೆಚ್ಚಿನ ಮಾಹಿತಿ

ಮೈಸೂರು, ಮೇ 15: ಮೈಸೂರು ಜಿಲ್ಲೆಯ ಒಟ್ಟು 11 ಕ್ಷೇತ್ರದ ಪೈಕಿ ಐದು ಕ್ಷೇತ್ರಗಳಲ್ಲಿ ಹೊಸಬರು ಶಾಸಕರಾಗಿ ಆಯ್ಕೆಯಾಗಿದ್ದಾರೆ. ಆ ಮೂಲಕ ಐವರು ಹೊಸಬರು ವಿಧಾನಸಭೆಯನ್ನು ಪ್ರವೇಶಿಸುತ್ತಿದ್ದಾರೆ. ಈ ಎಲ್ಲಾ ಅಭ್ಯರ್ಥಿಗಳು ಪದವೀಧರರು ಎನ್ನುವುದೇ ವಿಶೇಷ.

ಹುಣಸೂರಲ್ಲಿ ಜಿ.ಡಿ.ಹರೀಶ್‌ಗೌಡ, ನಂಜನಗೂಡಿನಲ್ಲಿ ದರ್ಶನ್ ಧ್ರುವನಾರಾಯಣ್, ಕೃಷ್ಣರಾಜದಲ್ಲಿ ಟಿ.ಎಸ್.ಶ್ರೀವತ್ಸ, ಕೆ.ಆರ್.ನಗರದಲ್ಲಿ ಡಿ.ರವಿಶಂಕರ್ ಹಾಗೂ ಚಾಮರಾಜದಲ್ಲಿ ಕೆ.ಹರೀಶ್‌ಗೌಡ ಅವರು ಜಯಭೇರಿ ಬಾರಿಸಿದ್ದಾರೆ. ಇದರಲ್ಲಿ ಜಿ.ಡಿ.ಹರೀಶ್‌ಗೌಡ, ದರ್ಶನ್ ಧ್ರುವನಾರಾಯಣ್, ಟಿ.ಎಸ್.ಶ್ರೀವತ್ಸ ಅವರು ಮೊದಲ ಪ್ರಯತ್ನದಲ್ಲೇ ಶಾಸಕರಾಗಿ ಚುನಾಯಿತರಾದರೆ, ರವಿಶಂಕರ್ ಹಾಗೂ ಹರೀಶ್‌ಗೌಡ ತಮ್ಮ ಎರಡನೇ ಪ್ರಯತ್ನದಲ್ಲಿ ಯಶಸ್ಸು ಕಂಡಿದ್ದಾರೆ.

Educated MLAs Elected In Mysuru

ಕೆ.ಹರೀಶ್‌ಗೌಡ ಬಿಎ ಪದವೀಧರ

ಚಾಮರಾಜ ವಿಧಾನಸಭಾ ಕ್ಷೇತ್ರದ ನೂತನ ಶಾಸಕರಾದ ಕೆ.ಹರೀಶ್ ಗೌಡ ಅವರು ಮಹಾರಾಜ ಕಾಲೇಜಿನಲ್ಲಿ ಬಿ.ಎ. ವ್ಯಾಸಂಗ ಮಾಡಿದ್ದಾರೆ. ಚಾಮರಾಜ ಕ್ಷೇತ್ರದಲ್ಲಿ ಕಳೆದ ಬಾರಿ ಜೆಡಿಎಸ್‌ನಿಂದ ಟಿಕೆಟ್ ವಂಚಿತರಾಗಿ ಬಂಡೆದ್ದು ಪಕ್ಷೇತರರಾಗಿ ನಿಂತು ಸೋತಿದ್ದ ಕೆ.ಹರೀಶ್ ಗೌಡ ಈ ಬಾರಿ ಕಡಿಮೆ ಅಂದರೆ 4,094 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ.

Educated MLAs Elected In Mysuru

ಎಲ್ಎಲ್‌ಬಿ ಪದವೀಧರ ದರ್ಶನ್ ಧ್ರುವನಾರಾಯಣ್

ನಂಜನಗೂಡು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ದರ್ಶನ್ ಧ್ರುವನಾರಾಯಣ್ ಅವರು 2020ರಲ್ಲಿ ಲಂಡನ್‌ನಲ್ಲಿ ಸಾರ್ವಜನಿಕ ನೀತಿ ವಿಷಯದಲ್ಲಿ ಎಂಎಸ್‌ಸಿ ಪದವಿ ಹಾಗೂ 2018ರಲ್ಲಿ ಬೆಂಗಳೂರಿನ ಕ್ರೈಸ್ಟ್ ವಿವಿಯಲ್ಲಿ ಬಿಎ, ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. 28 ವರ್ಷದ ದರ್ಶನ್ ಜಿಲ್ಲೆಯಲ್ಲೇ ಅತಿ ಕಿರಿಯ ಶಾಸಕ ಎಂಬ ಹೆಗ್ಗಳಿಕೆಯನ್ನೂ ಪಡೆದುಕೊಂಡಿದ್ದಾರೆ.

Educated MLAs Elected In Mysuru

ಬಿಕಾಂ ಪದವೀಧರ ಶ್ರೀವತ್ಸ

ಇಡೀ ಮೈಸೂರು ಜಿಲ್ಲೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಗೆದ್ದಿರುವ ಏಕೈಕ ಶಾಸಕ ಎಂದರೆ ಅದು ಕೃಷ್ಣರಾಜ ಕ್ಷೇತ್ರದ ನೂತನ ಶಾಸಕ ಟಿ.ಎಸ್.ಶ್ರೀವತ್ಸ. 1988ರಿಂದ ಸಾಮಾನ್ಯ ಕಾರ್ಯಕರ್ತರಾಗಿ ತಳಮಟ್ಟದಿಂದ ಪಕ್ಷ ಸಂಘಟನೆ ಕೆಲಸ ಮಾಡಿರುವ 56 ವರ್ಷದ ಶ್ರೀವತ್ಸ ಅವರು ನಗರದ ಬನುಮಯ್ಯ ಕಾಲೇಜಿನಲ್ಲಿ ಬಿ.ಕಾಂ ಪದವಿ ಪಡೆದಿದ್ದಾರೆ.

ಎಲ್‌ಎಲ್‌ಬಿ ಪದವೀಧರ ಡಿ.ರವಿಶಂಕರ್

ಕೆ.ಆರ್.ನಗರದಲ್ಲಿ ಮೊದಲ ಬಾರಿ ಜೆಡಿಎಸ್ ಪ್ರಭಾವಿ ನಾಯಕ ಸಾ.ರಾ.ಮಹೇಶ್ ವಿರುದ್ಧ ಸೋತಿದ್ದ ಕಾಂಗ್ರೆಸ್ ಡಿ.ರವಿಶಂಕರ್, ಎರಡನೇ ಪ್ರಯತ್ನದಲ್ಲಿ ಗೆಲುವಿನ ಸಿಹಿ ಸವಿದಿದ್ದಾರೆ. ಕಳೆದ ಬಾರಿ 1,779 ಮತಗಳಿಂದ ಸೋತಿದ್ದ ಇವರು, ಈ ಬಾರಿ 25 ಸಾವಿರಕ್ಕೂ ಅಧಿಕ ಮತಗಳ ಅಂತರದ ಗೆಲುವು ದಾಖಲಿಸಿದ್ದಾರೆ.

ಬಿಇ ಪದವೀಧರ ಜಿ.ಡಿ.ಹರೀಶ್‌ಗೌಡ

ಹುಣಸೂರು ವಿಧಾನಸಭಾ ಕ್ಷೇತ್ರದ ನೂತನ ಶಾಸಕ ಜಿ.ಡಿ.ಹರೀಶ್ ಗೌಡ ಮೈಸೂರಿನ ನ್ಯಾಷನಲ್ ಇನ್ಸ್ಟಿಟ್ಯೂಟ್ ಆ್ ಎಂಜಿನಿಯರಿಂಗ್ (ಎನ್‌ಐಇ) ಕಾಲೇಜಿನಲ್ಲಿ ಬಿ.ಇ ಪದವಿ ಪಡೆದಿದ್ದಾರೆ. ಹುಣಸೂರು ಕ್ಷೇತ್ರದಲ್ಲಿ ಹ್ಯಾಟ್ರಿಕ್ ಶಾಸಕ ಕಾಂಗ್ರೆಸ್‌ನ ಎಚ್.ಪಿ.ಮಂಜುನಾಥ್ ಅವರನ್ನು ಮಣಿಸಿ ಈ ಬಾರಿ ಕ್ಷೇತ್ರದ ಶಾಸಕರಾಗಿ ಜನಾಶೀರ್ವಾದ ಪಡೆದಿದ್ದಾರೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+