ವರುಣಾ-ಟಿ ನರಸೀಪುರದಲ್ಲಿ ಸಿಎಂ ಬೊಮ್ಮಾಯಿ ರೋಡ್ ಶೋ: ಜಡ್ಡುಗಟ್ಟಿದ ಆಡಳಿತ ಕೊನೆ ಮಾಡಿ
ಮೈಸೂರು, ಮೇ 05: ಜಿಲ್ಲೆಯ ವರುಣಾ ಮತ್ತು ಟಿ. ನರಸಿಪುರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಸಿಎಂ ಬಸವರಾಜ ಬೊಮ್ಮಾಯಿ ಜೋರು ಪ್ರಚಾರ ನಡೆಸಿದರು. ವರುಣ ಮತ್ತು ಟಿ.ನರಸಿಪುರದಲ್ಲಿನ ಜಿಡ್ಡುಗಟ್ಟಿದ ಆಡಳಿತ ಬದಲಾವಣೆ ಆಗಬೇಕಿದೆ ಎಂದು ಅವರು ಹೇಳಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.
ಶುಕ್ರವಾರ ವರುಣ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ವಿ. ಸೋಮಣ್ಣ ಹಾಗೂ ಟಿ. ನರಸಿಪುರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಡಾ. ರೇವಣ್ಣ ಅವರ ಪರವಾಗಿ ರೋಡ್ ಶೋ ನಡೆಸಿದ ಮುಖ್ಯಮಂತ್ರಿಗಳು ನಂತರ ಬಹಿರಂಗ ಸಭೆಯಲ್ಲಿ ಮಾತನಾಡಿದರು.

ವರುಣ ಕ್ಷೇತ್ರ ವರ್ಣಮಯ ಆಗಿದೆ. ರೈತರು, ಯುವಕರು, ಮಹಿಳೆಯರು ಎಲ್ಲರೂ ಸೇರಿ ಸೋಮಣ್ಣ ಅವರನ್ನು ಗೆಲ್ಲಿಸಿಕೊಂಡು ಬರಲು ಒಟ್ಟಾಗಿರುವುದರಿಂದ ಈ ಕ್ಷೇತ್ರ ವರ್ಣಮಯ ಆಗಿದೆ ಎಂದು ಅವರು ಬಣ್ಣಿಸಿದರು.
ಪ್ರತಿನಿತ್ಯ ವಿ.ಸೋಮಣ್ಣ ಅವರು ಬೆಳಗ್ಗೆ ಐದು ಗಂಟೆಗೆ ಎದ್ದು ಸೇವೆ ಆರಂಭಿಸುತ್ತಾರೆ. ಐದು ಗಂಟೆಗೆ ಎದ್ದು ಸೇವೆ ಮಾಡುವ ಸೋಮಣ್ಣ ಬೇಕಾ? ಬೇಡ್ವಾ, ಈ ಕ್ಷೇತ್ರದಲ್ಲಿ ಬದಲಾವಣೆ ಆಗಬೇಕಿದೆ. ಚಾಮರಾಜನಗರ, ಮೈಸೂರು ಅಭಿವೃದ್ಧಿ ಮಾಡಲು ಸೋಮಣ್ಣ ಬಂದಿದ್ದಾರೆ.
ವರುಣಾ ಕ್ಷೇತ್ರದಲ್ಲಿ ಒಂದೇ ಒಂದು ತಾಲ್ಲೂಕು ಕೇಂದ್ರ ಇಲ್ಲ. ಈ ಜಿಡ್ಡುಗಟ್ಟಿದ ಆಡಳಿತ ಎಷ್ಟು ದಿನ ಸಹಿಸಿಕೊಳ್ಳುತ್ತಿರಿ. ಯಾವ ನಾಯಕರು ಇಷ್ಟು ವರ್ಷ ಸೇವೆ ಮಾಡಿದ್ದಾರೆ. ಯಾವ ನಾಯಕ ಎಲ್ಲ ಜನರನ್ನು ತೆಗೆದುಕೊಂಡು ಹೋಗುವ ಶಕ್ತಿ ಇದೆ, ಆ ನಾಯಕರನ್ನು ನಾವು ಇಲ್ಲಿ ತಂದು ನಿಲ್ಲಿಸಿದ್ದೇವೆ ಎಂದು ವಿವರಿಸಿದರು.

ಬಹುಮತದಿಂದ ಬಿಜೆಪಿ ಗೆಲ್ಲಲು ಮತ ನೀಡಿ
ಟಿ. ನರಸಿಪುರ ಕ್ಷೇತ್ರದ ಅಭ್ಯರ್ಥಿ ಡಾ. ರೇವಣ್ಣ ಅವರು ವೈದ್ಯ ವೃತ್ತಿ ಮಾಡಿ ಜನರ ಸೇವೆ ಮಾಡಿದ್ದಾರೆ. ಜನರ ಕಾಳಜಿ ಇರುವ ವೈದ್ಯರನ್ನು ಈ ಕ್ಷೇತ್ರದಲ್ಲಿ ನಿಲ್ಲಿಸಿದ್ದೇವೆ. ಆಯ್ಕೆ ನಿಮ್ಮದು. ಮನೆಯಲ್ಲಿಯೇ ಕುಳಿತು ಆದೇಶ ಮಾಡುವ ಶಾಸಕರು ಬೇಕಾ? ನೀವು ಯಾವಾಗ ಕರೆದರೂ ನಿಮ್ಮ ಸೇವೆಗೆ ರೇವಣ್ಣನವರು ಬರುತ್ತಾರೆ. ಎಲ್ಲ ಕಾರ್ಯಕರ್ತರು ಕನಿಷ್ಟ 10 ಮತಗಳನ್ನು ಹಾಕಿಸಿದರೆ, ರೇವಣ್ಣ 10 ಸಾವಿರ ಮತಗಳ ಅಂತರದಿಂದ ಗೆಲ್ಲುತ್ತಾರೆ ಎಂದು ಮತಯಾಚಿಸಿದರು.
ಬಿಜೆಪಿ ಅಭ್ಯರ್ಥಿಯಾದ ವಿ. ಸೋಮಣ್ಣನವರು ವಿಕ್ಟರಿ ಸೋಮಣ್ಣ ಎಂದು ಹೆಸರು ಪಡೆದವರು. ಇಲ್ಲಿ ಆಡಳಿತ ನಡೆಸಿದವರು ಜಿಡ್ಡುಗಟ್ಟಿದ ಆಡಳಿತ ನೀಡಿದ್ದಾರೆ. ನೀವು ಸೋಮಣ್ಣ ಅವರನ್ನು ಗೆಲ್ಲಿಸಿದರೆ, ಸಮೃದ್ಧಿಯ ಸುಭೀಕ್ಷ ಸರ್ಕಾರ ಬರಲಿದೆ. ನಿಮ್ಮೆಲ್ಲೆರ ಆಶೀರ್ವಾದ ಇರಲಿ ಎಂದು ಹೇಳಿದರು.
ಗುರುವಾರ ವಷ್ಟೇ ವಿಪಕ್ಷ ನಾಯಕ ಸಿದ್ದರಾಮಯ್ಯ ಪರ ಮಾಜಿ ಸಂಸದೇ ಮೋಹಕ ತಾರೆ ರಮ್ಯಾ, ಹ್ಯಾಟ್ರೀಕ್ ಹೀರೋ ಶಿವರಾಜ್ ಕುಮಾರ್, ಮಧು ಬಂಗಾರಪ್ಪ, ನಟಿ ನಿಶ್ವಿಕಾ ನಾಯ್ಡು ಸೇರಿದಂತೆ ನಟ ನಟಿಯರು, ಮುಖಂಡರು ವರುಣಾದಲ್ಲಿ ಮತಯಾಚಿಸಿದ್ದರು. ಶಿವಣ್ಣನವರ ಪ್ರಚಾರಕ್ಕೆ ಬಿಜೆಪಿ ವಿರೋಧ ವ್ಯಕ್ತಪಡಿಸಿತ್ತು.












Click it and Unblock the Notifications