• search
  • Live TV
ಮೈಸೂರು ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮೈಸೂರು ರಾಜಕೀಯದಲ್ಲಿ ಸಂಚಲನ ಮೂಡಿಸುವುದೇ ದೇವೇಗೌಡ್ರ ನಡೆ?

|
Google Oneindia Kannada News

ಬಿಜೆಪಿ ಸರಕಾರ ಪತನಗೊಳ್ಳದಿದ್ದರೆ, ಮುಂಬರುವ ಅಸೆಂಬ್ಲಿ ಚುನಾವಣೆಗೆ ಇನ್ನೂ ಎರಡು ವರ್ಷವಿದೆ. 2023ರಲ್ಲಿ ನಡೆಯುವ ಚುನಾವಣೆಗೆ ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡ್ರು, ಸದ್ದಿಲ್ಲದೇ ಪೂರ್ವತಯಾರಿ ಆರಂಭಿಸಿದ್ದಾರೆ.

ಪಕ್ಷದ ಅಭ್ಯರ್ಥಿ ಗೆಲುವು ಸಾಧಿಸಲು ಜೆಡಿಎಸ್ ಪಾಲಿಗೆ ಅತಿ ಮುಖ್ಯವಾಗಿರುವ ಕಾವೇರಿ ಕಣಿವೆ ಭಾಗದ ಜಿಲ್ಲೆಗಳಲ್ಲಿ, ಮತ್ತೆ ಪಕ್ಷದ ಗತವೈಭವವನ್ನು ತರುವಲ್ಲಿ ಗೌಡ್ರು ಕಾರ್ಯೋನ್ಮುಖರಾಗಿದ್ದಾರೆ.

ನಾಯಕತ್ವ ಬದಲಾವಣೆಯ ಗುಸುಗುಸು ನಡುವೆ ಬಿಎಸ್ವೈ ಭರ್ಜರಿ ರಣತಂತ್ರನಾಯಕತ್ವ ಬದಲಾವಣೆಯ ಗುಸುಗುಸು ನಡುವೆ ಬಿಎಸ್ವೈ ಭರ್ಜರಿ ರಣತಂತ್ರ

ಅದರ ಭಾಗವಾಗಿ, ಪಕ್ಷದಲ್ಲಿ ಇದ್ದೂ ಇಲ್ಲದಂತಿರುವವರು ಮತ್ತು ನಾನಾ ಕಾರಣಗಳಿಂದ ಪಕ್ಷ ತೊರೆದವರನ್ನು ಮತ್ತೆ ಜೆಡಿಎಸ್ಸಿಗೆ ವಾಪಸ್ ಕರೆಸಿಕೊಳ್ಳುವ ಸಲುವಾಗಿ, ಮುಖಂಡರ ಮನವೊಲಿಕೆ ಕೆಲಸವನ್ನು ಗೌಡ್ರು ಆರಂಭಿಸಿದ್ದಾರೆ.

 ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುರಿತು ನೀವರಿಯದ ವಿಚಾರಗಳಿವು! ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡರ ಕುರಿತು ನೀವರಿಯದ ವಿಚಾರಗಳಿವು!

ಅದರಂತೇ, ಮೈಸೂರು ಭಾಗದ ಪ್ರಮುಖ ಮತ್ತು ಪ್ರಭಾವೀ ನಾಯಕ ಜಿ.ಟಿ.ದೇವೇಗೌಡ್ರ ಜೊತೆಗೆ ದೊಡ್ಡ ಗೌಡ್ರು ದೂರವಾಣಿ ಮೂಲಕ ಮಾತುಕತೆ ನಡೆಸಿದ್ದಾರೆ. ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಮುನಿಸಿನಿಂದ ಜಿಟಿಡಿ, ಪಕ್ಷದ ಚಟುವಟಿಕೆಯಿಂದ ದೂರವಾಗಿದ್ದರು.

 ಸಿದ್ದರಾಮಯ್ಯನವರನ್ನೇ ಸೋಲಿಸಿದ್ದ ಜಿ.ಟಿ.ದೇವೇಗೌಡ

ಸಿದ್ದರಾಮಯ್ಯನವರನ್ನೇ ಸೋಲಿಸಿದ್ದ ಜಿ.ಟಿ.ದೇವೇಗೌಡ

ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಮುಖ್ಯಮಂತ್ರಿಯಾಗಿದ್ದ ಸಿದ್ದರಾಮಯ್ಯನವರನ್ನೇ ಸೋಲಿಸಿದ್ದ ಜಿ.ಟಿ.ದೇವೇಗೌಡ, ನಂತರದ ದಿನಗಳಲ್ಲಿ ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಜೊತೆಗಿನ ಮನಸ್ತಾಪದಿಂದ ದೂರವುಳಿದಿದ್ದರು. ಜೊತೆಗೆ, ಜಿಟಿಡಿ ಮತ್ತು ಎಚ್ಡಿಕೆ ನಡುವಿನ ಅಂತರ ಹೆಚ್ಚಾಗುತ್ತಲೇ ಬರುತ್ತಿತ್ತು. ಈಗ, ಗೌಡ್ರು, ಅವರ ಮನವೊಲಿಸುವ ಕೆಲಸಕ್ಕೆ ಮುಂದಾಗಿದ್ದಾರೆ.

 ದೇವೇಗೌಡ್ರು ದೂರವಾಣಿ ಮೂಲಕ ಜಿ.ಟಿ.ದೇವೇಗೌಡ್ರ ಜೊತೆ ಮಾತುಕತೆ

ದೇವೇಗೌಡ್ರು ದೂರವಾಣಿ ಮೂಲಕ ಜಿ.ಟಿ.ದೇವೇಗೌಡ್ರ ಜೊತೆ ಮಾತುಕತೆ

ಎರಡು ದಿನಗಳ ಹಿಂದೆ ದೇವೇಗೌಡ್ರು ದೂರವಾಣಿ ಮೂಲಕ ಜಿ.ಟಿ.ದೇವೇಗೌಡ್ರ ಜೊತೆ ಮಾತುಕತೆ ನಡೆಸಿದ್ದಾರೆ. ಯಾವುದೇ ಕಾರಣಕ್ಕೂ ಪಕ್ಷ ಬಿಡುವ ನಿರ್ಧಾರಕ್ಕೆ ಬರಬಾರದು ಎಂದು ಮನವೊಲಿಕೆ ಮಾಡಿದ್ದಾರೆ. ಜಿಟಿಡಿ ಕೂಡಾ ಗೌಡ್ರ ಮಾತಿಗೆ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಹೇಳಲಾಗುತ್ತಿದೆ.

 ದೇವೇಗೌಡ್ರೇ ಖುದ್ದಾಗಿ ಮಾತನಾಡಿರುವುದರಿಂದ, ಜಿಟಿಡಿ ಸಕಾರಾತ್ಮಕವಾಗಿ ಸ್ಪಂದನೆ

ದೇವೇಗೌಡ್ರೇ ಖುದ್ದಾಗಿ ಮಾತನಾಡಿರುವುದರಿಂದ, ಜಿಟಿಡಿ ಸಕಾರಾತ್ಮಕವಾಗಿ ಸ್ಪಂದನೆ

ಕುಮಾರಸ್ವಾಮಿ ಜೊತೆಗಿನ ಮನಸ್ತಾಪವನ್ನು ಸರಿ ಪಡಿಸುವುದು, ಜಿಟಿಡಿ ಮತ್ತು ಅವರ ಮಗನಿಗೆ ಅನ್ಯಾಯವಾಗದಂತೆ ನೋಡಿಕೊಳ್ಳುವುದು ಈ ರೀತಿಯ ಭರವಸೆಯನ್ನು ದೇವೇಗೌಡ್ರು, ಜಿಟಿಡಿಗೆ ನೀಡಿದ್ದಾರೆ ಎಂದು ತಿಳಿದು ಬಂದಿದೆ. ದೇವೇಗೌಡ್ರೇ ಖುದ್ದಾಗಿ ಮಾತನಾಡಿರುವುದರಿಂದ, ಜಿಟಿಡಿ ಕೂಡಾ ಇದಕ್ಕೆ ಪೂರಕವಾಗಿ ಸ್ಪಂದಿಸಿದ್ದಾರೆ.

 ಜಿ.ಟಿ.ದೇವೇಗೌಡ್ರ ಬಣವನ್ನು ಸೋಲಿಸಲು ಕುಮಾರಸ್ವಾಮಿ ಮೈಸೂರಿನಲ್ಲೇ ಠಿಕಾಣಿ

ಜಿ.ಟಿ.ದೇವೇಗೌಡ್ರ ಬಣವನ್ನು ಸೋಲಿಸಲು ಕುಮಾರಸ್ವಾಮಿ ಮೈಸೂರಿನಲ್ಲೇ ಠಿಕಾಣಿ

ಕೆಲವು ತಿಂಗಳ ಹಿಂದೆ ನಡೆದ ಮೈಮೂಲ್ ಚುನಾವಣೆಯಲ್ಲಿ ಜಿ.ಟಿ.ದೇವೇಗೌಡ್ರ ಬಣವನ್ನು ಸೋಲಿಸಲು ಕುಮಾರಸ್ವಾಮಿ ಮೈಸೂರಿನಲ್ಲೇ ಠಿಕಾಣಿ ಹೂಡಿದ್ದರು. ಎಚ್ಡಿಕೆ ಯಾವುದೇ ಪ್ರಯತ್ನ ಫಲಕೊಡದೇ ಜಿಟಿಡಿ ಬಣ ಭರ್ಜರಿ ಜಯವನ್ನು ದಾಖಲಿಸಿತ್ತು. ಈಗ, ದೇವೇಗೌಡ್ರ ಮನವೊಲಿಕೆ ಕಾರ್ಯ ಪಕ್ಷಕ್ಕೆ ಯಾವರೀತಿ ಮುಂದಿನ ದಿನಗಳಲ್ಲಿ ಉಪಯೋಗವಾಗಲಿದೆ ಎನ್ನುವುದನ್ನು ಕಾದು ನೋಡಬೇಕಿದೆ

English summary
JDS Supremo HD Devegowda Active in Mysuru Politics to Make Party Stronger. Know more.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X